ಈ ರಕ್ತದ ಗುಂಪಿನವರೇ ಎಚ್ಚರ, ಕೊರೋನಾ ನಿಮ್ಮನ್ನು ಬಲುಬೇಗ ಪ್ರೀತಿಸ್ಬಹುದು!

By Suvarna NewsFirst Published Mar 18, 2020, 9:23 PM IST
Highlights

ಜೋರಾಗುತ್ತಿರುವ ಕೊರೋನಾ ಕಾಟ/ ಯಾವ ರಕ್ತದ ಗುಂಪಿನವರಿಗೆ ಹೆಚ್ಚಿನ ಆತಂಕ/ ಚೀನಾದಲ್ಲಿ ಈ ಬಗ್ಗೆಯೂ ಒಂದು ಅಧ್ಯಯನ ನಡೆದಿದೆ/ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು

ಬೀಜಿಂಗ್(ಮಾ. 18)   ಕರ್ನಾಟಕದಲ್ಲಿ ಕೊರೋನಾ ಸೋಕಿತರ ಸಂಖ್ಯೆ 14ಕ್ಕೆ ಏರಿದೆ. ಇದು ಬುಧವಾರ ಮಧ್ಯಾಹ್ನದ ಲೆಕ್ಕ. ಕೊರೋನಾ ಭಯಕ್ಕೆ ಷೇರು ಮಾರುಕಟ್ಟೆ ಕುಸಿತ ಮುಂದುವರಿದೇ ಇದೆ. ಚಿನ್ನ-ಬೆಳ್ಳಿ ದರಗಳಲ್ಲಿಯೂ ಇಳಿಕೆ ಕಂಡು ಬಂದಿದೆ. ಇದೆಲ್ಲದರ ನಡುವೆ ಮತ್ತೊಂದಿಷ್ಟು ಆಯಾಮಗಳಲ್ಲಿಯೂ ಕೊರೋನಾ ಚರ್ಚೆ ನಡೆಯುತ್ತಿದೆ.

ಯಾವ ರಾಶಿಯವರಿಗೆ ಕೊರೋನಾ ಬರುತ್ತದೆ ಎಂದು ಜೋತಿಷ್ಯ ಫಲದ ವಿಚಾರ ಗಮನ ಸೆಳೆದಿತ್ತು. ಈಗ ವೈಜ್ಞಾನಿಕ ಲೆಕ್ಕಾಚಾರವೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. 

ನಿಮ್ ರಕ್ತದ ಗುಂಪು ಯಾವುದು? ಯಾವ ರಕ್ತದ ಗುಂಪಿನವರು ಕೊರೋನಾ ದಾಳಿಗೆ ಸುಲಭವಾಗಿ ತುತ್ತಾಗುತ್ತಾರೆ ಎಂಬ ಅಧ್ಯಯನವೊಂದು ನಡೆದಿದೆ.

'ಕೊರೋನಾ; ರಾತ್ರಿ 10 ರಿಂದ ಬೆಳಗ್ಗೆ 5 ರವೆರೆಗೆ ಬೆಂಗ್ಳೂರಿಗರು ಹೊರಬರಂಗಿಲ್ಲ' Fact Check

ಎ ರಕ್ತದ ಗುಂಪಿನವರು ಎಚ್ಚರಿಕೆಯಿಂದ ಈ ಸುದ್ದಿ ಓದಬೇಕು. ಇತರ ರಕ್ತ ಗುಂಪಿನ ಪ್ರಕಾರಗಳಿಗೆ ಹೋಲಿಸಿದರೆ ಎ ರಕ್ತದ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ತಗುಲುವ ಅಪಾಯ ಹೆಚ್ಚು.

ವಿಜ್ಞಾನಿಗಳು ವುಹಾನ್ ಮತ್ತು ಶೆನ್ಜೆನ್‌ನಲ್ಲಿ  ಕೋವಿಡ್-19 ಪೀಡಿತ 2,000 ರೋಗಿಗಳ ರಕ್ತದ ಮಾದರಿಗಳನ್ನು ತೆಗೆದುಕೊಂಡಿದ್ದರು. ಸೋಂಕು ಪೀಡಿತ ಜನರ ರಕ್ತ ಗುಂಪಿನ ಮಾದರಿಗಳನ್ನು ಪರಿಶೀಲಿಸಿದರು ಮತ್ತು ಆ ರಕ್ತದ ಮಾದರಿಗಳನ್ನು ಇತರೆ ಜನರ ರಕ್ತದ ಗುಂಪಿನ ಜತೆ ಹೋಲಿಸಿ ನೋಡಿ ಈ ತೀರ್ಮಾನಕ್ಕೆ ಬಂದಿದ್ದಾರೆ.

ವುಹಾನ್‌ನಲ್ಲಿ ವೈರಸ್‌ಗೆ ಬಲಿಯಾದ 206 ಕೋವಿಡ್ -19 ರೋಗಿಗಳಲ್ಲಿ 85 ಮಂದಿ ರಕ್ತದ ಪ್ರಕಾರ 'ಎ' ಗೆ ಸೇರಿದವರು. ಇದು ವೈರಸ್‌ನಿಂದ ಮೃತಪಟ್ಟ ರಕ್ತದ 'ಒ' ಮಾದರಿ ಹೊಂದಿರುವ ರೋಗಿಗಳ ಸಂಖ್ಯೆಗಿಂತ ಶೇಕಡಾ 63 ರಷ್ಟು ಹೆಚ್ಚಾಗಿದೆ ಎಂಬುದೇ ಆತಂಕ ತರುವ ಅಂಶ.

ಏನಾದರಾಗಲಿ ಆ ಗುಂಪು. ಈ ಗುಂಪು ಅಂಥ  ಇಲ್ಲ ಎಲ್ಲರೂ ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕಾದದ್ದೂ ಇಂದಿನ ಆದ್ಯತೆ ಮತ್ತು ಅಗತ್ಯ. ನೀವು ಸ್ವಚ್ಛವಾಗಿರಿ ನಿಮ್ಮ ಸುತ್ತಿಲಿನ ಪರಿಸರವನ್ನು ಸ್ವಚ್ಛವಾಗಿಡಿ.

click me!