
ಬೀಜಿಂಗ್[ಮಾ.18]: ಕೊರೋನಾ ವೈರಸ್ನ ಕೇಂದ್ರ ಸ್ಥಾನ ಎನಿಸಿಕೊಂಡಿದ್ದ ಚೀನಾದ ವುಹಾನ್ನಗರದಲ್ಲಿ ಈಗ ಕೊರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಸೋಮವಾರ ಹೊಸದಾಗಿ ಒಂದೇ ಒಂದು ಪ್ರಕರಣ ಮಾತ್ರವೇ ದಾಖಲಾಗಿದೆ.
ಇದೇ ವೇಳೆ ಚೀನಾದೆಲ್ಲೆಡೆ ಹೊಸದಾಗಿ 13 ಪ್ರಕರಣಗಳು ದೃಢ ಪಟ್ಟಿದ್ದು, 13 ಮಂದಿ ಸೋಮವಾರ ಕೊರೋನಾಗೆ ಬಲಿ ಆಗಿದ್ದಾರೆ. ಇದುವರೆಗೆ ಒಟ್ಟು 3,226 ಮಂದಿ ಸಾವಿಗೀಡಾಗಿದ್ದಾರೆ.
ಕೊರೋನಾದ ಕೇಂದ್ರವಾಗಿದ್ದ ವುಹಾನ್ ಮತ್ತು ಹುಬೈ ಪ್ರಾಂತ್ಯದಲ್ಲಿ ಸುಮಾರು 5 ಕೋಟಿ ಜನಸಂಖ್ಯೆ ಇದೆ. ಕೊರೋನಾ ವೈರಸ್ ಪತ್ತೆ ಆದ ಬಳಿಕ ಈ ಎರಡು ನಗರಗಳನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಲಾಗಿತ್ತು. ಈ ಎರಡು ಪ್ರಾಂತ್ಯಗಳಲ್ಲಿ ಒಟ್ಟು 67,799 ಮಂದಿಗೆ ಕೊರೋನಾ ಸೋಂಕು ತಗುಲಿದೆ. 2,243 ಜನರ ಸ್ಥಿತಿ ಗಂಭೀರವಾಗಿದೆ. ಉಳಿದ 539 ಜನರ ಸ್ಥಿತಿ ತೀರಾ ಗಂಭೀರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ