ನವದೆಹಲಿ [ಮಾ.18]: ಎಲ್ಲೆಡೆ ಇದೀಗ ಕೊರೋನಾ ಎಂಬ ಮಹಾಮಾರಿ ತನ್ನ ಆರ್ಭಟ ಮೆರೆಯುತ್ತಿದೆ. ವಿಶ್ವದಾದ್ಯಂತ ಸಾವಿರಾರು ಜೀವಗಳನ್ನು ಬಲಿಪಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಟಿಕ್ ಟಾಕ್ ನಲ್ಲಿ ಹೊಸ ಸವಾಲೊಂದು ಟ್ರೆಂಡ್ ಆಗುತ್ತಿದೆ. ಅದೇ #Coronachallenge
ಕೊರೋನಾ ಚಾಲೇಂಜ್ ಮೊದಲು ಮಾಡಿದ್ದು ಆವಾ ಲೂಯಿಸ್ ಎನ್ನುವ ಮಹಿಳೆ. ಆವಾ ಮಾಡಿರುವ ವೈರಲ್ ಆಗುತ್ತಿದ್ದಂತೆ ಇನ್ನೋರ್ವ ಯುವತಿ ಈ ಚಾಲೇಂಜ್ ಸ್ವೀಕರಿಸಿದ್ದು, ಆಕೆಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
22 ವರ್ಷದ ಮಿಯಾಮಿ ಎನ್ನುವ ಮಾಡೆಲ್ #Coronachallenge ಹೆಸರಿನಲ್ಲಿ ವಿಮಾನದ ಟಾಯ್ಲೆಟ್ ಸೀಟ್ ನೆಕ್ಕಿದ್ದಾಳೆ. ವಿಮಾನವನ್ನು ಎಷ್ಟು ನೀಟಾಗಿ ಇಡಬೇಕೆಂದು ಜನಕ್ಕೆ ಗೊತ್ತು ಎಂದು ಕ್ಯಾಪ್ಶನ್ ನೀಡಿದ್ದಾಳೆ.
ಕುದುರೆಗೂ ಕೊರೋನಾ ವೈರಸ್ ಕಾಟ: ಹಾರ್ಸ್‌ಗೂ ಮಾಸ್ಕ್!..
ಆಕೆ ಟಾಯ್ಲೆಟ್ ಕಮೋಡ್ ಸೀಟ್ ನೆಕ್ಕಿ, ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಕೆಗೆ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸೋಂಕಿಗೆ ತುತ್ತಾಗಿದ್ದು, ಸಾವಿರಾರು ಮಂದಿ ಬಲಿಯಾಗಿದ್ದಾರೆ. ಈ ವೇಳೆ ಸ್ವಚ್ಛತೆ ಆದ್ಯತೆ ನೀಡಲು ಎಲ್ಲೆಡೆ ಪ್ರಚಾರ ನಡೆಸಲಾಗುತ್ತಿದ್ದು ಇದೇ ವೇಳೆ ಪ್ರಚಾರಕ್ಕಾಗಿ ಮಾಡೆಲ್ ಹುಚ್ಚಾಟ ಮೆರೆದಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ