
ನವದೆಹಲಿ (ಏ.25): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಸಾಮಾನ್ಯ ನಾಗರೀಕರನ್ನು ಹತ್ಯೆ ಮಾಡಿದ ಘಟನೆಯಲ್ಲಿ ಪಾಕಿಸ್ತಾನದ ಕೈವಾಡ ಇರುವುದು ಗೊತ್ತಾದ ಬೆನ್ನಲ್ಲಿಯೇ ಪಾಕಿಸ್ತಾನಕ್ಕೆ ಯುದ್ಧಾಂತಕ ಶುರುವಾಗಿದೆ. ಭಾರತ ಈವರೆಗೂ ಪಾಕಿಸ್ತಾನದ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿಲ್ಲವಾದರೂ ಪಾಕಿಸ್ತಾನಕ್ಕೆ ಮಾತ್ರ ಭಾರತದ ಮುಂದಿನ ಕ್ರಮದ ಕುರಿತಾಗಿ ಭಯ ಶುರುವಾಗಿದೆ.
ಇನ್ನು ಭಾರತದಿಂದ ಮಾತ್ರವಲ್ಲ ಪಾಕಿಸ್ತಾನಕ್ಕೆ ಬಲೂಚಿಸ್ತಾನ ಲಿಬರೇಷನ್ ಆರ್ಮಿಯಿಂದಲೂ ಏಟಿನ ಮೇಲೆ ಏಟು ಬೀಳುತ್ತಿದೆ. ಶುಕ್ರವಾರ ಬಲೂಚಿಸ್ತಾನದ ಟರ್ಬತ್ ಜಿಲ್ಲೆಯ ಸ್ಯಾಟಲೈಟ್ ಪಟ್ಟಣದ ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಐಇಡಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಕನಿಷ್ಠ 10 ಮಂದಿ ಪಾಕ್ ಸೈನಿಕರು ಸಾವು ಕಂಡಿರಬಹುದು ಎದು ಅಂದಾಜಿಸಲಾಗಿದೆ. ಬಲೂಚ್ ಲಿಬರೇಷನ್ ಆರ್ಮಿ ಇದರ ವಿಡಿಯೋವನ್ನು ಕೂಡ ರಿಲೀಸ್ ಮಾಡಿದ್ದು, ಮಿಲಿಟರಿ ಟ್ರಕ್‌ನ ಮೇಲೆ ನೇರವಾಗಿ ದಾಳಿ ನಡೆಸಲಾಗಿದೆ. ಭಾರತದಿಂದ ದಾಳಿಗೂ ಮುನ್ನವೇ ಪಾಕಿಸ್ತಾನದ ಸೈನಿಕರಿಗೆ ಬಲೂಚ್ ಲಿಬರೇಷನ್ ಆರ್ಮಿಯ ಆತಂಕ ಶುರುವಾಗಿದೆ.
ಒಂದು ಹನಿ ನೀರೂ ಪಾಕಿಸ್ತಾನಕ್ಕಿಲ್ಲ..ಸಿಂಧೂ ನದಿ ನೀರು ತಡೆಯಲು ಮೋದಿ ಸರ್ಕಾರದ 3 ಪ್ಲ್ಯಾನ್!
ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ಗುರುವಾರ ಸೇನಾ ಬೆಂಗಾವಲು ಪಡೆಯ ಮೇಲೆ ರಿಮೋಟ್ ಕಂಟ್ರೋಲ್ಡ್ ಸುಧಾರಿತ ಸ್ಫೋಟಕ ಸಾಧನ (IED) ಬಳಸಿ ನಡೆಸಿದ ದಾಳಿಯಲ್ಲಿ ಕನಿಷ್ಠ ಹತ್ತು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ದಂಗೆಕೋರ ಚಟುವಟಿಕೆಗೆ ಹೆಸರುವಾಸಿಯಾದ ಅಸ್ಥಿರ ಪ್ರದೇಶದಲ್ಲಿ ನಡೆದ ಈ ದಾಳಿಯನ್ನು ನಿಷೇಧಿತ ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (BLA) ಮಾಡಿರುವುದಾಗಿ ಹೇಳಿಕೊಂಡಿದೆ. "ಆಕ್ರಮಿತ ಪಾಕಿಸ್ತಾನಿ ಸೈನ್ಯ" ವಿರುದ್ಧ ನಡೆಯುತ್ತಿರುವ ಪ್ರತಿರೋಧದ ಭಾಗವಾಗಿ ತನ್ನ "ಸ್ವಾತಂತ್ರ್ಯ ಹೋರಾಟಗಾರರು" ಈ ಸ್ಫೋಟವನ್ನು ನಡೆಸಿದ್ದಾರೆ ಎಂದು BLA ಹೇಳಿಕೆಯಲ್ಲಿ ತಿಳಿಸಿದೆ. ಪಾಕಿಸ್ತಾನಿ ಸೈನ್ಯ ಇನ್ನೂ ವಿವರವಾದ ಹೇಳಿಕೆಯನ್ನು ನೀಡಿಲ್ಲ. ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿವೆ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
'ಪುತ್ರ ಶೋಕಂ ನಿರಂತರಂ..' ಗಂಗಾನದಿಯಲ್ಲಿ ಮಗನ ಅಸ್ಥಿ ವಿಸರ್ಜಿಸಿ ರೋಧಿಸಿದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅಪ್ಪ!
ಬಿಎಲ್‌ಎ ಅಥವಾ ಬಲೂಚ್ ಲಿಬರೇಶನ್ ಆರ್ಮಿ, ಪಾಕಿಸ್ತಾನದಿಂದ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದು ಉಗ್ರಗಾಮಿ ಗುಂಪು. 2000 ರಿಂದ ಸಕ್ರಿಯವಾಗಿರುವ ಅವರು, ಪಾಕಿಸ್ತಾನಿ ಭದ್ರತಾ ಪಡೆಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಚೀನಾದಿಂದ ನಡೆಸಲಾಗುತ್ತಿರುವ ಸಿಪಿಇಸಿಯಂಥ ಯೋಜನೆಗಳನ್ನೂ ಕೂಡ ಇದು ವಿರೋಧಿಸಿದೆ. ಪಾಕಿಸ್ತಾನವು ಅವರನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟುತ್ತದೆ, ಬಿಎಲ್‌ಎ ಕೂಡ ತನ್ನ ಮಿಲಿಟರಿ ಬಲದೊಂದಿಗೆ ಪಾಕಿಸ್ತಾನದ ಸೇನೆ ಮೇಲೆ ದಾಳಿ ಮಾಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ