
ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ದೇಶದ ಮಟ್ಟಿಗೇ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹ ತೀವ್ರ ತೀವ್ರವಾದ ಆಘಾತವನ್ನು ಉಂಟುಮಾಡಿದೆ. ಈ ದಾಳಿಯಲ್ಲಿ 26 ಅಮಾಯಕರ ಜೀವ ಕಳೆದುಕೊಂಡರು. ಹಲವರು ಗಾಯಗೊಂಡರು. ಭಾರತದಲ್ಲಿ ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಪಾಕಿಸ್ತಾನ ಗಡಿಯಲ್ಲಿ ಭದ್ರತಾ ಕ್ರಮಗಳು ತೀವ್ರಗೊಳಿಸಲಾಗಿದೆ. ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಯು ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದಾಗ, ಪಾಕಿಸ್ತಾನಿ ಪತ್ರಕರ್ತರೊಬ್ಬರು ಅಮೆರಿಕದ ವಿದೇಶಾಂಗ ಇಲಾಖೆಯಿಂದ ಸ್ಪಷ್ಟ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರು. ಭಾರತ-ಪಾಕಿಸ್ತಾನ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯ ಬಗ್ಗೆ ಪ್ರಶ್ನಿಸಿದ ಪಾಕಿಸ್ತಾನಿ ಪತ್ರಕರ್ತೆಯನ್ನು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್ ಶುಕ್ರವಾರ ದೂರವಿಟ್ಟಿದ್ದಾರೆ.
ಈ ಸಂದರ್ಭದಲ್ಲಿ, ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್ ಅವರು ಸ್ಪಷ್ಟವಾಗಿ ಹೇಳಿದಂತೆ, “ನಾನು ಅದರ ಬಗ್ಗೆ ಟೀಕೆ ಮಾಡುವುದಿಲ್ಲ. ನಾನು ಇದನ್ನು ಪ್ರಶಂಸಿಸುತ್ತೇನೆ, ಮತ್ತು ಬಹುಶಃ, ನಾವು ಇನ್ನೊಂದು ವಿಷಯದೊಂದಿಗೆ ನಿಮ್ಮ ಬಳಿಗೆ ಬರುತ್ತೇವೆ. ಆ ಪರಿಸ್ಥಿತಿಯ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ.” ಇದರೊಂದಿಗೆ ಅವರು ಅಮೆರಿಕದ ಉನ್ನತ ಅಧಿಕಾರಿಗಳ ಹಿಂದಿನ ಹೇಳಿಕೆಗಳನ್ನು ಮಾತ್ರ ಉಲ್ಲೇಖಿಸಿದರು.
ಭಾರತ ಗಡಿ ಮುಚ್ಚಿದ್ರೆ ಪಾಕಿಸ್ತಾನದ ತಲೆನೋವಿಗೆ ಪ್ಯಾರಸಿಟಮಾಲ್ ಕೂಡ ಸಿಗೋಲ್ಲ!
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಈ ವಿಷಯದ ಕುರಿತು ಭಾರತೀಯ ಸಂವೇದನೆಗಳಿಗೆ ಬೆಂಬಲ ಸೂಚಿಸುತ್ತಾ, ಭಾರತವು ನಡೆಸುವ ಭಯೋತ್ಪಾದನೆ ವಿರುದ್ಧದ ಯತ್ನಗಳಿಗೆ ಅಮೆರಿಕ ಸಾಥ್ ನೀಡುತ್ತದೆ ಎಂದು ಘೋಷಿಸಿದರು. "ಅಮೆರಿಕ ಭಾರತದ ಪರವಾಗಿ ನಿಂತಿದೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ದಾಳಿಯಲ್ಲಿ ಸಾವನ್ನಪ್ಪಿದವರಿಗಾಗಿ ಮತ್ತು ಗಾಯಗೊಂಡವರ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ" ಎಂದು ಬ್ರೂಸ್ ಹೇಳಿದರು.
ಅಮೆರಿಕದ ಬೇಹುಗಾರಿಕೆ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಶುಕ್ರವಾರ ಇಸ್ಲಾಮಿಕ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ ಮತ್ತು ದುಷ್ಕರ್ಮಿಗಳನ್ನು ಬೇಟೆಯಾಡುವಾಗ ಅಮೆರಿಕ ಭಾರತವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
"ಪಹಲ್ಗಾಮ್‌ನಲ್ಲಿ 26 ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಇಸ್ಲಾಮಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನಾವು ಭಾರತದೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಮತ್ತು ಭಾರತದ ಎಲ್ಲಾ ಜನರೊಂದಿಗೆ ನನ್ನ ಪ್ರಾರ್ಥನೆಗಳು ಮತ್ತು ಆಳವಾದ ಸಹಾನುಭೂತಿಗಳಿವೆ, ಪ್ರಧಾನಿ ಮೋದಿ, ಮತ್ತು ಈ ಘೋರ ದಾಳಿಗೆ ಕಾರಣರಾದವರನ್ನು ನೀವು ಬೇಟೆಯಾಡುತ್ತಿರುವಾಗ ನಾವು ನಿಮ್ಮೊಂದಿಗಿದ್ದೇವೆ ಮತ್ತು ನಿಮ್ಮನ್ನು ಬೆಂಬಲಿಸುತ್ತೇವೆ" ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರು ಟ್ವೀಟ್ ಮಾಡಿದ್ದಾರೆ.
ಒಂದು ಹನಿ ನೀರೂ ಪಾಕಿಸ್ತಾನಕ್ಕಿಲ್ಲ..ಸಿಂಧೂ ನದಿ ನೀರು ತಡೆಯಲು ಮೋದಿ ಸರ್ಕಾರದ 3 ಪ್ಲ್ಯಾನ್!
ಅತೀವ ಕಳವಳಕಾರಿ ವಿಷಯವೆಂದರೆ, ಇಂತಹ ದಾಳಿಗಳು ಕೇವಲ ಪ್ರಾದೇಶಿಕ ಭದ್ರತೆಯನ್ನಷ್ಟೇ ಅಲ್ಲದೆ, ಜಾಗತಿಕ ಶಾಂತಿಯನ್ನೂ ಸವಾಲುಗೆಳೆಯುತ್ತವೆ. ಭಯೋತ್ಪಾದನೆ ಯಾವುದೇ ಸೀಮೆ ಅಥವಾ ರಾಷ್ಟ್ರಕ್ಕೆ ಮಿತವಲ್ಲ. ಅಮೆರಿಕದ ಈ ನಿಲುವು, ಭಯೋತ್ಪಾದನೆಯ ವಿರುದ್ಧ ನಿಂತಿರುವ ಭಾರತದ ಹೋರಾಟಕ್ಕೆ ಮಾನ್ಯತೆ ನೀಡುವಂತಿದೆ.
ದಾಳಿಯ ಬಳಿಕ, ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಫೋನ್ ಮೂಲಕ ಸಂಪರ್ಕಿಸಿ ಸಂತಾಪ ಸೂಚಿಸಿದರು. ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಏರಿಕೆಯಾಗುತ್ತಿರುವುದು ಸಹಜವಾಗಿದೆ. ಆದರೆ ಅಂತಾರಾಷ್ಟ್ರೀಯ ಸಮುದಾಯದಿಂದ ಭಾರತಕ್ಕೆ ದೊರೆಯುತ್ತಿರುವ ಬೆಂಬಲ, ಭವಿಷ್ಯದಲ್ಲಿ ಭಯೋತ್ಪಾದನೆ ವಿರುದ್ಧ ಶಕ್ತಿಶಾಲಿ ಜಾಗತಿಕ ಮೈತ್ರಿಕೂಟ ನಿರ್ಮಿಸಲು ಸಹಾಯವಾಗಬಹುದು. ಶಾಂತಿ, ಸಹಿಷ್ಣುತೆ ಮತ್ತು ನ್ಯಾಯದ ಪರವಾಗಿ ನಡೆದ ಹೋರಾಟದಲ್ಲಿ ಈ ಘಟನೆಯು ಮುಂದಿನ ಕ್ರಮಗಳ ಪಥದರ್ಶಕವಾಗಲಿ ಎಂಬುದು ಎಲ್ಲರ ಆಶಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ