
ವಾಷಿಂಗ್ಟನ್: ಅಮೆರಿಕ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಾನವ ಹಕ್ಕುಗಳ ಪಾಠ ಮಾಡಲು ಹೋಗುವುದಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಸ್ಪಷ್ಟಪಡಿಸಿದ್ದಾರೆ.
‘ಭಾರತದಲ್ಲಿ ಮಾನವ ಹಕ್ಕುಗಳ (Human rights) ಉಲ್ಲಂಘನೆಯಾಗುತ್ತಿದೆ ಎಂಬ ಅಮೆರಿಕ ಸಂಸತ್ತಿನ (America senate) ಕಳವಳವನ್ನು ಮೋದಿ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಬೈಡೆನ್ ಪ್ರಸ್ತಾಪಿಸಲಿದ್ದಾರೆ. ಆದರೆ ನಾವು ಅವರಿಗೆ ಈ ವಿಷಯದಲ್ಲಿ ಪಾಠ ಮಾಡಲು ಹೋಗುವುದಿಲ್ಲ. ಮಾಧ್ಯಮ, ಧಾರ್ಮಿಕ ಮತ್ತು ಇತರೆ ಸ್ವಾತಂತ್ರ್ಯಕ್ಕೆ ಸವಾಲು ಎದುರಾಗಿದೆ ಎಂಬುದು ಕಂಡುಬಂದಾಗ ನಾವು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ. ಆದರೆ ಇಂಥ ಪ್ರಯತ್ನವನ್ನು ನಾವು ಇತರೆ ದೇಶಗಳಿಗೆ ಪಾಠ ಮಾಡುವ ರೀತಿಯಲ್ಲಾಗಲೀ ಅಥವಾ ನಾವು ಅಂಥ ಯಾವುದೇ ಸವಾಲು ಹೊಂದಿಲ್ಲ ಎಂಬುದನ್ನು ಬಿಂಬಿಸುವ ರೀತಿಯಲ್ಲಿ ಮಾಡುವುದಿಲ್ಲ. ಅಂತಿಮವಾಗಿ ರಾಜಕೀಯ, ಪ್ರಜಾಸತಾತ್ಮಕ ಸಂಸ್ಥೆಗಳು ಎಲ್ಲಿಗೆ ಸಾಗುತ್ತಿವೆ ಎಂಬುದನ್ನು ಗಮಹಿಸಿ ಕ್ರಮ ಕೈಗೊಳ್ಳಬೇಕಾಗಿದ್ದು, ಭಾರತವೇ ಹೊರತೂ ಅಮೆರಿಕವಲ್ಲ’ ಎಂದು ಸುಲ್ಲಿವಾನ್ (Jake Sullivan) ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಗಣ್ಯರ ಜೊತೆ ಮೋದಿ ಮಾತುಕತೆ: ಭಾರತದ ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ
ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ತಮ್ಮ ಪ್ರವಾಸದ ಮೊದಲ ದಿನವಾದ ಮಂಗಳವಾರ ಇಲ್ಲಿ ವಿವಿಧ ವಲಯಗಳಲ್ಲಿ ಸಾಧನೆ ಮಾಡಿರುವ ಅಮೆರಿಕದ ಹಲವು ಗಣ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ತಮ್ಮ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡ ಸುಧಾರಣಾ ಕ್ರಮಗಳು, ಅದರಿಂದ ಸಿಕ್ಕಿದ ಫಲಿತಾಂಶಗಳ ಕುರಿತು ಗಣ್ಯರಿಗೆ ಮಾಹಿತಿ ನೀಡಿದರು. ಜೊತೆಗೆ ಗಣ್ಯರ ಮಾತುಗಳನ್ನು ಆಲಿಸಿದರು.
ಹೀಗೆ ಮೋದಿ ಭೇಟಿ ಮಾಡಿದವರಲ್ಲಿ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಪ್ರೊ.ಪೌಲ್ ರೂಮರ್, ಹೂಡಿಕೆದಾರ ರೇ ಡಲಿಯೋ, ಖಗೋಳ ಭೌತ ವಿಜ್ಞಾನಿ ನೀಲ್ ಡೇ ಟೈಸನ್, ಪದ್ಮಶ್ರೀ ಪುರಸ್ಕೃತ ಚಿಂಕತರ ಪ್ರೊ.ರಾಟರ್ಬ್ ಥರ್ಮನ್, ಖ್ಯಾತ ಗಣಿತಜ್ಞ ಪ್ರೊ.ನಸ್ಸಿಮ್ ನಿಕೋಲಸ್ ತಾಲೆಬ್, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಗಾಯಕಿ ಫಲ್ಗುಣಿ ಶಾ ಪ್ರಮುಖರು. ಇದಲ್ಲದೆ ಆರೋಗ್ಯ ವಲಯದ ಹಲವು ತಜ್ಞರು, ವಿವಿಧ ಚಿಂತಕರ ಚಾವಡಿಯ ಗಣ್ಯರು, ಕೃಷಿ, ಮಾರುಕಟ್ಟೆ, ಎಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ವಲಯದ ಸಾಧಕರ ಜೊತೆಗೂ ಮಾತುಕತೆ ನಡೆಸಿದರು.
ಚೀನಾದ ಜಿನ್‌ಪಿಂಗ್ ಸರ್ವಾಧಿಕಾರಿ: ಅಮೆರಿಕ ಅಧ್ಯಕ್ಷ ಬೈಡೆನ್ ವಾಗ್ದಾಳಿ
ವಾಷಿಂಗ್ಟನ್: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ‘ಸರ್ವಾಧಿಕಾರಿ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಹೇಳಿದ್ದಾರೆ. ಅಮೆರಿಕದ ವಿದೇಶಾಂಗ ಸಚಿವರು ಚೀನಾ ಭೇಟಿಯಿಂದ ಮರಳಿದ ಬಳಿಕ ಬೈಡೆನ್ರ ಈ ಹೇಳಿಕೆ ಬಂದಿದೆ. ಮಂಗಳವಾರ ಕ್ಯಾಲಿಫೋರ್ನಿಯಾದಲ್ಲಿ ಮಾತನಾಡಿದ ಅವರು ‘ಸಂಪೂರ್ಣವಾಗಿ ಬೇಹುಗಾರಿಕೆ ಉಪಕರಣಗಳನ್ನು ಹೊಂದಿದ್ದ ಬಲೂನನ್ನು ನಾನು ಹೊಡೆದುರುಳಿಸಿದಾಗ ಅದು ಅವರಿಗೆ (ಕ್ಸಿ) ಗೊತ್ತೇ ಆಗಲಿಲ್ಲ. ಚೀನಾದ ಗುಪ್ತಚರ ಬಲೂನನ್ನು ಅಮೆರಿಕ ಹೊಡೆದುರುಳಿಸಿತು. ಆಗ ಬಲೂನ್ ಎಲ್ಲಿ ಹೋಯಿತು, ಏನಾಯಿತು ಎಂದು ಗೊತ್ತೇ ಇಲ್ಲದೆ ಸರ್ವಾಧಿಕಾರಿಗೆ ತೀವ್ರ ಮುಜುಗರವಾಗಿತ್ತು’ ಎನ್ನುವ ಮೂಲಕ ಕ್ಸಿ ಜಿನ್‌ಪಿಂಗ್‌ರನ್ನು ಬೈಡೆನ್, ಸರ್ವಾಧಿಕಾರಿ ಎಂದು ಸಂಭೋಧಿಸಿದ್ದಾರೆ. ಅಲ್ಲದೇ ‘ಚೀನಾ ನಿಜವಾದ ಆರ್ಥಿಕ ಸಮಸ್ಯೆಗಳನ್ನು ಹೊಂದಿದೆ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ