ಭಾರತದ 5 ಲಕ್ಷ ದಾಖಲೆ ರಹಿತ ಜನರು ಈ ಮೂಲಕ ಅಮೆರಿಕದ ಪೌರತ್ವವನ್ನು ಪಡೆಯಲಿದ್ದಾರೆ.
ವಾಷಿಂಗ್ಟನ್(ನ.08): ಅಮೆರಿಕ ಅಧ್ಯಕ್ಷ ಜಾಯ್ ಬೈಡನ್ ದಾಖಲೆ ರಹಿತ ಸುಮಾರು 11 ಮಿಲಿಯನ್ ಜನರಿಗೆ ಪೌರತ್ವ ಒದಗಿಸುವಲ್ಲಿ ಪ್ರಮುಖ ಹೆಜ್ಜೆ ಇಡಲಿದ್ದಾರೆ. ಭಾರತದ 5 ಲಕ್ಷ ದಾಖಲೆ ರಹಿತ ಜನರು ಈ ಮೂಲಕ ಅಮೆರಿಕದ ಪೌರತ್ವವನ್ನು ಪಡೆಯಲಿದ್ದಾರೆ.
ಹಾಗೆಯೇ ಅಮೆರಿಕಕ್ಕೆ ಬರುವವರ ಸಂಖ್ಯೆ ಪ್ರತಿವರ್ಷ ಸುಮಾರು 95 ಸಾವಿರಕ್ಕೆ ಹೆಚ್ಚಳವಾಗಲಿದೆ. ಬೈಡನ್ ಅಭಿಯಾನದ ದಾಖಲೆಗಳ ಪ್ರಕಾರ, ದಾಖಲೆ ರಹಿತ 11 ಮಿಲಿಯನ್ ಜನರಿಗೆ ಪೌರತ್ವ ಒದಗಿಸುವ ಮೂಲಕ ವಲಸಿಗರು ಕುಟುಂಬ ಸಮೇತರಾಗಿರಲು ಬೈಡನ್ ಕೆಲಸ ಮಾಡಲಿದ್ದಾರೆ.
undefined
ಬೈಡೆನ್‌ರಿಂದ ಭಾರತಕ್ಕೇನು ಲಾಭ, ನಷ್ಟ?
ಇದರಲ್ಲಿ 5 ಲಕ್ಷ ಭಾರತೀಯರು ಸೇರಿರಲಿದ್ದಾರೆ ಎಂದು ಬೈಡನ್ ಅಭಿಯಾನ ದಾಖಲೆಗಳಲ್ಲಿ ತಿಳಿಸಲಾಗಿದೆ. ಕುಟುಂಬ ಸಹಿತ ವಲಸೆಗೆ ಜಾಯ್ ಬೈಡನ್ ಬೆಂಬಲ ನೀಡಲಿದ್ದಾರೆ.
ಅಮೆರಿಕದ ವಲಸೆ ನೀತಿಗಳ ಪ್ರಕಾರ ಕುಟುಂಬಗಳ ಒಗ್ಗಟ್ಟು ಕಾಯ್ದುಕೊಳ್ಳಲು ನೆರವಾಗುವವುದಾಗಿ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಬಂದು ಇಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವವರಿಗೆ ನೀಡಲಾಗುವ ವೀಸಾ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ಬೈಡನ್ ನೀಡಿದ್ದಾರೆ.