ದೇಶವನ್ನು ಒಡೆಯಲ್ಲ, ಒಗ್ಗೂಡಿಸ್ತೀನಿ: ಅಮೆರಿಕ ಹೊಸ ಅಧ್ಯಕ್ಷನ ಮಾತು!

Published : Nov 08, 2020, 12:40 PM IST
ದೇಶವನ್ನು ಒಡೆಯಲ್ಲ, ಒಗ್ಗೂಡಿಸ್ತೀನಿ: ಅಮೆರಿಕ ಹೊಸ ಅಧ್ಯಕ್ಷನ ಮಾತು!

ಸಾರಾಂಶ

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ದೇಶವನ್ನುದ್ದೇಶಿಸಿ ಬೈಡೆನ್ ಮಾತು| ದೇಶ ಹಾಗೂ ಸಮಾಜವನ್ನು ತಾನು ಒಡೆಯುವುದಿಲ್ಲ. ಬದಲಾಗಿ ಅದನ್ನು ಒಗ್ಗೂಡಿಸುತ್ತೇನೆ| ಇದು ಅಮೆರಿಕದ ನೈತಿಕ ಜಯ

ವಾಷಿಂಗ್ಟನ್(ನ.08): ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಜೋ ಬೈಡೆನ್ 'ದೇಶ ಹಾಗೂ ಸಮಾಜವನ್ನು ತಾನು ಒಡೆಯುವುದಿಲ್ಲ. ಬದಲಾಗಿ ಅದನ್ನು ಒಗ್ಗೂಡಿಸುತ್ತೇನೆ. ನೀವೆಲ್ಲರೂ ಸ್ಪಷ್ಟ ಬಹುಮತ ನೀಡಿದ್ದೀರಿ. ಇದು ಅಮೆರಿಕದ ನೈತಿಕ ಜಯ' ಎಂದಿದ್ದಾರೆ. 

ಹೌದು ಬೈಡೆನ್‌ರನ್ನು ಅಮೆರಿಕ ಅಧ್ಯಕ್ಷರನ್ನಾಗಿ ಘೋಷಿಸಿದ ಬಳಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಓಡೋಡುತ್ತಲೇ ವೇದಿಕೆ ಏರಿದ ಬೈಡೆನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇನ್ನು ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆಗ ಬೈಡೆನ್‌ಗೆ 78 ವರ್ಷ ತುಂಬಲಿದ್ದು, ಅವರು ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷರಾಗಲಿದ್ದಾರೆ. 

ತಾನು ಅಧ್ಯಕ್ಷ ಹುದ್ದೆಗೇರಲು ತನ್ನ ಪತ್ನಿ ಹಾಗೂ ಕುಟುಂಬದ ಸಹಕಾರ ಬಹಳಷ್ಟಿದೆ ಎಂದ ಬೈಡೆನ್ ಇವರೆಲ್ಲರಿಗೂ ನಾನು ಅಭಾರಿ ಎಂದಿದ್ದಾರೆ. 

ಟ್ರಂಪ್ ಬೆಂಬಲಿಗರಿಗೆ ಸಂದೇಶ:

ಈ ಕಾರ್ಯಕ್ರಮದಲ್ಲಿ ಟ್ರಂಪ್ ಬೈಡೆನ್ ಹಾಗೂ ಅವರ ಬೆಂಬಲಿಗರಿಗೂ ಸಂದೇಶ ನೀಡಿದ್ದಾರೆ. ಯಾರೆಲ್ಲಾ ಟ್ರಂಪ್‌ಗೆ ಮತ ನೀಡಿದ್ದಾರೋ ಅವರೆಲ್ಲರಿಗೂ ಇಂದು ನಿರಾಸೆಯಾಗಿರಬಹುದು. ನಾನು ಕೂಡಾ ಹಲವಾರು ಬಾರಿ ಸೋಲನುಭವಿಸಿದ್ದೇನೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯವಾಗಿದ್ದು, ಇಲ್ಲಿ ಎಲ್ಲರಿಗೂ ಅವಕಾಶ ಸಿಗುತ್ತದೆ. ಬನ್ನಿ ನಾವು ದ್ವೇಷವನ್ನು ಶಮನಗೊಳಿಸೋಣ. ಪರಸ್ಪರರು ಆಡುವ ಮಾತುಗಳನ್ನು ಕೇಳಿಸಿಕೊಂಡು ಮುಂದುವರೆಯೋಣ. ವಿರೋಧಿಗಳನ್ನು ಶತ್ರುಗಳಂತೆ ಕಾಣುವುದನ್ನು ನಿಲ್ಲಿಸೋಣ. ಯಾಕೆಂದರೆ ನಾವು ಅಮೆರಿಕನ್ನರು. ಪ್ರತಿಯೊಂದಕ್ಕೂ ತನ್ನದೇ ಆದ ಸಮಯವಿದೆ ಎಂದು ಬೈಬಲ್ ಕಲಿಸುತ್ತದೆ. ಈಗ ಗಾಯ ತುಂಬುವ ಸಮಯ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ