ಬೈಡೆನ್‌ರಿಂದ ಭಾರತಕ್ಕೇನು ಲಾಭ, ನಷ್ಟ?

First Published 8, Nov 2020, 2:11 PM

ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್‌ ಗೆಲುವು ಸಾಧಿಸಿದ್ದಾರೆ. ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತ- ಚೀನಾ, ಭಾರತ-ಪಾಕಿಸ್ತಾನ ಗಡಿ ಬಿಕ್ಕಟ್ಟು ಸೇರಿದಂತೆ ಅನೇಕ ವಿಷಯಗಳಲ್ಲಿ ನೇರವಾಗಿ ಭಾರತ ಜೊತೆ ನಿಂತಿದ್ದರು. ಆದರೆ ಸದ್ಯ ಅಧ್ಯಕ್ಷ ಪಟ್ಟ ಟ್ರಂಪ್‌ ಅವರಿಂದ ಬೈಡೆನ್‌ ಅವರಿಗೆ ವರ್ಗಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಬೈಡೆನ್‌ ಅಧ್ಯಕ್ಷರಾಗುವುದರಿಂದ ಭಾರತಕ್ಕಾಗುವ ಲಾಭ-ನಷ್ಟಏನು ಎಂಬ ಸಂಕ್ಷಿಪ್ತ ವಿವರ ಇಲ್ಲಿದೆ.

ಬೈಡೆನ್‌ ಗೆದ್ದಿದ್ದು, ಭಾರತ ಮೂಲದ ಕಮಲಾ ಹ್ಯಾರಿಸ್‌ ಉಪಾಧ್ಯಕ್ಷೆಯಾಗಿದ್ದಾರೆ. ಸಹಜವಾಗಿಯೇ ಅಮೆರಿಕದ ನೀತಿ ನಿರೂಪಣೆಯಲ್ಲಿ ಹ್ಯಾರಿಸ್‌ ಪ್ರಮುಖ ಪಾತ್ರ ವಹಿಸಲಿದ್ದು, ಭಾರತಕ್ಕೆ ಅನುಕೂಲವಾಗಬಹುದು.

ಪೂರ್ವ ಲಡಾಖ್‌ನಲ್ಲಿ ಭಾರತದೊಂದಿಗೆ ಚೀನಾ ಕ್ಯಾತೆ ತೆಗೆದಾಗಲೆಲ್ಲಾ ಟ್ರಂಪ್‌ ಮುಕ್ತವಾಗಿ ಭಾರತದ ಪರ ನಿಂತಿದ್ದರು. ಆದರೆ ಬೈಡೆನ್‌ ಏನು ಮಾಡುತ್ತಾರೆ ಎಂಬ ಬಗ್ಗೆ ಸ್ಪಷ್ಟಅಭಿಪ್ರಾಯ ಇಲ್ಲ.

ಹವಾಮಾನ ಬದಲಾವಣೆ ಕುರಿತ ಜಾಗತಿಕ ಪ್ಯಾರಿಸ್‌ ಒಪ್ಪಂದದಿಂದ ಟ್ರಂಪ್‌ ಹೊರಬಂದಿದ್ದರು. ಆದರೆ ಬೈಡೆನ್‌ ಅವಧಿಯಲ್ಲಿ ಅಮೆರಿಕ ಮತ್ತೆ ಈ ಒಪ್ಪಂದದ ಭಾಗವಾಗಬಹುದು. ಆಗ ಕಲ್ಲಿದ್ದಲು ವಿಚಾರವಾಗಿ ಭಾರತ-ಅಮೆರಿಕ ಮಧ್ಯೆ ಭಿನ್ನಮತ ಎದುರಾಗಬಹುದು.

ಎಚ್‌-1ಬಿ ವೀಸಾ ನಿಯಮಗಳನ್ನು ಟ್ರಂಪ್‌ ಬದಲಿಸಿದ ಪರಿಣಾಮ ಅಮೆರಿನ್ನರಿಗೆ ಉದ್ಯೋಗಾವಕಾಶ ಹೆಚ್ಚಿತ್ತು. ಇದರಿಂದ ಭಾರತೀಯ ನೌಕರರಿಗೆ ಭಾರೀ ಹೊಡೆತ ಬಿದ್ದಿತ್ತು. ಅಮೆರಿಕವೇ ಮೊದಲ ಆದ್ಯತೆ ಎನ್ನುವ ಬೈಡೆನ್‌ ಈ ನಿಯಮ ಬದಲಿಸಿ ಹಳೆಯ ವ್ಯವಸ್ಥೆ ಜಾರಿ ಮಾಡುವ ಸಾಧ್ಯತೆ ತೀರಾ ಕಡಿಮೆ.

ಪ್ರಚಾರದ ಸಮಯದಲ್ಲಿಯೇ ಬೈಡೆನ್‌, ಭಾರತೀಯ ಮೂಲದ ಅಮೆರಿಕನ್ನರನ್ನು ಉದ್ದೇಶಿಸಿ ಭಾರತದ ಸಹಕಾರ ಇಲ್ಲದೆ ಜಾಗತಿಕ ಸಾಮಾನ್ಯ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂದಿದ್ದರು. ಭಾರತದೊಂದಿಗಿನ ಸಂಬಂಧ ವೃದ್ಧಿ ನಮ್ಮ ಆದ್ಯತೆ ಎಂದಿದ್ದರು.

ಬೈಡೆನ್‌ ಅಧಿಕಾರಾವಧಿಯಲ್ಲಿ ಅಮೆರಿಕ-ಭಾರತದ ನಡುವಿನ ರಕ್ಷಣೆ, ರಾಜತಾಂತ್ರಿಕ ಮತ್ತು ಭದ್ರತಾ ಸಂಬಂಧಗಳು 2000ನೇ ಇಸವಿಯಿಂದೀಚೆಗೆ ಇರುವಂತೆಯೇ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.

ಅಮೆರಿಕದಲ್ಲಿ ಯಾರೇ ಅಧಿಕಾರದಲ್ಲಿರಲಿ ಭಾರತ-ಅಮೆರಿಕ ನಡುವಿನ ವ್ಯಾಪಾರ ಬಿಕ್ಕಟ್ಟಿಗೆ ಪರಿಹಾರವಿಲ್ಲ. ಒಬಾಮಾ ಅವರಿದ್ದಾಗಲೂ, ಟ್ರಂಪ್‌ ಅವರಿದ್ದಾಗಲೂ ಈ ಸಮಸ್ಯೆ ಹಾಗೇ ಇತ್ತು. ಇದಕ್ಕೆ ಬೈಡೆನ್‌ ಅವರ ಆಡಳಿತವೂ ಹೊರತಾಗಿಲ್ಲ ಎಂಬ ವಾದವಿದೆ.