ತಿಮಿಂಗಿಲದ ಕಿತಾಪತಿಗೆ ಬೆಸ್ತು ಬಿದ್ದ ಅಗ್ನಿಶಾಮಕ ಸಿಬ್ಬಂದಿ

Published : Apr 13, 2025, 11:36 AM ISTUpdated : Apr 13, 2025, 11:50 AM IST
ತಿಮಿಂಗಿಲದ  ಕಿತಾಪತಿಗೆ ಬೆಸ್ತು ಬಿದ್ದ ಅಗ್ನಿಶಾಮಕ ಸಿಬ್ಬಂದಿ

ಸಾರಾಂಶ

ಇಲ್ಲೊಂದು ಕಡೆ ಅಗ್ನಿಶಾಮಕ ಸಿಬ್ಬಂದಿ ಪ್ರಾತ್ಯಕ್ಷಿಕೆ ನಡೆಸುವ ವೇಳೆ ಅವರ ವಿಶೇಷ ಅತಿಥಿಯೊಂದು ಬಂದು ಅಗ್ನಿ ಶಾಮಕ ಸಿಬ್ಬಂದಿ ಮಾಡುವ ಕೆಲಸವನ್ನು ತಾನೇ ಮಾಡಿದೆ. ಈ ವೀಡಿಯೋ ಈಗ ವೈರಲ್ ಆಗಿದೆ. 

ಸಾಮಾನ್ಯವಾಗಿ ಅಗ್ನಿ ಶಾಮಕ ಸಿಬ್ಬಂದಿಯ ಆಗಾಗ ಹಲವು ಪ್ರದೇಶಗಳಿಗೆ ತೆರಳಿ ಬೆಂಕಿ ನಂದಿಸುವ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡುತ್ತಾರೆ. ಧುತ್ತನೇ ಸಂಭವಿಸುವ ಅಗ್ನಿ ಅವಘಡಗಳಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಅವರು ಮಾಹಿತಿ ನೀಡುತ್ತಾರೆ. ಹೀಗೆ ಪ್ರಾತ್ಯಕ್ಷಿಕೆ ನೀಡುವ ಸಮಯದಲ್ಲಿ ಅವರು ಹೆಚ್ಚಾಗಿ ನೀರು ಸಮೀಪವಿರುವ ಪ್ರದೇಶಗಳನ್ನು ಆಯ್ಕೆ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಅಗ್ನಿಶಾಮಕ ಸಿಬ್ಬಂದಿ ಪ್ರಾತ್ಯಕ್ಷಿಕೆ ನಡೆಸುವ ವೇಳೆ ಅವರ ವಿಶೇಷ ಅತಿಥಿಯೊಂದು ಬಂದು ಅಗ್ನಿ ಶಾಮಕ ಸಿಬ್ಬಂದಿ ಮಾಡುವ ಕೆಲಸವನ್ನು ತಾನೇ ಮಾಡಿದೆ. ಈ ವೀಡಿಯೋ ಈಗ ವೈರಲ್ ಆಗಿದೆ. 

ವೈರಲ್ ಆದ ವೀಡಿಯೋದಲ್ಲಿ ಏನಿದೆ.

ಅಗ್ನಿಶಾಮಕ ಸಿಬ್ಬಂದಿ ನೀರಿನ ಸಮೀಪ ನಿಂತುಕೊಂಡು ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಒಬ್ಬರು ಬೆಂಕಿ ಬಿದ್ದಾಗ ಮುಂದೇನು ಮಾಡಬೇಕು ಎಂದು ಮೈಕ್‌ನಲ್ಲಿ ಹೇಳುತ್ತಿದ್ದರೆ, ಮತ್ತೊಬ್ಬರು ಸಮೀಪದಲ್ಲಿ ಒಂದು ಕ್ಯಾರಿಯರ್‌ನಲ್ಲಿ ಬೆಂಕಿಯನ್ನು ಹೊತ್ತಿಸಿ, ಸಮೀಪದಲ್ಲೇ ನೀರಿನ ಪೈಪ್ ಹಿಡಿದುಕೊಂಡು ತಮ್ಮ ಜತೆಗಾರನ ಸೂಚನೆಗಾಗಿ ಕಾಯುತ್ತಿರುತ್ತಾರೆ. ಆದರೆ ಅಷ್ಟೊತ್ತಿಗೆ ನೀರಿನಿಂದ ಮೇಲೇರಿ ಬಂದ ತಿಮಿಂಗಿಲವೊಂದು ಬಾಯಲ್ಲಿ ನೀರನ್ನು ತುಂಬಿಸಿಕೊಂಡು ಬಂದು ಬೆಂಕಿ ಮೇಲೆ ಸುರಿದಿದ್ದಲ್ಲದೇ ಜೊತೆಗೆ ಇದ್ದಂತಹ ಅಗ್ನಿ ಶಾಮಕ ಸಿಬ್ಬಂದಿಗಳನ್ನು ಒದ್ದೆಗೊಳಿಸಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯಲ್ಲಿ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

phoenixtv_news ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ದೊಡ್ಡದಾದ ಅಕ್ವೇರಿಯಂ ಸಮೀಪ ನಿಂತು ಇಬ್ಬರು ಅಗ್ನಿ ಶಾಮಕ ಸಿಬ್ಬಂದಿ ಅಗ್ನಿ ಸುರಕ್ಷತೆಯ ಬಗ್ಗೆ ಪಾಠ ಮಾಡುತ್ತಿದ್ದರೆ ಒಂದು ಬೆಲುಗಾ ತಿಮಿಂಗಿಲ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಆದರೆ ತಿಮಿಂಗಿಲದ ಈ ವರ್ತನೆಗೆ ಕಾರಣವಾಗಿದ್ದು, ಬೇರೆನೂ ಅಲ್ಲ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಹಾಕಲು ಬಳಸಿದ ಕಂಟೈನರ್, ಆ ಕಂಟೈನರ್ ತಿಮಿಂಗಿಲಕ್ಕೆ ನೀಡುವ ಆಹಾರದ ಪಾತ್ರೆಯಾಗಿತ್ತು ಎಂದು ಫೀನಿಕ್ಸ್‌ಟಿವಿ_ಸುದ್ದಿ ತನ್ನ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿದೆ.

ನಾವಿಕನ ನುಂಗಿ, ಬಳಿಕ ಹೊರಗೆ ಉಗುಳಿದ ತಿಮಿಂಗಿಲ! ಮೀನಿನ ಹೊಳ್ಳೆಯೊಳಗೆ ಹೋಗಿಬಂದವನ ರೋಚಕ ಕಥೆ

ಅಂದರೆ ಈ ತಿಮಿಂಗಿಲ ತನ್ನ ಆಹಾರದ ಪಾತ್ರೆಗೆ ಬೆಂಕಿ ಹತ್ತಿಕೊಂಡಿದ್ದನ್ನು ನೋಡಿ ಬಾಯಲ್ಲಿ ನೀರು ತುಂಬಿಸಿಕೊಂಡು ಬಂದು ಅದರ ಮೇಲೆ ಸುರಿದಿದ್ದಲ್ಲದೇ ಪಕ್ಕದಲ್ಲೇ ಇದ್ದ ಬೆಂಕಿ ಉರಿಸಿದ ಅಗ್ನಿ ಶಾಮಕ ಸಿಬ್ಬಂದಿಯನ್ನು ಕೂಡ ಸಂಪೂರ್ಣವಾಗಿ ಒದ್ದೆಗೊಳಿಸಿದೆ. ಹಠಾತ್ ಆಗಿ ನಡೆದ ಈ ಘಟನೆ ಹಾಗೂ ತಮ್ಮ ಈ ಅಗ್ನಿಸುರಕ್ಷತಾ ಪ್ರಾತ್ಯಕ್ಷಿಕೆಯನ್ನು ಹಾಳು ಮಾಡಿದ್ದಲ್ಲದೇ ತಮಗೆ ನೀರೆರೆದು ಸ್ನಾನ ಮಾಡಿಸಿದ ತಿಮಿಂಗಿಲದ ಕೃತ್ಯದಿಂದ ಅಗ್ನಿ ಶಾಮಕ ಸಿಬ್ಬಂದಿ ಪೆಚ್ಚು ಮೊರೆಯಿಂದ ನೋಡುತ್ತಿರುವುದು ಈ ವೀಡಿಯೋದಲ್ಲಿ ಸೆರೆ ಆಗಿದ್ದು, ತಿಮಿಂಗಿಲದ ತುಂಟಾಟದಿಂದಾಗಿ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೋಟನ್ನೇ ಅಡಿಮೇಲು ಮಾಡಿದ ತಿಮಿಂಗಿಲ: ಮೀನುಗಾರರ ಎದೆನಡುಗಿಸುವ ವೀಡಿಯೋ ವೈರಲ್‌

ಅನೇಕರು ಈ ತಿಮಿಂಗಿಲದ ತುಂಟಾಟ ನೋಡಿ ಹಲವು ರೀತಿಯ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ನಾನು ಕೂಡ ಅಗ್ನಿ ನಂದಿಸುವವನೇ ಅಂತ ಈ ತಿಮಿಂಗಿಲ ಹೇಳ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದು ಬೆಂಕಿ ನಂದಿಸಿದ್ದಲ್ಲದೇ ಅವರನ್ನು ನೋಡಿ ನಗಲು ಮತ್ತೆ ಬಂದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ವಾಟರ್ ಪಾರ್ಕ್ ಬಳಿ ಯಾರಾದರು ಫೈರ್‌ ಸೇಫ್ಟಿ ಡ್ರೈವ್ ಮಾಡ್ತಾರಾ ಅಂತ ಪ್ರಶ್ನೆ ಮಾಡಿದ್ದಾರೆ. ಇಲ್ಲಿ ಫೈರ್ ಫೈಟರ್‌ಗಳು ಭಯಗೊಳ್ಳಬೇಡಿ ಎಂದು ಹೇಳ್ತಿದ್ರೆ, ಇತ್ತ ಈ ತಿಮಿಂಗಿಲ ಅವರನ್ನೇ ಭಯಗೊಳಿಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ತಿಮಿಂಗಿಲ ಅಲ್ಲ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬರು ಇವರುಗಳು ನೋಡುವುದಕ್ಕೆ ಡಾಲ್ಪಿನ್‌ಗಳಂತೆ ಕಂಡರು ಕೂಡ ಇವು ಒಂದು ತಳಿಯ ತಿಮಿಂಗಿಲಗಳಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ