40 ವರ್ಷ ಹಿಂದೆ ನಾಪತ್ತೆ ಆದವ ಫೇಸ್ಬುಕ್‌ನಿಂದ ಪತ್ತೆ!

By Suvarna News  |  First Published Jan 20, 2020, 10:03 AM IST

40 ವರ್ಷ ಹಿಂದೆ ನಾಪತ್ತೆ ಆದವ ಫೇಸ್ಬುಕ್‌ನಿಂದ ಪತ್ತೆ!| ತಮಾಷೆ ಅಲ್ಲ... ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ


ಡಾಕಾ[ಜ.20]: 40 ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಫೇಸ್‌ಬುಕ್‌ ವಿಡಿಯೋವೊಂದರ ಸಹಾಯದಿಂದ ತನ್ನ ಕುಟುಂಬವನ್ನು ಮತ್ತೆ ಸೇರಿಕೊಂಡ ಬಲು ಅಪರೂಪದ ಘಟನೆಯೊಂದು ಜರುಗಿದೆ.

ಫೇಸ್‌ಬುಕ್‌ನಲ್ಲಿ ಹುಡುಗಿ ಎಂದು ಚಾಟ್‌ ಮಾಡಿದ್ರೆ ಬೀಳುತ್ತೆ ಪಂಗನಾಮ!

Tap to resize

Latest Videos

ಬಜಗ್ರಾಮ್‌ ನಿವಾಸಿ ಹಬೀಬುರ್‌ ರೆಹಮಾನ್‌ ಎಂಬಾತ 30 ವರ್ಷ ಆಗಿದ್ದಾಗ ಪ್ರವಾಸದ ವೇಳೆ ನಾಪತ್ತೆ ಆಗಿದ್ದರು. ಈಗ ಹಬಿಬುರ್‌ಗೆ 78 ವರ್ಷ. ಅನಾರೋಗ್ಯದ ನಿಮಿತ್ತ ಇತ್ತೀಚೆಗೆ ಢಾಕಾದ ಒಸ್ಮಾನಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಹಣ ಇರದ ಕಾರಣ ವ್ಯಕ್ತಿಯೊಬ್ಬ ಫೇಸ್‌ಬುಕ್‌ ವಿಡಿಯೋ ಮೂಲಕ ನೆರವು ನೀಡುವಂತೆ ಕೇಳಿಕೊಂಡಿದ್ದ.

ಈ ವಿಡಿಯೋವನ್ನು ನೋಡಿದ್ದ ಹಬೀಬುರ್‌ ಅವರ ಕಿರಿಯ ಸೊಸೆ ಕುಟುಂಬದ ಸದಸ್ಯರಿಗೆ ಶೇರ್‌ ಮಾಡಿದ್ದಳು. ಆಗ ಆ ವ್ಯಕ್ತಿ ತಮ್ಮ ತಂದೆ ಎಂಬುದು ಮಕ್ಕಳಿಗೆ ಗೊತ್ತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಮಾತುಗಳನ್ನಾಡಿ; ಇದು ಹೊಸ ವರ್ಷದ ರೆಸಲ್ಯೂಶನ್!

ಜನವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!