ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ನಾಲ್ಕನೇ ಅವಧಿಗೆ ಗೆದ್ದಿದೆ. ಒಟ್ಟಾರೆ ಶೇಖ್ ಹಸೀನಾ ದೇಶದ ಪ್ರಧಾನಿಯಾಗಿ ಒಟ್ಟಾರೆ ಐದನೇ ಅವಧಿಯಾಗಿದೆ.
ಢಾಕಾ (ಜನವರಿ 8, 2024): ಕಡಿಮೆ ಮತದಾನ ಮತ್ತು ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗಳ ಬಹಿಷ್ಕಾರದ ನಡುವೆ ಅವಾಮಿ ಲೀಗ್ ಪಕ್ಷವು ಸಂಪೂರ್ಣ ಬಹುಮತವನ್ನು ಗಳಿಸಿದೆ. ಈ ಹಿನ್ನೆಲೆ, ಪ್ರಧಾನಿ ಶೇಖ್ ಹಸೀನಾ ತಮ್ಮ ಐದನೇ ಅವಧಿಯ ಅಧಿಕಾರವನ್ನು ಪಡೆದುಕೊಂಡಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ 224 ಸ್ಥಾನಗಳಲ್ಲಿ 216 ಸ್ಥಾನಗಳಲ್ಲಿ ಅವಾಮಿ ಲೀಗ್ ಭರ್ಜರಿ ಜಯ ಸಾಧಿಸಿದೆ. ಆದರೆ, ಉಳಿದ ಸ್ಥಾನಗಳ ಫಲಿತಾಂಶ ಇನ್ನೂ ಅಘೋಷಿತವಾಗಿದೆ ಎಂದು ಬಾಂಗ್ಲಾದೇಶದ ಚುನಾವಣಾ ಆಯೋಗ ತಿಳಿಸಿದೆ.
ಇದನ್ನು ಓದಿ: ಬಾಂಗ್ಲಾ ಪ್ರಧಾನಿ ರಾಜೀನಾಮೆ ಆಗ್ರಹಿಸಿ ವಿಪಕ್ಷದ ಬೃಹತ್ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿದ ರ್‍ಯಾಲಿ!
ಇನ್ನು, ಪ್ರಧಾನ ಮಂತ್ರಿಯಾಗಿ ಐದನೇ ಅವಧಿಗೆ ಚುನಾಯಿತರಾದ ಶೇಖ್ ಹಸೀನಾ ವಿಶ್ವದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮಹಿಳಾ ರಾಷ್ಟ್ರಾಧ್ಯಕ್ಷೆ ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ನಾಲ್ಕನೇ ಅವಧಿಗೆ ಗೆದ್ದಿದೆ. ಒಟ್ಟಾರೆ ಶೇಖ್ ಹಸೀನಾ ದೇಶದ ಪ್ರಧಾನಿಯಾಗಿ ಒಟ್ಟಾರೆ ಐದನೇ ಅವಧಿಯಾಗಿದೆ.
ಈ ಮಧ್ಯೆ, 12ನೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಯಾವುದೇ ವಿಜಯೋತ್ಸವ ಮೆರವಣಿಗೆ ನಡೆಸದಂತೆ ಅವಾಮಿ ಲೀಗ್ ಮುಖ್ಯಸ್ಥೆ ಹಸೀನಾ ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಶೇಖ್ ಹಸೀನಾ ಜೊತೆ ಮಂಡಿಯೂರಿ ರಿಷಿ ಮಾತುಕತೆ: ಸುಧಾಮೂರ್ತಿ ಅಳಿಯನ ಸಂಸ್ಕಾರಕ್ಕೆ ಎಲ್ಲೆಡೆ ಶ್ಲಾಘನೆ
ಚುನಾವಣೆಗೂ ಮುನ್ನ ಶೇಖ್ ಹಸೀನಾ ರಾಜೀನಾಮೆ ನೀಡಿ ಕೇರ್‌ಟೇಕರ್ ಸರ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಬೇಡಿಕೆ ಇಟ್ಟಿತ್ತು. ಆದರೆ, ಇದನ್ನು ಶೇಖ್ ಹಸೀನಾ ತಿರಸ್ಕರಿಸಿದ ಕಾರಣಕ್ಕೆ ಅವರು ಚುನಾವಣೆಯನ್ನೇ ಬಹಿಷ್ಕರಿಸಿದ್ದರು.
ಈ ಹಿನ್ನೆಲೆ ಪ್ರಸ್ತುತ ಸರ್ಕಾರದ ವಿರುದ್ಧ ಬಹಿಷ್ಕಾರಗಳ ನಡುವೆ 2024 ರ ಬಾಂಗ್ಲಾದೇಶದ ಚುನಾವಣೆಗಳು ಭಾನುವಾರ ಗಣನೀಯವಾಗಿ ಕಡಿಮೆ ಮತದಾನವನ್ನು ಕಂಡವು. ಒಟ್ಟಾರೆ ಶೇ.40ರಷ್ಟು ಮತದಾನವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಕಾಜಿ ಹಬೀಬುಲ್ ಅವಲ್ ಮತದಾನ ಮುಗಿದ ನಂತರ ತಿಳಿಸಿದ್ದಾರೆ.
ಬಾಂಗ್ಲಾದೇಶದ ಟಿವಿ ಸ್ಟೇಷನ್‌ಗಳ ಪ್ರಕಾರ, ದೇಶದ ಒಟ್ಟು 299 ಸ್ಥಾನಗಳಲ್ಲಿ ಅವಾಮಿ ಲೀಗ್ 216 ಸ್ಥಾನಗಳನ್ನು ಗೆದ್ದಿದೆ. ಹಾಗೂ, ಸ್ವತಂತ್ರ ಅಭ್ಯರ್ಥಿಗಳು 52 ಸ್ಥಾನಗಳನ್ನು ಪಡೆದರು ಮತ್ತು ಜಾತೀಯ ಪಕ್ಷವು 11 ಸ್ಥಾನಗಳಲ್ಲಿ ಗೆದ್ದಿದೆ. ಆದರೆ, ಚುನಾವಣಾ ಆಯೋಗ ಇನ್ನೂ ಎಲ್ಲಾ ಕ್ಷೇತ್ರಗಳ ಅಂತಿಮ ಫಲಿತಾಂಶ ಪ್ರಕಟಿಸಿಲ್ಲ.
ಬಾಂಗ್ಲಾದೇಶದಲ್ಲಿ ಚುನಾವಣಾ ದಿನವು ಯಾವುದೇ ಗೊಂದಲದ ವರದಿಗಳಿಲ್ಲದೆ ಶಾಂತವಾಗಿದ್ದರೂ, ಚುನಾವಣಾ ಪೂರ್ವ ಪ್ರತಿಭಟನೆಗಳು ತೀವ್ರವಾಗಿದ್ದವು. ಕನಿಷ್ಠ 18 ಅಗ್ನಿ ಅವಘಡ ಘಟನೆಗಳು ನಡೆದಿದ್ದರೆ, ನಾಲ್ಕು ಜನ ಬಲಿಯಾಗಿದ್ದಾರೆ.