
ಒಂದು ಕಡೆ ಪಹಲ್ಗಾಮ್ ದಾಳಿ ಹಿನ್ನೆಲೆ ಭಾರತದ ಪ್ರತೀಕಾರದ ಜ್ವಾಲೆಯ ಭಯ ಮತ್ತೊಂದು ಕಡೆ ಬಲೂಚಿಸ್ತಾನ ದಾಳಿ, ಪಾಕಿಸ್ತಾನಕ್ಕೆ ಈಗ ಇಕ್ಕುಳದಲ್ಲಿ ಸಿಕ್ಕಿದಂತಾಗಿದೆ. ದಿಬಲೂಚ್ ಲಿಬರೇಶನ್ ಆರ್ಮಿ(ಬಿಎಲ್‌ಎ) ಪಾಕಿಸ್ತಾನದ ಕ್ವೆಟ್ಟಾ ಬಳಿಯ ಮಾರ್ಗತ್‌ನಲ್ಲಿ ಪಾಕಿಸ್ತಾನಿ ಸೇನಾ ಸಿಬ್ಬಂದಿಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ರಿಮೋಟ್ ಕಂಟ್ರೋಲ್ಡ್ ಐಇಡಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಕ್ವೆಟ್ಟಾದ ಉಪನಗರ ಮಾರ್ಗತ್‌ನಲ್ಲಿ ಶುಕ್ರವಾರ ಸಂಭವಿಸಿದ ಭಯೋತ್ಪಾದಕ ದಾಳಿಯಲ್ಲಿ ಹತ್ತು ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಬಿಎಲ್‌ಎ ವಕ್ತಾರ ಜಿಯಾಂಡ್ ಬಲೂಚ್ ಅವರು ಪ್ರಕಟಣೆಯಲ್ಲಿ "ಸ್ಫೋಟವು ಶತ್ರು ವಾಹನವನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ಸುಬೇದಾರ್ ಶೆಹಜಾದ್ ಅಮೀನ್, ನಾಯಿಬ್ ಸುಬೇದಾರ್ ಅಬ್ಬಾಸ್, ಸಿಪಾಯಿ ಖಲೀಲ್, ಸಿಪಾಯಿ ಜಾಹಿದ್, ಸಿಪಾಯಿ ಖುರ್ರಂ ಸಲೀಮ್ ಸೇರಿದಂತೆ 10 ಜನ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ" ಎಂದು ತಿಳಿಸಿದ್ದಾರೆ.
India Vs Pakistan: ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ; ಪಾಕ್‌ನಿಂದ ವೆಬ್‌ಸೈಟ್ ಹ್ಯಾಕ್
ಬಿಎಲ್‌ಎ ತನ್ನ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿವೆ ಎಂದು ಎಚ್ಚರಿಕೆ ನೀಡಿದೆ. "ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟವನ್ನು ತಡೆಯಲಾಗದು. ನಾವು ಶತ್ರುಗಳಿಗೆ ಪ್ರತಿದಿನವೂ ಹೊಡೆತ ನೀಡುತ್ತೇವೆ" ಎಂದು ಅವರು ಹೇಳಿದ್ದಾರೆ.
ಈ ದಾಳಿ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ನಿರಂತರ ಉದ್ವಿಗ್ನತೆಯ ಪ್ರತೀಕವಾಗಿದೆ. ಕಳೆದ ಗುರುವಾರ ಬಲೂಚಿಸ್ತಾನದಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲೂ ಏಳು ಸೇನಾ ಸಿಬ್ಬಂದಿ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು. ಈ ದಾಳಿಗಳು ಝಮುರಾನ್, ಕೊಲ್ವಾ ಹಾಗೂ ಕಲಾತ್ ಜಿಲ್ಲೆಗಳಲ್ಲಿ ನಡೆದಿದ್ದವು. ಇದೇ ವೇಳೆ, ಕೆಲವು ಪ್ರದೇಶಗಳಲ್ಲಿ ಭದ್ರತಾ ಠಾಣೆಗಳನ್ನು ವಶಪಡಿಸಿಕೊಂಡಿರುವುದಾಗಿ ಬಿಎಲ್‌ಎ ತಿಳಿಸಿದೆ. ಈ ಘಟನೆಗಳು ಪಾಕಿಸ್ತಾನಿ ಸೇನೆಯ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ.
ಪಹಲ್ಗಾಂ ರಕ್ಕಸರಿಗಾಗಿ ಕಾರ್ಯಾಚರಣೆ: ಉಗ್ರಗಾಮಿಗಳ ಬೇಟೆ ಶುರು
ಪಾಕಿಸ್ತಾನದ ಬೋಲಾನ್‌ನಲ್ಲಿ ಬಿಎಲ್‌ಎ ಜಾಫರ್ ಎಕ್ಸ್‌ಪ್ರೆಸ್ ಅನ್ನು ಅಪಹರಿಸಿದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ. ರೈಲು ಹೈಜಾಕ್ ನಲ್ಲಿ ಸುಮಾರು 339 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು ಮತ್ತು ಈ ಘಟನೆಯಲ್ಲಿ ಒಟ್ಟು 25 ಜನರು ಪ್ರಾಣ ಕಳೆದುಕೊಂಡಿದ್ದರು. ರೈಲು ಕ್ವೆಟ್ಟಾದಿಂದ ಉತ್ತರ ನಗರವಾದ ಪೇಶಾವರಕ್ಕೆ ಹೋಗುತ್ತಿದ್ದಾಗ ಬಿಎಲ್‌ಎ ಹಳಿಯನ್ನು ಸ್ಫೋಟಿಸಲಾಯ್ತು. ಇದರಿಂದಾಗಿ ಒಂಬತ್ತು ಬೋಗಿಗಳು ಮತ್ತು ಜಾಫರ್ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಸುರಂಗದೊಳಗೆ ಭಾಗಶಃ ನಿಂತಿತ್ತು, ಬಳಿಕ ಕಾರ್ಯಾಚರಣೆ ನಡೆಸಿ ಒತ್ತೆಯಾಳುಗಳನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಕಡೆಯಿಂದ ಬಿಡಿಸಿಕೊಳ್ಳಲಾಯ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ