ಕಾಲು ನೀಡಿ ಕುಳಿತ ಮಹಿಳೆಯ ಕಾಲಿನ ಕೆಳಗೆ ಸಾಗಿದ ಹಾವು: ತಣ್ಣಗೆ ಕುಳಿತ ಗಟ್ಟಿಗಿತ್ತಿ

By Anusha KbFirst Published Feb 8, 2023, 11:21 PM IST
Highlights

 ಹಾವು ಎಂದರೆ ಬಹುತೇಕರು ಹೌಹಾರಿ ಕಿರುಚಿ ಬೊಬ್ಬಿಡುತ್ತಾ ಓಡಿ ಹೋಗೋದೇ ಹೆಚ್ಚು,  ಆದರೆ ಈ ಹಾವುಗಳು ತಮ್ಮಷ್ಟಕ್ಕೆ ತಾವಿರುತ್ತವೆ. ತನಗೆ ಹಾನಿ ಮಾಡದ ಹೊರತು ಹಾವುಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಎಂಬುದಕ್ಕೆ ಇಲ್ಲಿ ನಡೆದಿರುವ ಘಟನೆಯೊಂದು ಸಾಕ್ಷಿಯಾಗಿದೆ. 

ಸಿಡ್ನಿ: ಹಾವು ಎಂದರೆ ಬಹುತೇಕರು ಹೌಹಾರಿ ಕಿರುಚಿ ಬೊಬ್ಬಿಡುತ್ತಾ ಓಡಿ ಹೋಗೋದೇ ಹೆಚ್ಚು,  ಆದರೆ ಈ ಹಾವುಗಳು ತಮ್ಮಷ್ಟಕ್ಕೆ ತಾವಿರುತ್ತವೆ. ತನಗೆ ಹಾನಿ ಮಾಡದ ಹೊರತು ಹಾವುಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಎಂಬುದಕ್ಕೆ ಇಲ್ಲಿ ನಡೆದಿರುವ ಘಟನೆಯೊಂದು ಸಾಕ್ಷಿಯಾಗಿದೆ.  ಈ ವಿಡಿಯೋವನ್ನು ಆಸ್ಟ್ರೇಲಿಯಾದ Harrison's Gold Coast and Brisbane Snake Catcher ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಯುವತಿ  ನೆಲದ ಮೇಲೆ ಸಿಗರೇಟ್ ಸೇದುತ್ತಾ ಕುಳಿತಿದ್ದಾಳೆ. ಈ ವೇಳೆ ಅವಳತ್ತ ಬರುವ ಹಾವು ಕಾಲು ನೀಡಿ ಕುಳಿತ ಆಕೆಯ ಕಾಲುಗಳ ಸೆರೆಯಲ್ಲಿ ನುಗ್ಗಿಕೊಂಡು ಮುಂದೆ ಸಾಗುತ್ತದೆ. ಆದರೆ ಆಕೆ ಮಾತ್ರ ಸ್ವಲ್ಪವೂ ಹೆದರದೇ ಹಾವಿನ ಚಲನವಲನಗಳನ್ನು ಗಮನಿಸುತ್ತಾರೆ. ಹಾವು ಕೂಡ ಆಕೆಗೆ ಏನು ಮಾಡದೇ ಆಕೆಯ ಮೇಲೆ ಸಾಗಿ ತನ್ನ ಗುರಿಯತ್ತ ಚಲಿಸುತ್ತದೆ. 

ಹಲವು ವಿಚಿತ್ರ ಪ್ರಾಣಿಗಳ ಆವಾಸ ಸ್ಥಾನ ಎನಿಸಿರುವ ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದೆ. ಕಾಂಗರೂಗಳ ಕಿಕ್‌ ಬಾಕ್ಸಿಂಗ್‌ನಿಂದ ಹಿಡಿದು ದೊಡ್ಡ ಗಾತ್ರದ ಮೊಸಳೆಗಳು ಬೆಡ್ ಕೆಳಗೆ ಕಾಣಸಿಗುವುದರ ಜೊತೆ ಆಸ್ಟ್ರೇಲಿಯಾ ಹಲವು ರೀತಿಯ ಹಾವುಗಳಿಗೆ ಆವಾಸ ಸ್ಥಾನವಾಗಿದೆ.  ಇಲ್ಲಿ ಮನೆ ಹಿಂಭಾಗದ ತೋಟಗಳು, ಒಣಭೂಮಿಗಳು ಮತ್ತು ಅರಣ್ಯ ಪ್ರದೇಶ ಹೀಗೆ ಎಲ್ಲೆಂದರಲ್ಲಿ ಹಾವುಗಳು ಹರಿದಾಡುವುದನ್ನು ನೋಡಿ  ಆಶ್ಚರ್ಯಪಡಬೇಕಾಗಿಲ್ಲ ಇಲ್ಲಿ ಹಾವುಗಳು ಎಲ್ಲಾ ರೀತಿಯ ಭೂಮಿಗೆ ಹೊಂದಿಕೊಳ್ಳದಿದ್ದರೂ ದೇಶದ ಎಲ್ಲೆಂದರಲ್ಲಿ ಅವುಗಳನ್ನು ಕಾಣಬಹುದಾಗಿದೆ. 

ವಿಷಕಾರಿ ಹಾವು ಸಾಕಣೆ ಮೂಲಕವೇ 100 ಕೋಟಿ ಸಂಪಾದಿಸುತ್ತೆ ಈ ಗ್ರಾಮ!

ಆಸ್ಟ್ರೇಲಿಯಾದ ದೊಡ್ಡ ಭೂಪ್ರದೇಶದಲ್ಲಿನ ವಿಭಿನ್ನ ಹವಾಮಾನಗಳು ಹಾವಿನ ಸಮೃದ್ಧಿಯ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೇ ಇದು ಅವರಿಗೆ ಅನೇಕ ವಿಭಿನ್ನ ಮತ್ತು ವಿಶಿಷ್ಟ ಆವಾಸಸ್ಥಾನಗಳನ್ನು ಒದಗಿಸಿದೆ. ನೀವು ಆಸ್ಟ್ರೇಲಿಯಾ  (Australia) ಹಾಗೂ ಹಾವುಗಳ ಕುರಿತು ಗೂಗಲ್‌ನಲ್ಲಿ ಹುಡುಕಾಟ ನಡೆಸಿದರೆ ನಿಮಗೆ ಹಾವಿಗೆ ಸಂಬಂಧಿಸಿದ ಹಲವಾರು ವಿಲಕ್ಷಣ ದೃಶ್ಯಗಳು ಕಾಣ ಸಿಗುತ್ತವೆ. ಹಾಗೆಯೇ ಈಗ ಮಹಿಳೆಯೊಬ್ಬರು ಹಾವು ನೋಡಿ ಹೆದರದೇ ತಣ್ಣ ನೆ ಕುಳಿತಿರುವ ವಿಡಿಯೋ ವೈರಲ್ ಆಗಿದೆ. 

32 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮಹಿಳೆ ಸಿಗರೇಟ್ ಸೇದುತ್ತಿದ್ದರೆ, ಆಕೆಯತ್ತ ಬಂದ ಹಾವು ಆಕೆಯ ಕಾಲುಗಳ ಕೆಳಗಿರುವ ಜಾಗದಲ್ಲಿ ನುಗ್ಗಿಕೊಂಡು ಮುಂದೆ ಸಾಗುತ್ತದೆ. ಇದೇ ವೇಳೆ ಆಕೆ ಸಿಗರೇಟ್ ಸೇದುತ್ತಾ ವಿಡಿಯೋ ಮಾಡುವವರ ಜೊತೆ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.  ಬಹುತೇಕ ಹಾವುಗಳು ಮನುಷ್ಯರಿಗೆ ಹಾನಿ ಮಾಡಲು ಬಯಸುವುದಿಲ್ಲ ಎಂಬುದಕ್ಕೆ ಈ ವಿಡಿಯೋ ಒಂದು ಉತ್ತಮ ಉದಾಹರಣೆಯಾಗಿದೆ. ಹಾವುಗಳು ತಮಗೆ ಜೀವ ಭಯ ಉಂಟಾದಾಗ ಮಾತ್ರ ದಾಳಿ ಮಾಡುತ್ತವೆ. ಈ ವಿಡಿಯೋದಲ್ಲಿರುವ ಹಾವು ಈಸ್ಟರ್ನ್ ಬ್ರೌನ್ ಹಾವಾಗಿದ್ದು,  ವಿಡಿಯೋದಲ್ಲಿರುವ ಮಹಿಳೆಯ 24 ವರ್ಷದ ಐಲಾ ಮನ್ಸನ್ ಆಗಿದ್ದು, ಈಕೆ ಹ್ಯಾರಿಸನ್ (Harrison) ಅವರ ಉದ್ಯೋಗಿಯಾಗಿದ್ದಾರೆ. 

ಉಡುಪಿ: ಅಪರೂಪದ ಹಾರುವ ಹಾವು ಪತ್ತೆ..!

ಕ್ವೀನ್ಸ್‌ಲ್ಯಾಂಡ್‌ನ (Queensland) ಟ್ಯಾಂಬೊರಿನ್‌ನಲ್ಲಿರುವ (Tamborine) ಮನೆಯಿಂದ ಹಾವನ್ನು ಹೊರತೆಗೆದ ನಂತರ ಆವಹಾವು ಆಕೆಯ ಹತ್ತಿರ ಬಂದಿತು ಎಂದು ವರದಿಗಳು ತಿಳಿಸಿವೆ, ಅಲ್ಲಿ ಅದು ಮನೆಯಲ್ಲಿ  ಫ್ರಿಡ್ಜ್ ಕೆಳಗೆ ಅಡಗಿತ್ತು. ಈ ವಿಡಿಯೋವನ್ನು  ಹಾವು ಹಿಡಿಯುವ ಕಂಪನಿಯು ಹಾವು ಸಮೀಪಿಸಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪೋಸ್ಟ್ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಇನ್ನು ಈ ಈಸ್ಟರ್ನ್ ಬ್ರೌನ್ ಹಾವು ಸಾಮಾನ್ಯ ಕಂದು ಹಾವಾಗಿದ್ದು, ಈ ಪ್ರಭೇದವು ಪೂರ್ವ ಮತ್ತು ಮಧ್ಯ ಆಸ್ಟ್ರೇಲಿಯಾ (central Australia) ಮತ್ತು ದಕ್ಷಿಣ ನ್ಯೂಗಿನಿಯಾದಲ್ಲಿ (southern New Guinea) ಆವಾಸ ಸ್ಥಾನ ಹೊಂದಿದೆ.

 

click me!