ರಾಜೀನಾಮೆ ನೀಡದ ಇಮ್ರಾನ್‌: ಇಂದು ಕ್ಲೈಮ್ಯಾಕ್ಸ್‌ ಸಾಧ್ಯತೆ!

Published : Mar 28, 2022, 03:00 AM IST
ರಾಜೀನಾಮೆ ನೀಡದ ಇಮ್ರಾನ್‌: ಇಂದು ಕ್ಲೈಮ್ಯಾಕ್ಸ್‌ ಸಾಧ್ಯತೆ!

ಸಾರಾಂಶ

ಕಳೆದ ನಾಲ್ಕು ವರ್ಷಗಳಿಂದ ಪಾಕಿಸ್ತಾನದ ಚುಕ್ಕಾಣಿ ಹಿಡಿದಿರುವ ಮಾಜಿ ಕ್ರಿಕೆಟಿಗ, ಪ್ರಧಾನಿ ಇಮ್ರಾನ್‌ ಖಾನ್‌ ಹಣೆಬರಹ ಸೋಮವಾರ ನಿರ್ಧಾರವಾಗುವ ಸಾಧ್ಯತೆ ಇದೆ. 

ಇಸ್ಲಾಮಾಬಾದ್‌ (ಮಾ.28): ಕಳೆದ ನಾಲ್ಕು ವರ್ಷಗಳಿಂದ ಪಾಕಿಸ್ತಾನದ (Pakistan) ಚುಕ್ಕಾಣಿ ಹಿಡಿದಿರುವ ಮಾಜಿ ಕ್ರಿಕೆಟಿಗ, ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಹಣೆಬರಹ ಸೋಮವಾರ ನಿರ್ಧಾರವಾಗುವ ಸಾಧ್ಯತೆ ಇದೆ. ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಸೂಚನೆ ಸೋಮವಾರ ಮತಕೆ ಹೋಗುವ ನಿರೀಕ್ಷೆ ಇದ್ದು, ಇಮ್ರಾನ್‌ ಭವಿಷ್ಯದ ನಿರ್ಣಯವಾಗಲಿದೆ.

ಸ್ವಪಕ್ಷೀಯರೇ ಬಂಡಾಯ ಎದ್ದು, ವಿಪಕ್ಷಗಳಿಗೆ ಸಾಥ್‌ ನೀಡಿರುವ ಕಾರಣ ಭಾನುವಾರವೇ ಅವರು ರಾಜೀನಾಮೆ ನೀಡಬಹುದು ಎನ್ನಲಾಗಿತ್ತು. ಇಸ್ಲಾಮಾಬಾದ್‌ನಲ್ಲಿ ಅವರು ರಾತ್ರಿ ಬೃಹತ್‌ ರಾರ‍ಯಲಿ ನಡೆಸಿ ಬಹುಹೊತ್ತು ಭಾಷಣ ಕೂಡ ಮಾಡಿದರು. ಆದರೆ ತಮ್ಮ ಪದಚ್ಯುತಿಗೆ ವಿದೇಶಗಳ ಜತೆ ವಿಪಕ್ಷಗಳು ಕೈಜೋಡಿಸಿವೆ ಎಂದು ಆರೋಪಿಸಿದ ಅವರು, ಸರ್ಕಾರದ ಸಾಧನೆ ವಿವರಿಸಿದರು ಹಾಗೂ ಪದತ್ಯಾಗದ ಚಕಾರ ಎತ್ತಲಿಲ್ಲ. ಹೀಗಾಗಿ ಸೋಮವಾರ ಕ್ಲೈಮ್ಯಾಕ್ಸ್‌ ಏರ್ಪಡುವ ಸಾಧ್ಯತೆ ಇದೆ.

ಇಮ್ರಾನ್‌ಗೆ ‘ಬಲ’ ಇಲ್ಲ: 2018ರಿಂದ ಪಾಕ್‌ ಪ್ರಧಾನಿ ಆಗಿರುವ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ಪಕ್ಷದ ನೇತಾರ ಇಮ್ರಾನ್‌ ಖಾನ್‌ ಇತ್ತೀಚೆಗೆ ರಾಜಕೀಯ ಅಸ್ಥಿರತೆ ಎದುರಿಸುತ್ತಿದ್ದಾರೆ. ಇದನ್ನು ಮನಗಂಡ ಪ್ರತಿಪಕ್ಷಗಳು ಅವರ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಇಮ್ರಾನ್‌ ವಿರುದ್ಧ ಬಂಡೆದ್ದಿರುವ 20ಕ್ಕೂ ಹೆಚ್ಚು ಸಂಸದರು ಅವಿಶ್ವಾಸದ ಪರವಾಗಿ ಮತ ಚಲಾಯಿಸುವುದಾಗಿ ಬಹಿರಂಗವಾಗಿ ಸಾರಿದ್ದಾರೆ. 

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಇಂದು ಪದತ್ಯಾಗ?: ಅವಿಶ್ವಾಸ ಜೊತೆ ಬಂಧನದ ಭೀತಿ!

2-3 ಸಂಸದರು ಪಕ್ಷಾಂತರ ಮಾಡುವ ಬೆದರಿಕೆ ಒಡ್ಡಿದ್ದಾರೆ. ಏತನ್ಮಧ್ಯೆ, ಇಮ್ರಾನ್‌ ಸರ್ಕಾರದ 50 ಸಚಿವರು ದಿಢೀರನೆ ‘ನಾಪತ್ತೆಯಾಗಿದ್ದಾರೆ’ ಎನ್ನಲಾಗಿದ್ದು, ಇದು ಅವರನ್ನು ಮತ್ತಷ್ಟುಇಕ್ಕಟ್ಟಿಗೆ ಸಿಲುಕಿಸಿದೆ. 342 ಸದಸ್ಯ ಬಲದ ನ್ಯಾಷನಲ್‌ ಅಸೆಂಬ್ಲಿಯಲ್ಲಿ ಇಮ್ರಾನ್‌ ನೇತೃತ್ವದ ಪಿಟಿಐ 155 ಸ್ಥಾನ ಹೊಂದಿದೆ. ಬಹುಮತಕ್ಕೆ ಬೇಕಿರುವ 172 ಸ್ಥಾನದಿಂದ ಪಿಟಿಐ ಬಲು ದೂರವಿದೆ.

ಮೈತ್ರಿ ಮುರಿದು ಇಮ್ರಾನ್ ವಿರುದ್ಧ ಹೋರಾಟ: ಪಾಕಿಸ್ತಾನದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಇದೀಗ ಪತನದ ಹಾದಿಯಲ್ಲಿದೆ. ಅವಿಶ್ವಾಸ ನಿರ್ಣಯ ಮಂಡಿಸಿದ ಪರಿಣಾಮ ಸಂಸತ್ತಿನಲ್ಲಿ ವಿಶ್ವಾಸ ಮತಯಾತನೆ ಮಾಡಬೇಕಾದ ಪರಿಸ್ಥಿತಿಯಲ್ಲಿ ಇಮ್ರಾನ್ ಸಿಲುಕಿದ್ದಾರೆ. ಇದರ ನಡುವೆ ಸ್ವಪಕ್ಷದವರೇ ಇಮ್ರಾನ್ ವಿರುದ್ಧ ತಿರುಗಿಬಿದ್ದಿದಾರೆ. ಇದೀಗ ಬಲೂಚಿಸ್ತಾನದ ಜಮೂರಿ ವತನ್ ಪಾರ್ಟಿ(JWP) ಮೈತ್ರಿ ಮುರಿದುಕೊಂಡಿದೆ. ಇಷ್ಟೇ ಅಲ್ಲ ಇಮ್ರಾನ್ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿದೆ ಪಾಕಿಸ್ತಾನದ ಸಂಸತ್ತಿನಲ್ಲಿ ಸೋಮವಾರ(ಮಾ.28) ಇಮ್ರಾನ್ ಖಾನ್ ವಿಶ್ವಾಸ ಮತ ಯಾಚನೆ ಮಾಡುವ ಸಾಧ್ಯತೆ ಇದೆ.

 ಆದರೆ ಇದಕ್ಕಿಂತ ಮೊದಲೇ ಇಮ್ರಾನ್ ಖಾನ್ ರಾಜೀನಾಮೆ ನೀಡುವ ಸುದ್ದಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇಮ್ರಾನ್ ಖಾನ್ ಪ್ರಧಾನಿಯಾಗಲು ತೆಹ್ರಿಕ್ ಇ ಇನ್ಸಾಫ್ ಪಕ್ಷದ ಜೊತೆ ಮೈತ್ರಿಮಾಡಿಕೊಂಡಿದ್ದ ಬಲೂಚಿಸ್ತಾನದ ಜಮೂರಿ ವತನ್ ಪಾರ್ಟಿ ಶಹಜೈನ್ ಬುಗ್ತಿ ಮೈತ್ರಿ ಕಡಿದುಕೊಂಡಿದ್ದಾರೆ. ಇಮ್ರಾನ್ ಸರ್ಕಾರದಲ್ಲಿ ಶಹಜೈನ್ ಬುಗ್ತಿ ಬಲೂಚಿಸ್ತಾನದಲ್ಲಿ ಸೌಹಾರ್ದತೆ ಹಾಗೂ ಸಮನ್ವಯಕ್ಕಾಗಿ ಪ್ರಧಾನ ಮಂತ್ರಿಯ ವಿಶೇಷ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇಮ್ರಾನ್ ವಿರುದ್ಧ ಸಿಡಿದೆದ್ದಿರುವ ಶಹಜೈನ್ ಬುಗ್ತಿ ಮೈತ್ರಿ ಮುರಿದು, ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ ಪಕ್ಷ ಸೇರಿಕೊಂಡಿದ್ದಾರೆ. 

ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್  ಸದ್ಯ ಇಮ್ರಾನ್ ಖಾನ್ ವಿರುದ್ಧ ಹೋರಾಟ ಮಾಡುತ್ತಿದೆ.  ಶಹಜೈನ್ ಬುಗ್ತಿ ಬಲೂಚಿಸ್ತಾನ ಪ್ರಾಂತ್ಯದ ಪ್ರಮುಖ ನಾಯಕ. ಶಹಜೈನ್ ಬುಗ್ತಿ  ಬಲೂಚಿಸ್ತಾನದ ಅತ್ಯಂತ ಪ್ರಭಾವಿ ನಾಯಕ ಹಾಗೂ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ಅಕ್ಬರ್ ಬುಗ್ತಿಯ ಮೊಮ್ಮಗ. 2006ರಲ್ಲಿ ಅಕ್ಬರ್ ಬುಗ್ತಿಯನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿತ್ತು. ಪಾಕಿಸ್ತಾನ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶುಕ್ರವಾರ(ಮಾ.25) ರಂದು ನಡೆಯಬೇಕಿದ್ದ ವಿಶ್ವಾಸ ಮತಯಾಚನೆ ಕೆಲ ಕಾರಣಗಳಿಂದ ಮುಂದೂಡಲಾಗಿದೆ. 

No Confidence Motion ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಮತ್ತೊಂದು ಸಂಕಷ್ಠ, 50 ಸಚಿವರು ನಾಪತ್ತೆ!

ಶುಕ್ರವಾರ ಕರೆದಿದ್ದ ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿ ಕಲಾಪವನ್ನು ದಿಢೀರ್ ಸೋಮವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ಸೋಮವಾರ ಇಮ್ರಾನ್ ಖಾನ್ ವಿಶ್ವಾಸ ಮತ ಯಾತನೆ ಮಾಡುವ ಸಾಧ್ಯತೆ ಇದೆ. ಆದರೆ ಇಂದು ಸಂಜೆ ಆಯೋಜಿಸಿರುವ ರ್ಯಾಲಿಯಲ್ಲಿ ಇಮ್ರಾನ್ ಖಾನ್ ರಾಜೀನಾಮೆ ಘೋಷಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ಏಕಾಂಗಿಯಾಗಿರುವ ಇಮ್ರಾನ್ ಖಾನ್ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಧುಮಕಲು ರೆಡಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ವಿರೋಧಿ ಬಾಂಗ್ಲಾದೇಶದಲ್ಲೀಗ ಕಾಂಡೋಮ್‌ ಬರಗಾಲ, ಕೇವಲ 38 ದಿನಗಳ ಸ್ಟಾಕ್‌!
540 ಉದ್ಯೋಗಿಗಳನ್ನ ಕೋಟ್ಯಾಧಿಪತಿಗಳಾಗಿ ಮಾಡಿದ ಸಿಇಒ, ಪ್ರತಿಯೊಬ್ಬರಿಗೂ ಸಿಕ್ಕಿದ್ದು ₹3.7 ಕೋಟಿ ಬೋನಸ್