ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಪ್ಯಾಂಟ್ ಧರಿಸೋ ಸ್ಟೈಲ್ ವೈರಲ್

Published : Feb 25, 2025, 02:20 PM ISTUpdated : Feb 25, 2025, 03:39 PM IST
ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಪ್ಯಾಂಟ್ ಧರಿಸೋ ಸ್ಟೈಲ್ ವೈರಲ್

ಸಾರಾಂಶ

ಭೂಮಿಯಿಂದ ದೂರದ ಬಾಹ್ಯಾಕಾಶದಲ್ಲಿ ಜೀವನ ವಿಭಿನ್ನವಾಗಿದೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ದಿನನಿತ್ಯದ ಕೆಲಸಗಳು ಕಷ್ಟ. ಗಗನಯಾತ್ರಿ ಡಾನ್ ಪೆಟ್ಟಿಟ್, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ಯಾಂಟ್ ಧರಿಸುವ ವಿಡಿಯೋ ಹಂಚಿಕೊಂಡಿದ್ದಾರೆ. ಮೊದಲಿಗೆ, ಹಾರಿ ಬಂದು ಜಂಪ್ ಮಾಡಿ ಪ್ಯಾಂಟ್ ಧರಿಸಿದ್ದರು. ನಂತರ, ನೇರವಾಗಿ ಕಾಲು ಹಾಕಿ ಪ್ಯಾಂಟ್ ಧರಿಸುವ ವಿಡಿಯೋ ಪ್ರಕಟಿಸಿದರು. ಡಾನ್ ಪೆಟ್ಟಿಟ್ ನಾಸಾದ ಗಗನಯಾತ್ರಿ ಮತ್ತು ರಾಸಾಯನಿಕ ಎಂಜಿನಿಯರ್. ಅವರು ಬಾಹ್ಯಾಕಾಶದಲ್ಲಿ ಹಲವು ತಿಂಗಳುಗಳನ್ನು ಕಳೆದಿದ್ದಾರೆ.

ಭೂಮಿ (Earth)ಯಿಂದ ಲಕ್ಷಾಂತರ ಕಿಲೋಮೀಟರ್ ದೂರದಲ್ಲಿರುವ ಬಾಹ್ಯಾಕಾಶ (space)ದಲ್ಲಿ ಮಾನವ ಜೀವನ ಸಂಪೂರ್ಣ ವಿಭಿನ್ನವಾಗಿದೆ. ಶೂನ್ಯ ಗುರುತ್ವಾಕರ್ಷಣೆ (zero gravity)ಯಲ್ಲಿ ದೈನಂದಿನ ಕೆಲಸಗಳನ್ನು ಮಾಡೋದು ಸವಾಲಾಗುತ್ತೆ.  ಹಲ್ಲುಜ್ಜೋದು, ಸ್ನಾನ ಮಾಡೋದು, ನೀರು ಕುಡಿಯೋದು ಇಲ್ಲಿ ಸುಲಭವಲ್ಲ.  ಗಗನಯಾತ್ರಿ (astronaut) ಗಳ ಬಗ್ಗೆ ಜನಸಾಮಾನ್ಯರಿಗೆ ಕುತೂಹಲವಿರುತ್ತದೆ. ಸದಾ ಹಾರಾಡುವ ಅವರು ಹೇಗೆ ನಿತ್ಯದ ಕೆಲಸ ಮಾಡ್ತಾರೆ ಎನ್ನುವುದಕ್ಕೆ ಗಗನಯಾತ್ರಿಗಳು ವಿಡಿಯೋ ಮೂಲಕ ಮಾಹಿತಿ ನೀಡ್ತಿರುತ್ತಾರೆ.  ಈಗ ನಾಸಾದ ರಾಸಾಯನಿಕ ಎಂಜಿನಿಯರ್ ಮತ್ತು ಗಗನಯಾತ್ರಿ ಡಾನ್ ಪೆಟ್ಟಿಟ್ (astronaut Dan Pettit), ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಡಾನ್ ಪೆಟಿಟ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಪ್ಯಾಂಟ್ ಧರಿಸುವ ತಮ್ಮ ವಿಶಿಷ್ಟ ಶೈಲಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.  ಡಾನ್ ಪೆಟ್ಟಿಟ್ ಫೆಬ್ರವರಿ 21ರಂದು ಒಂದು ವಿಡಿಯೋ ಹಂಚಿಕೊಂಡಿದ್ದರು. ಅದಕ್ಕೆ ಬಳಕೆದಾರರು ಮರು ಪ್ರಶ್ನೆ ಕೇಳಿದ್ದರು. ಆ ಪ್ರಶ್ನೆಗೆ ಡಾನ್ ಪೆಟ್ಟಿಟ್ ಇನ್ನೊಂದು ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ.

ಎಕ್ಸ್ ಖಾತೆಯಲ್ಲಿ ಡಾನ್ ಪೆಟ್ಟಿಟ್ ಹಂಚಿಕೊಂಡ ಮೊದಲ ವಿಡಿಯೋದಲ್ಲಿ ಪ್ಯಾಂಟ್ ಇದೆ. ಮೇಲಿನಿಂದ ಹಾರಿ ಕೆಳಗೆ ಬರುವ ಡಾನ್ ಪೆಟ್ಟಿಟ್ ನಂತ್ರ ಸ್ವಲ್ಪ ಜಂಪ್ ಮಾಡಿ ಎರಡೂ ಕಾಲನ್ನು ಒಟ್ಟಿಗೆ ಪ್ಯಾಂಟ್ ಒಳಗೆ ಹಾಕ್ತಾರೆ. ಇದು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಜನರು ಡಾನ್ ಪೆಟ್ಟಿಟ್ ಪ್ಯಾಂಟ್ ಧರಿಸುವ ಸ್ಟೈಲ್ ಇಷ್ಟಪಟ್ಟಿದ್ದರು. ನೀವು ಪ್ಯಾಂಟ್ ಒಳಗೆ ನೇರವಾಗಿ ಕಾಲು ಹಾಕ್ತೀರಿ ಅಂತ ನಾವು ಭಾವಿಸಿದ್ದೆವು ಎಂದು ಕೆಲವರು ಕಮೆಂಟ್ ಮಾಡಿದ್ದರು. ಮನೆಯಲ್ಲಿ ಇದನ್ನು ಪ್ರಯತ್ನಿಸಿ, ವಿಫಲವಾದೆ, ಒಳ್ಳೆ ಮಾಹಿತಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದರು.

ಆದಷ್ಟು ಶೀಘ್ರವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಧ್ವಂಸ ಮಾಡಿ ಎಂದ ಎಲಾನ್‌ ಮಸ್ಕ್‌!

ನೇರವಾಗಿ ಪ್ಯಾಂಟ್ ಧರಿಸ್ತೀರಿ ಎಂಬ ನಿರೀಕ್ಷೆ ಇತ್ತು ಎಂಬ ಬಳಕೆದಾರರ ಕಮೆಂಟ್ ಗೆ ಡಾನ್ ಪೆಟ್ಟಿಟ್ ಉತ್ತರ ನೀಡಿದ್ದಾರೆ. ಅವರು ಇನ್ನೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮೇಲಿನಿಂದ ಕೆಳಗೆ ಬರುವ ಡಾನ್ ಪಿಟ್ಟರ್, ತಮ್ಮ ಕಾಲುಗಳನ್ನು ಪ್ಯಾಂಟ್ ಒಳಗೆ ಹಾಕಿ, ಪ್ಯಾಂಟ್ ಧರಿಸುತ್ತಾರೆ. ನೀವೆಲ್ಲ ಇದು ಸಾಧ್ಯವೇ ಎಂದು ಕೇಳಿದ್ದೀರಿ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋ ಕೂಡ ಬಳಕೆದಾರರ ಮೆಚ್ಚುಗೆ ಗಳಿಸಿದೆ. 9 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಬಂದಿದೆ. ಡಾನ್ ಪೆಟ್ಟಿಟ್, ಆಗಾಗ ಗಗನಯಾತ್ರಿಗಳ ಜೀವನದ ಬಗ್ಗೆ ಮಾಹಿತಿ ನೀಡ್ತಿರುತ್ತಾರೆ. ಕೆಲ ದಿನಗಳ ಹಿಂದೆ ಕ್ಯಾಮರಾ ಲೆನ್ಸ್ ಬದಲಿಸುವ ವಿಡಿಯೋ ಹಂಚಿಕೊಂಡಿದ್ದರು. 

ಗಗನಯಾತ್ರಿ ಅಂತರಿಕ್ಷದಲ್ಲೇ ಸಾವನ್ನಪ್ಪಿದ್ರೆ… ಅಂತ್ಯಸಂಸ್ಕಾರ ಹೇಗೆ ಮಾಡ್ತಾರೆ?

ಡಾನ್ ಪೆಟ್ಟಿಟ್  ಯಾರು? : ಡಾನ್ ಪೆಟ್ಟಿಟ್ ಒಬ್ಬ ಅಮೇರಿಕನ್ ಗಗನಯಾತ್ರಿ, ರಾಸಾಯನಿಕ ಎಂಜಿನಿಯರ್ ಮತ್ತು ಸಂಶೋಧಕರಾಗಿದ್ದು, ಯುಎಸ್ ಬಾಹ್ಯಾಕಾಶ ಸಂಸ್ಥೆ NASAಯಲ್ಲಿ ಕೆಲಸ ಮಾಡ್ತಿದ್ದಾರೆ. ಏಪ್ರಿಲ್ 20, 1955 ರಂದು ಒರೆಗಾನ್‌ನ ಸಿಲ್ವರ್ಟನ್‌ನಲ್ಲಿ ಜನಿಸಿದ ಡಾನ್ ಪೆಟ್ಟಿಟ್, ಅರಿಜೋನಾ ವಿಶ್ವವಿದ್ಯಾಲಯದಿಂದ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದರು. ನಾಸಾದಲ್ಲಿ ಗಗನಯಾತ್ರಿಯಾಗಿ, ಅವರು ಅನೇಕ ಬಾಹ್ಯಾಕಾಶ ಯಾತ್ರೆಗಳನ್ನು ನಡೆಸಿದ್ದಾರೆ.  ಅವರು ಮೊದಲ ಬಾರಿ  2002 ರಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನೌಕೆ ಎಂಡೀವರ್ (STS-113) ನಲ್ಲಿ ಐದು ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದ್ದರು.  ಅದಾದ ನಂತರ, ಅವರು 2008 ರಲ್ಲಿ STS-126 ಕಾರ್ಯಾಚರಣೆ ಭಾಗವಾಗಿದ್ದರು.  ಈ ವೇಳೆ ISS ಗೆ ಅಗತ್ಯ ಉಪಕರಣಗಳನ್ನು ತಲುಪಿಸಿದ್ದರು. ನಂತರ 2011-12 ರಲ್ಲಿ ಅವರು ಎಕ್ಸ್‌ಪೆಡಿಶನ್ 30/31 ರ ಭಾಗವಾದರು ಮತ್ತು 6 ತಿಂಗಳು ಬಾಹ್ಯಾಕಾಶದಲ್ಲಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!