
ನವದೆಹಲಿ (ಫೆ.25): ಚೀನಾದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಈಗ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಚೀನಾ ಸರ್ಕಾರ ಮತ್ತು ಅಲ್ಲಿನ ಕಂಪನಿಗಳು ಯುವಕರ ಮೇಲೆ ವಿಚಿತ್ರ ನಿಯಮಗಳನ್ನು ಹೇರುತ್ತಿವೆ. ಚೀನಾದ ಕಂಪನಿಯೊಂದು ಇತ್ತೀಚೆಗೆ ತನ್ನ ಉದ್ಯೋಗಿಗಳ ಮೇಲೆ ಬೇಗ ಮದುವೆಯಾಗಿ ಮಕ್ಕಳನ್ನು ಹೆರುವಂತೆ ಒತ್ತಡ ಹೇರಿದೆ. ಹೀಗೆ ಮಾಡದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಸೂಚನೆ ನಿಡಿದ.
ಸೆಪ್ಟೆಂಬರ್ 2025ರ ಮೊದಲು ಎಲ್ಲ ಉದ್ಯೋಗಿಗಳು ಮದುವೆಯಾಗಬೇಕು: ಚೀನಾದ ಶಾಂಡೊಂಗ್ ಪ್ರಾಂತ್ಯದಲ್ಲಿರುವ Shandong Shuntian Chemical Group ತನ್ನ 1200ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಒಂದು ವಿಚಿತ್ರ ಆದೇಶವನ್ನು ನೀಡಿದೆ. ಅದರ ಪ್ರಕಾರ 28ರಿಂದ 58 ವರ್ಷ ವಯಸ್ಸಿನ ಅವಿವಾಹಿತ ಮತ್ತು ವಿಚ್ಛೇದಿತ ಉದ್ಯೋಗಿಗಳು 2025ರ ಸೆಪ್ಟೆಂಬರ್ ಒಳಗೆ ಮದುವೆಯಾಗಬೇಕು. ಹೀಗೆ ಮಾಡದಿದ್ದರೆ ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು ಎಂದು ಎಚ್ಚರಿಸಿದೆ.
ನೋಟೀಸ್‌ನಲ್ಲಿ ಕಂಪನಿಯ ನೇರ ಮಾತು: ಮಾರ್ಚ್ ಅಂತ್ಯದೊಳಗೆ ಮದುವೆಯಾಗದ ಉದ್ಯೋಗಿಗಳು ಮಾರ್ಚ್ ಅಂತ್ಯದ ವೇಳೆಗೆ ಈ ಬಗ್ಗೆ ಪತ್ರವನ್ನು ಬರೆಯಬೇಕು ಎಂದು ಚೀನಾ ಕಂಪನಿ ಉದ್ಯೋಗಿಗಳಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟವಾಗಿ ಹೇಳಿದೆ. ಇದರ ಜೊತೆಗೆ ಜೂನ್ ಅಂತ್ಯದವರೆಗೆ ಯಾರು ಅವಿವಾಹಿತರಾಗಿರುತ್ತಾರೋ ಅವರ ಬಗ್ಗೆ ಕಂಪನಿಯು ತನ್ನದೇ ಆದ ರೀತಿಯಲ್ಲಿ ಮೌಲ್ಯಮಾಪನ ಮಾಡುತ್ತದೆ ಮತ್ತು ಕಂಪನಿಯಲ್ಲಿ ಅವರ ಭವಿಷ್ಯದ ಬಗ್ಗೆ ಮುಂದೇನು ಮಾಡಬೇಕು ಎಂದು ನಿರ್ಧರಿಸುತ್ತದೆ.ಸೆಪ್ಟೆಂಬರ್ ಅಂತ್ಯದವರೆಗೆ ಮದುವೆಯಾಗದವರನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ಎಂದು ತಿಳಿಸಿದೆ.
ಚೀನಾ ಕಂಪನಿಯ ಈ ವಿಚಿತ್ರ ಆದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಟೀಕಿಸಲಾಗುತ್ತಿದೆ.'ಈ ಹುಚ್ಚು ಕಂಪನಿಯು ತನ್ನ ಕೆಲಸದ ಬಗ್ಗೆ ಗಮನ ಹರಿಸಬೇಕು. ಬೇರೆಯವರ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸುವ ಹಕ್ಕು ಇವರಿಗೆ ಯಾರು ಕೊಟ್ಟರು?' ಎಂದು ಒಬ್ಬ ಯೂಸರ್ ಬರೆದಿದ್ದಾರೆ. 'ಚೀನಾ ವಿವಾಹ ಕಾನೂನು ನಮಗೆ ಮದುವೆಯಾಗುವ ಅಥವಾ ಆಗದಿರುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ..' ಎಂದು ಬರೆದಿದ್ದಾರೆ. 'ಯಾವುದೇ ಕಂಪನಿಯ ಕಾರ್ಪೊರೇಟ್ ನಿಯಮವು ಕಾನೂನು ಮತ್ತು ಸಾಮಾಜಿಕ ನೀತಿಗಳನ್ನು ಮೀರಿ ಹೋಗುವುದು ಸರಿಯಲ್ಲ..' ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಕೊನೆಗೂ ಕಂಪನಿ ತನ್ನ ನಿರ್ಧಾರವನ್ನು ಬದಲಾಯಿಸಿದೆ. ಸ್ಥಳೀಯ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಭದ್ರತಾ ಬ್ಯೂರೋ ಕಂಪನಿಯ ನೋಟಿಸ್ ಅನ್ನು ರದ್ದುಗೊಳಿಸಿದೆ ಮತ್ತು ಇದು ಕಾರ್ಮಿಕ ಕಾನೂನಿನ ಉಲ್ಲಂಘನೆ ಎಂದು ಪರಿಗಣಿಸಿ ತೀವ್ರವಾಗಿ ಖಂಡಿಸಿದೆ. ನಂತರ ಕಂಪನಿಯು ತನ್ನ ವಿಚಿತ್ರ ಆದೇಶವನ್ನು ತಕ್ಷಣವೇ ಹಿಂಪಡೆದಿದೆ.
ಟಾಯ್ಲೆಟ್‌ಗೆ ಹೋಗೋಕು ಟೈಮಿಂಗ್, 2 ನಿಮಿಷ ಮಾತ್ರ ಕಾಲಾವಕಾಶ: ಕಂಪನಿಯ ನಿಯಮಕ್ಕೆ ಕಂಗಾಲಾದ ಉದ್ಯೋಗಿಗಳು!
ಕಂಪನಿಯು ತನ್ನ ಸಮರ್ಥನೆಯಲ್ಲಿ ನಾವು ಅವಿವಾಹಿತ ಉದ್ಯೋಗಿಗಳನ್ನು ಮದುವೆಯಾಗಿ ಮಕ್ಕಳನ್ನು ಹೆರಲು ಪ್ರೋತ್ಸಾಹಿಸಲು ಬಯಸಿದ್ದೆವು ಅಷ್ಟೇ. ಯಾವುದೇ ಉದ್ಯೋಗಿಯ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವುದು ಅಥವಾ ಅವರ ಭಾವನೆಗಳಿಗೆ ನೋವುಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ ಎಂದು ಹೇಳಿದೆ. ಗಮನಾರ್ಹವಾಗಿ ಚೀನಾದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯಿಂದಾಗಿ ಅಲ್ಲಿನ ಅನೇಕ ನಗರಗಳಲ್ಲಿ ಜನರು ಮದುವೆಯಾಗಿ ಹೆಚ್ಚು ಹೆಚ್ಚು ಮಕ್ಕಳನ್ನು ಹೆರಲು ವಿವಿಧ ರೀತಿಯ ಆಫರ್‌ಗಳನ್ನು ನೀಡಲಾಗುತ್ತಿದೆ.
Viral Video: 15 ನಿಮಿಷದಲ್ಲಿ ಬಾಚಿಕೊಂಡಷ್ಟು ಹಣ ಬೋನಸ್ ಕೊಟ್ಟ ಕಂಪನಿಯ ಮಾಲೀಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ