ಭಾರತದ ಶೇ.86ರಷ್ಟು ಉದ್ಯೋಗಿಗಳಿಗೆ ಕೆಲಸದಲ್ಲಿ ನೆಮ್ಮದಿಯೇ ಇಲ್ಲ, ಬರೀ ಸ್ಟ್ರೆಸ್!

By Mahmad Rafik  |  First Published Jun 13, 2024, 11:34 AM IST

ಪ್ರತಿದಿನ ಒತ್ತಡದ ಜೀವನ, ಹಣಕಾಸಿನ ಸಮಸ್ಯೆಗಳು ಮತ್ತು ನಕಾರಾತ್ಮಕ ಅಂಶಗಳನ್ನು ವೃತ್ತಿ ಜೀವನದಲ್ಲಿ ಹೋರಾಟ ನಡೆಸುತ್ತಿರೋ ಜನರು ಸಮೀಕ್ಷೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


ನವದೆಹಲಿ: ಭಾರತದಲ್ಲಿ ಕೇವಲ  ಶೇ.14ರಷ್ಟು ಉದ್ಯೋಗಿಗಳು (Indian employees) ಮಾತ್ರ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಇನ್ನುಳಿದ ಜನರು ತಮ್ಮ ಉದ್ಯೋಗಗಳಲ್ಲಿ ಅನಿಶ್ವಿತತೆಯನ್ನು ಹೊಂದಿದ್ದು,  ಹೋರಾಟದ ಜೀವನ ನಡೆಸುತ್ತಿದ್ದಾರೆ ಎಂದು 2024ರ ಗ್ಯಾಲಪ್ ಸ್ಟೇಟ್ ಆಫ್ ದಿ ಗ್ಲೋಬಲ್ ವರ್ಕ್‌ಪ್ಲೇಸ್ ವರದಿಯಲ್ಲಿ (Gallup 2024 State of the Global Workplace report) ಪ್ರಕಟವಾಗಿದೆ. ಈ ವರದಿ ಪ್ರಕಾರ ಜಗತ್ತಿನಲ್ಲಿ ಶೇ.34ರಷ್ಟು ಉದ್ಯೋಗಿಗಳ ಹೋರಾಟದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 

ಪ್ರಸ್ತುತ ಜೀವನ ಹಾಗೂ ಮುಂದಿನ ಐದು ವರ್ಷದ ಭವಿಷ್ಯದ ಸ್ಥಿರತೆಯ ಕುರಿತು ಜೀವನ ಮೌಲ್ಯಮಾಪನ ಸೂಚ್ಯಂಕ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ವೃತ್ತಿಜೀವನದಲ್ಲಿ ಅಭಿವೃದ್ಧಿ ಮತ್ತು ಸುಸ್ಥಿರತೆಯನ್ನು ಪರಿಗಣಿಸಿ ಗರಿಷ್ಠ 7 ಪಾಯಿಂಟ್ ನೀಡಿದ್ದಾರೆ. ಏಳು ಅಂಕ ನೀಡಿರುವ ಉದ್ಯೋಗಿಗಳು ತಮ್ಮ ಬೆಳವಣಿಗೆಯಾಗ್ತಿದೆ ಎಂದು ತಿಳಿಸಿದ್ದಾರೆ. 

Tap to resize

Latest Videos

ಪ್ರತಿದಿನ ಒತ್ತಡದ ಜೀವನ, ಹಣಕಾಸಿನ ಸಮಸ್ಯೆಗಳು ಮತ್ತು ನಕಾರಾತ್ಮಕ ಅಂಶಗಳನ್ನು ವೃತ್ತಿ ಜೀವನದಲ್ಲಿ ಹೋರಾಟ ನಡೆಸುತ್ತಿರೋ ಜನರು ಸಮೀಕ್ಷೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತವು ಶೇ.32ರಷ್ಟು ಹೆಚ್ಚಿನ ಉದ್ಯೋಗಿ ನಿಶ್ಚಿತ ದರವನ್ನು ಕಾಯ್ದುಕೊಂಡಿದೆ, ಇದು ಜಾಗತಿಕ ಸರಾಸರಿ ಶೇ.23ಕ್ಕಿಂತ ಹೆಚ್ಚಾಗಿದೆ.

ರಷ್ಯಾ ನದಿಯಲ್ಲಿ ಮುಳುಗಿ 4 ಭಾರತೀಯ ವಿದ್ಯಾರ್ಥಿಗಳು ಸಾವು, ಪೋಷಕರ ಜತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಘಟನೆ!

ಅಂತಿಮವಾಗಿ ಹತಾಶೆ ಮನೋಭಾವನೆ, ಮುಂದಿನ ಐದು ವರ್ಷದ ಅನಿಶ್ವಿತತೆಯ ನಕಾರಾತ್ಮಕ ಅಂಶಗಳನ್ನು ಉಲ್ಲೇಖಿಸಿರುವ ಉದ್ಯೋಗಿಗಳು ಉತ್ತಮ ಜೀವನಕ್ಕಾಗಿ 4 ಅಂಕ ನೀಡಿದ್ದಾರೆ. ಸಮೀಕ್ಷೆಯಲ್ಲಿ ತಮ್ಮ ಜೀವನಕ್ಕೆ 4 ಅಂಕ ನೀಡಿರುವ ಉದ್ಯೋಗಿಗಳು ಮನೆ, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ಬಳಲುತ್ತಿದ್ದಾರೆ. ಇವರುಗಳು ದೈಹಿಕವಾಗಿ ಬಳಲುತ್ತಿದ್ದು, ದಿನನಿತ್ಯ ಹೆಚ್ಚು ಒತ್ತಡ, ಯೋಚನೆ, ಸಮಸ್ಯೆಗಳು, ದುಃಖ ಹಾಗೂ ಕೋಪ ಹೊಂದಿರುತ್ತಾರೆ ಎಂದು ಗ್ಯಾಲಪ್ ತನ್ನ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿದೆ. ಇದರ ಜೊತೆಗೆ ಆರೋಗ್ಯ ವಿಮೆಯಂತರ ಕಡಿಮೆ ಸೌಲಭ್ಯಗಳನ್ನು ಹೊಂದಿರುತ್ತಾರೆ. ಈ ವರ್ಗದ ಜನರು ಹೆಚ್ಚು ಅನಾರೋಗ್ಯದಿಂದ ಬಳಲುತ್ತಿರುತ್ತಾರೆ.

ಜೀವನ ಮೌಲ್ಯಮಾಪನ ಸೂಚ್ಯಂಕ

ಬಹುತೇಕ ದಕ್ಷಿಣ ಏಷ್ಯಾದಲ್ಲಿಯ ಶೇ.15ರಷ್ಟು ಉದ್ಯೋಗಿಗಳು ಮಾತ್ರ ವೃತ್ತಿಯಲ್ಲಿ ಸ್ಥಿರತೆಯನ್ನು ಹೊಂದಿದ್ದಾರೆ. ಇದು ಜಾಗತಿಕ ಸರಾಸರಿಗಿಂತ ಶೇ. 19ರಷ್ಟು ಕಡಿಮೆಯಾಗಿದೆ. ಜಗತ್ತಿನಾದ್ಯಂತ ಈ ಸಮೀಕ್ಷೆ ನಡೆಸಲಾಗಿದ್ದು, ಸುಸ್ಥಿರ ವೃತ್ತಿ ಜೀವನ ಹೊಂದಿರುವ ಉದ್ಯೋಗಿಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಶೇ.22ರಷ್ಟು ಪಾಯಿಂಟ್‌ಗಳೊಂದಿಗೆ ನೇಪಾಳ ಮೊದಲ ಸ್ಥಾನದಲ್ಲಿದೆ. 

ಭಾರತದ ಮೀಮ್ಸ್‌ ಬಳಸಿ ಆ್ಯಪಲ್‌ಗೆ ಟಾಂಗ್‌ ಕೊಟ್ಟ ಟೆಸ್ಲಾದ ಎಲಾನ್‌ ಮಸ್ಕ್‌..!

ಶೇ.35ರಷ್ಟು ಉದ್ಯೋಗಿಗಳ ಪ್ರತಿದಿನ ಜೀವನದಲ್ಲಿ ಹೆಚ್ಚು ಕೋಪ ಹೊಂದಿರೋದಾಗಿ ಹೇಳಿಕೊಂಡಿದ್ದಾರೆ. ಶ್ರೀಲಂಕಾ ಶೇ.62 ಮತ್ತು ಅಫ್ಘಾನಿಸ್ತಾನದ ಶೇ.58ರಷ್ಟು ಉದ್ಯೋಗಿಗಳು ಒತ್ತಡದ ಜೀವನ ನಡೆಸುತ್ತಿದ್ದಾರೆ. 

click me!