ಗಂಡನಿಗಾಗಿ 9 ತಿಂಗಳು ಗರ್ಭಿಣಿ ಮಾಡಿದೆಂಥಾ ಕೆಲಸ ಗೊತ್ತಾ? ನೆಟ್ಟಿಗರು ಫುಲ್ ಶಾಕ್!

By Mahmad Rafik  |  First Published Jun 12, 2024, 7:42 PM IST

ಇದೀಗ ಒಂದು ವಿಚಿತ್ರ ಸುದ್ದಿಯೊಂದು ಹೊರ ಬಂದಿದೆ. 9 ತಿಂಗಳ ಗರ್ಭಿಣಿ ಗಂಡನ ಮೇಲಿನ ಪ್ರೀತಿಗಾಗಿ ಮಾಡಿದ ಕೆಲಸ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಬಹುತೇಕ ನೆಟ್ಟಿಗರು ಈ ಪ್ರೀತಿ ತುಂಬಾ ಅತಿ ಆಯ್ತು ಅಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. 


ಮದುವೆಯಾದ್ಮೇಲೆ ಬಹುತೇಕ ಗಂಡಸರು ಅಡುಗೆಕೋಣೆಯಿಂದ ದೂರ ಉಳಿಯುತ್ತಾರೆ. ಹೆಂಡತಿ ರುಚಿಕರವಾದ ಅಡುಗೆ ಸಿದ್ಧ ಮಾಡುತ್ತಾಳೆ ಎಂಬ ಕಾರಣದಿಂದ. ಇಂದು ಕಾಲ ಬದಲಾಗಿದ್ದು, ಪುರುಷರು ಅಡುಗೆ ಕೆಲಸದಲ್ಲಿ ಪತ್ನಿಗೆ ಸಹಾಯ ಮಾಡುತ್ತಾರೆ. ಇದೀಗ ಒಂದು ವಿಚಿತ್ರ ಸುದ್ದಿಯೊಂದು ಹೊರ ಬಂದಿದೆ. 9 ತಿಂಗಳ ಗರ್ಭಿಣಿ ಗಂಡನ ಮೇಲಿನ ಪ್ರೀತಿಗಾಗಿ ಮಾಡಿದ ಕೆಲಸ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಬಹುತೇಕ ನೆಟ್ಟಿಗರು ಈ ಪ್ರೀತಿ ತುಂಬಾ ಅತಿ ಆಯ್ತು ಅಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. 

ಹೌದು, ಜಪಾನಿನ ಮಹಿಳೆಯೊಬ್ಬರು ಹೆರಿಗೆಗೂ ಹೋಗುವ ಮುನ್ನ ಗಂಡನಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರವನ್ನು ತಯಾರಿಸಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಮಹಿಳೆಯ ನಡೆಯನ್ನು ವ್ಯಾಪಕವಾಗಿ ಟೀಕಿಸಿದ್ದಾರೆ. ಕೆಲವರು ಆ ಮಹಿಳೆ ತನ್ನ ಗಂಡನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

Tap to resize

Latest Videos

Viral New : ಗಂಡ ಸತ್ತ ಮೇಲೆ ಪಾರ್ಟಿ ಮಾಡಿದ ಮಹಿಳೆ… ಸಂಬಂಧಿಕರಿಗೆ ಸಿಕ್ತು ಗಿಫ್ಟ್ !?

ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ 

ಈ ವಿಷಯವನ್ನು ಮಹಿಳೆಯೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಸದ್ದು ಮಾಡುತ್ತಿದೆ. ಮಹಿಳೆ ಜಪಾನ್ ಮೂಲದವರು ಎಂದು ವರದಿಯಾಗಿದೆ. ಮಹಿಳೆಗೆ ಮೇ 21ರಂದು ಹೆರಿಗೆಯ ದಿನಾಂಕ ನೀಡಲಾಗಿತ್ತು. ಹೆರಿಗೆ ಬಳಿಕ ಒಂದು ತಿಂಗಳಾದ್ರೂ ವಿಶ್ರಾಂತಿ ಪಡೆಯಬೇಕಾಗುತ್ತದೆ. ಹಾಗಾಗಿ ಮಹಿಳೆ ತಾನು ವಿಶ್ರಾಂತಿಯಲ್ಲಿರುವಾಗ ಗಂಡನ ಊಟದ ಬಗ್ಗೆ ಯೋಚಿಸಿದ್ದಾಳೆ. ನಂತರ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ ತಯಾರಿಸಿ ಫ್ರಿಡ್ಜ್‌ನಲ್ಲಿ ಶೇಖರಿಸಿದ್ದಾರೆ.

ಪೋಸ್ಟ್ ನೋಡಿ ನೆಟ್ಟಿಗರು ಹೇಳಿದ್ದೇನು?

ಈ ಪೋಸ್ಟ್ ನೋಡಿದ ನೆಟ್ಟಿಗರು ಕಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಮ್ಮ ಗಂಡನಿಗೆ ಅಡುಗೆ ಮಾಡಲು ಬರೋದಿಲ್ಲವಾ ಅಥವಾ ಅಲ್ಲಿ ಯಾವುದೇ ಹೋಟೆಲ್‌ಗಳು ಇಲ್ಲವೇ ಎಂದು ಕೇಳಿದ್ದಾರೆ. ನಿಮ್ಮ ಪ್ರೀತಿ ತುಂಬಾ ಅತಿಯಾಯ್ತು. ತಿಂಗಳುಗಟ್ಟಲೇ ಫ್ರಿಡ್ಜ್‌ನಲ್ಲಿಟ್ಟಿರೋ ಆರೋಗ್ಯಕ್ಕೆ ಒಳ್ಳೆಯದು ಅಲ್ಲ ಎಂಬ ವಿಷಯ ಅಡುಗೆ ಮಾಡುವಾಗ ನಿಮಗೆ ಹೊಳೆಯಲಿಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟೊಂದು ಅಡುಗೆ ಮಾಡಲು ನಿಮಗೆ ಗಂಡ ಅನುಮತಿ ನೀಡಿದ್ದನಾ? ಇದೇ ಅಡುಗೆ ಆತ ತಿನ್ನುತ್ತಾನೆ ಎಂಬ ನಿಮ್ಮ ನಂಬಿಕೆಗೆ ನಾವು ಫಿದಾ ಎಂಬ ಕಮೆಂಟ್‌ಗಳು ಬಂದಿವೆ. 

ಮದುವೆ ದಿನ ಬಾಸ್‌ನಿಂದ ಬಂದ ಮೆಸೇಜ್ ನೋಡಿ ಯುವತಿ ಶಾಕ್; ಆ ಕ್ಷಣ ಉಸಿರು ನಿಂತತಾಯ್ತು ಎಂದ ವಧು!

ಹೊಸ ಆಯಾಮ ಪಡೆದುಕೊಂಡ ನೆಟ್ಟಿಗರ ಚರ್ಚೆ

ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಇಲ್ಲಿಗೆಯೇ ನಿಂತಿಲ್ಲ. ಮಹಿಳೆ ಮತ್ತು ಪುರುಷರಲ್ಲಿ ಯಾರು ಹೆಚ್ಚು ಎಂಬ ಆಯಾಮಕ್ಕೂ ಚರ್ಚೆಗಳು ಸಾಗಿವೆ. ಈ ಮಹಿಳೆ ಗಂಡನಿಗಾಗಿ ದಾಸಿಯಂತೆ ಕೆಲಸ ಮಾಡಿದ್ದಾಳೆ. ಇಂತಹ ಮಹಿಳೆಯರು ತಪ್ಪಾಗಿರುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಾರೆ. ಮನೆ ಕೆಲಸ ಮಾಡದಂತೆ ಆಕೆಯೇ ತನ್ನ ಗಂಡನನ್ನು ತಡೆಯುತ್ತಿರೋದು ತಪ್ಪು. ಮದುವೆಗೂ ಮುಂಚೆ ಹೇಗೆ ಇದ್ದನೋ? ಹಾಗೆ ಆಹಾರ ಸೇವಿಸುತ್ತಿದ್ದ ಎಂದು ಕೆಲವರು ತಮ್ಮ ವಾದ ಮಂಡಿಸಿದ್ದಾರೆ. 

click me!