Latest Videos

ಮೂರು ತಿಂಗಳಿನಿಂದ ಈ ಕಂಪನಿಯ ಉದ್ಯೋಗಿಗಳು ತೂಕ ಕೊಂಚವೂ ಹೆಚ್ಚಾಗಿಲ್ಲ ಯಾಕೆ ಗೊತ್ತಾ?

By Mahmad RafikFirst Published Jun 12, 2024, 6:59 PM IST
Highlights

ಚೀನಾದ ಕಂಪನಿಯೊಂದು 1,40,000 ಡಾಲರ್ ಅಂದ್ರೆ ಸುಮಾರು 10 ಲಕ್ಷ ರೂಪಾಯಿ ಹಣವನ್ನು ಮೀಸಲಿರಿಸಿದೆ. ಈ ಹಣದಲ್ಲಿ ತೂಕ ಇಳಿಸಲು ಬೇಕಾಗುವ ಸಾಮಾಗ್ರಿಗಳನ್ನು ಕಂಪನಿ ಖರೀದಿಸಿದೆ. ಒಂದು ವರ್ಷದಿಂದ ಈ ಯೋಜನೆ ಶುರುವಾಗಿದೆ.

ಬೀಜಿಂಗ್: ದಿನಕ್ಕೆ 8 ರಿಂದ 10 ಗಂಟೆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಜನರಲ್ಲಿ ತೂಕ ಹೆಚ್ಚಳ ಸಾಮಾನ್ಯ. ಇದರಿಂದ ಜನರು ಸ್ಥೂಲಕಾಯದಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಕಂಪನಿಯೊಂದು ತನ್ನ ಉದ್ಯೋಗಿಗಳ ಆರೋಗ್ಯಕ್ಕಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರ ಜಾರಿಯಾಗಿದ್ದು, ಪರಿಣಾಮ ಕಳೆದ ಮೂರು ತಿಂಗಳಿನಿಂದ ಇಲ್ಲಿಯ ಯಾವುದೇ ಉದ್ಯೋಗಿಯ ತೂಕದಲ್ಲಿ ಏರಿಕೆಯಾಗಿಲ್ಲ. ಕಂಪನಿಯ ಈ ನಿರ್ಧಾರದಿಂದ ಉದ್ಯೋಗಿಗಳು ಸಂತೋಷವಾಗಿದ್ದು, ಆರೋಗ್ಯವಾಗಿ ಜೀವನ ನಡೆಸುತ್ತಿದ್ದಾರೆ. 

ಕೆಲಸದ ಒತ್ತಡದಲ್ಲಿರುವ ಜನರು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಲ್ಲ. ಸೇವಿಸಿದರೂ ಫಾಸ್ಟ್‌ಫುಡ್‌ಗಳಂತ ಆಹಾರಕ್ಕೆ ದಾಸರಾಗಿರುತ್ತಾರೆ. ಟಿ, ಕಾಫೀ ಅಂತಹ ಪಾನೀಯಗಳ ವಿಪರೀತ ಸೇವನೆಯಿಂದ ಅಸಿಡಿಟಿ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಈ ಎಲ್ಲ ಕಾರಣಗಳಿಂದ ಉದ್ಯೋಗಿಗಳ ಆರೋಗ್ಯಕ್ಕಾಗಿ ಚೀನಾದ ಕಂಪನಿಯೊಂದು 1,40,000 ಡಾಲರ್ ಅಂದ್ರೆ ಸುಮಾರು 10 ಲಕ್ಷ ರೂಪಾಯಿ ಹಣವನ್ನು ಮೀಸಲಿರಿಸಿದೆ. ಈ ಹಣದಲ್ಲಿ ತೂಕ ಇಳಿಸಲು ಬೇಕಾಗುವ ಸಾಮಾಗ್ರಿಗಳನ್ನು ಕಂಪನಿ ಖರೀದಿಸಿದೆ. ಒಂದು ವರ್ಷದಿಂದ ಈ ಯೋಜನೆ ಶುರುವಾಗಿದೆ.

ಈ ಯೋಜನೆಯಡಿಯಲ್ಲಿ ತೂಕ ಆಧಾರದನ್ವಯ 10 ಜನರ ಒಂದೊಂದು ಗುಂಪು ರಚನೆ ಮಾಡಲಾಗಿತ್ತು. ಈ ಗುಂಪಿನ ಸದಸ್ಯರಿಗೆ 0.5 ಕೆಜಿ ತೂಕ ಇಳಿಸಿದ್ರೆ 400 ಯಾನ್ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. 400 ಯಾನ್ ಅಂದ್ರೆ 45,927 ರೂಪಾಯಿ ಆಗಿತ್ತು. ಈ ಹಣಕ್ಕಾಗಿ ಉದ್ಯೋಗಿಗಳು ತೂಕ ಇಳಿಸಲು ಮುಂದಾದರು.

ದೇಹದಲ್ಲಾಗುವ ಈ ಐದು ನೋವು ಬರೀ ನೋವಲ್ಲ, ಹೃದಯಾಘಾತದ ಸೂಚನೆನೂ ಆಗಿರುತ್ತೆ!

ಮೂರು ತಿಂಗಳ ನಂತರ ಯಾರ ತೂಕದಲ್ಲಿಯೂ ಏರಿಕೆ ಇಲ್ಲ 

ಗುಂಪಿನಲ್ಲಿರುವ ಯಾರದೇ ತೂಕ ಹೆಚ್ಚಾದ್ರೂ ಯಾರಿಗೂ ಬೋನಸ್ ಸಿಗಲ್ಲ ಜೊತೆಗೆ 5,761 ರೂಪಾಯಿ ದಂಡ ಪಾವತಿಸಬೇಕು ಎಂಬ ನಿಯಮವೂ ಈ ಯೋಜನೆಯಲ್ಲಿದೆ. ಈ ಯೋಜನೆ ಶುರುವಾದ ಮೂರು ತಿಂಗಳ ನಂತರ ಯಾರ ತೂಕವೂ ಹೆಚ್ಚಾಗಿಲ್ಲ. ನಿಯಮಗಳು ಕೊಂಚ ವಿಚಿತ್ರ ಆದ್ರೂ  ಉದ್ಯೋಗಿಗಳು ಖುಷಿಯಲ್ಲಿದ್ದಾರೆ ಎಂದು ವರದಿಯಾಗಿದೆ. 

ಗುಂಪುಗಳ ರಚನೆಯಿಂದ ಸಿಬ್ಬಂದಿ ನಡುವಿನ ಒಡನಾಟ ಮತ್ತು ಬಾಂಧವ್ಯ ಹೆಚ್ಚಾಗುತ್ತದೆ. ಸಹೋದ್ಯೋಗಿಗಳು ಗುಂಪಿನಲ್ಲಿರೋರನ್ನು ಸೋಲಿಸಲು ಮುಂದಾಗಲ್ಲ. ನಿಮ್ಮ ತೂಕ ಏರಿಕೆಯಾದ್ರೆ ದಂಡದ ಜೊತೆಗೆ ಬೋನಸ್ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗಾಗಿ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ. ಇದರ ಜೊತೆಯಲ್ಲಿ ತಮ್ಮ ಸಹೋದ್ಯೋಗಿಗಳ ಆರೋಗ್ಯದ ಬಗ್ಗೆಯೂ ಸಲಹೆ ನೀಡುತ್ತಾರೆ ಎಂದು ಕಂಪನಿಯ ಉದ್ಯೋಗಿ ಲೀ ಹೇಳುತ್ತಾರೆ.

ನಿಮ್ಮ ಟೂಥ್ ಪೇಸ್ಟ್‌ನಲ್ಲಿ ಸಿಹಿ ಹೆಚ್ಚಿದೆಯಾ? ಹಾಗಿದ್ದರೆ ಹೃದಯಾಘಾತ ಅಪಾಯ ಹೆಚ್ಚು!

90 ಕೆಜಿಗಿಂತ ಹೆಚ್ಚು ತೂಕವನ್ನು ಹೊಂದಿರುವ ಸಿಬ್ಬಂದಿ ಪ್ರತಿದಿನ ವಾಕಿಂಗ್, ರನ್ನಿಂಗ್, ಸ್ವಿಮಿಂಗ್, ಜಿಮ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ತೂಕ ಇಳಿಸಿಕೊಂಡ ನಂತರ ಹಣವನ್ನು ಪಡೆದುಕೊಂಡಿದ್ದಾರೆ. ನಾನು ತೂಕ ಇಳಿಸಿ 83 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದೇನೆ. ಈಗ ಮತ್ತೆ ದಪ್ಪ ಆಗಲು ಇಷ್ಟಡಲ್ಲ ಎಂದು ಲೀ ಹೇಳುತ್ತಾರೆ.

click me!