ಪ್ರವಾಸಿಗರ ವಾಹನವನ್ನು 1 ಕಿಲೋ ಮೀಟರ್‌ಗೂ ದೂರ ಬೆನ್ನಟ್ಟಿದ ಘೇಂಡಾಮೃಗ

By Anusha KbFirst Published Mar 29, 2023, 3:52 PM IST
Highlights

ಘೇಂಡಾಮೃಗವೊಂದು ಪ್ರವಾಸಿಗರ ವಾಹನವನ್ನು ಒಂದು ಕಿಲೋ ಮೀಟರ್‌ಗೂ ಅಧಿಕ ದೂರ ಬೆನ್ನಟ್ಟಿಸಿಕೊಂಡು ಬಂದಿದ್ದು ಅದರ ವಿಡಿಯೋವೊಂದು ವೈರಲ್ ಆಗಿದೆ. 

ದಕ್ಷಿಣ ಆಫ್ರಿಕಾ: ರಾಷ್ಟ್ರೀಯ ಉದ್ಯಾನವನ, ಪ್ರಾಣಿ ಸಂಗ್ರಹಾಲಯಗಳಿಗೆ ಭೇಟಿ ನೀಡುವ ವೇಳೆ ಕೆಲವೊಮ್ಮೆ ಮನುಷ್ಯರ ಅತಿರೇಕದ ವರ್ತನೆ ಪ್ರಾಣಿಗಳನ್ನು ಸಿಟ್ಟಿಗೇಳುವಂತೆ ಮಾಡಿ ದಾಳಿ ಮಾಡಲು ಮುಂದಾಗುತ್ತವೆ. ಇದೇ ಕಾರಣಕ್ಕೆ ಕಾಡು ಪ್ರಾಣಿಗಳ ಸಫಾರಿ ವೇಳೆ ಅರಣ್ಯ ಸಿಬ್ಬಂದಿ ಹಲವು ಸುರಕ್ಷತಾ ನಿಯಮಗಳ ಬಗ್ಗೆ ಮೊದಲೇ ಪ್ರವಾಸಿಗರಿಗೆ ಹೇಳುತ್ತಾರೆ. ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿಗೆ ಮುಂದಾಗುವ ಹಲವು ವಿಡಿಯೋಗಳು ಈ ಹಿಂದೆಯೂ ಸೆರೆ ಆಗಿದೆ. ಅದೇ ರೀತಿ ಇಲ್ಲೊಂದು ಕಡೆ ಘೇಂಡಾಮೃಗವೊಂದು ಪ್ರವಾಸಿಗರ ವಾಹನವನ್ನು ಒಂದು ಕಿಲೋ ಮೀಟರ್‌ಗೂ ಅಧಿಕ ದೂರ ಬೆನ್ನಟ್ಟಿಸಿಕೊಂಡು ಬಂದಿದ್ದು ಅದರ ವಿಡಿಯೋವೊಂದು ವೈರಲ್ ಆಗಿದೆ. 

latestkruger ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,  ಸಫಾರಿ ಜೀಪನ್ನು ಬೆನ್ನಟ್ಟುವುದನ್ನು ಕಾಣಬಹುದಾಗಿದೆ.  ದಕ್ಷಿಣ ಆಫ್ರಿಕಾದ (South Africa) ಗ್ರೇಟರ್ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ (Greater Kruger National Park) ಸಫಾರಿಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಅನಸ್ತಾಸಿಯಾ ಚಾಪ್ಮನ್ ಎಂಬುವವರು ತನ್ನ ಸ್ನೇಹಿತರೊಂದಿಗೆ ಸಫಾರಿಗೆ ಹೊರಟಿದ್ದಾಗ ಸಿಟ್ಟಿಗೆದ್ದ ಘೇಂಡಾಮೃಗ ಅವರಿದ್ದ ಜೀಪನ್ನು ಬೆನ್ನಟ್ಟಿದೆ. 

Latest Videos

ಚಾಮರಾಜೇಂದ್ರ ಮೃಗಾಲಯದ ಹಲವು ಪ್ರಾಣಿಗಳ ದತ್ತು ಪಡೆದ RBI

ಕಿಲೋ ಮೀಟರ್‌ಗೂ ಹೆಚ್ಚು ದೂರ ಘೇಂಡಾಮೃಗ ಓಡಿಸಿಕೊಂಡು ಬಂದಿದ್ದನ್ನು ಗಮನಿಸಿದ ಸಫಾರಿ ಜೀಪ್‌ನ ಚಾಲಕ ಮಣ್ಣಿನ ರಸ್ತೆಯಲ್ಲಿ ವಾಹನವನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಚಲಾಯಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.  ಹುಲ್ಲು ತಿನ್ನುವ ಬಿಳಿ ಘೇಂಡಾಮೃಗವು ಎಲ್ಲಿಂದಲೋ ಇವರಿದ್ದ ಸ್ಥಳಕ್ಕೆ ಬಂದಿದ್ದು, ನಂತರ ವಾಹನವನ್ನು ಓಡಿಸಲು ಶುರು ಮಾಡಿದೆ.  ಘೇಂಡಾಮೃಗವು ಜೀಪನ್ನು ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ಹಿಂಬಾಲಿಸಿದಾಗ ಚಾಲಕ ಕೆಸರುಮಯವಾದ ರಸ್ತೆಗಳಲ್ಲಿ ಸಾಧ್ಯವಾದಷ್ಟು ವೇಗವಾಗಿ ಓಡಿಸಲು ಪ್ರಯತ್ನಿಸಿದ್ದಾನೆ.  ಕ್ರೂಗರ್‌ ಉದ್ಯಾನವನವೂ ಈ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ರಸ್ತೆಯಲ್ಲಿ  ಘೇಂಡಾಮೃಗವೂ ಕಾರಿನ ಮೇಲೆ ದಾಳಿಗೆ ಮುಂದಾಯಿತು ಎಂದು ಬರೆದುಕೊಂಡಿದ್ದಾರೆ. 

ಈ ಭಯಾನಕ ಘಟನೆಯನ್ನು ಚಾಪ್ಮನ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ, ಘೇಂಡಾಮೃಗದೊಂದಿಗೆ ವಿಚಿತ್ರ ಅನುಭವವಾಯಿತು. ಅದು ನಮ್ಮನ್ನು ಒಂದು ಕಿಲೋ ಮೀಟರ್‌ಗೂ ದೂರ ಓಡಿಸಿಕೊಂಡು ಬಂತು. ಇದರಿಂದ ನಮ್ಮನ್ನು ಪಾರು ಮಾಡಲು ನಮ್ಮ ಗೈಡ್ ಮಣ್ಣಿನ ರಸ್ತೆಯಲ್ಲಿ ಆದಷ್ಟು ವೇಗವಾಗಿ ಗಾಡಿಯನ್ನು ಓಡಿಸಿದರು ಎಂದು ಹೇಳಿಕೊಂಡಿದ್ದಾರೆ. ಘೇಂಡಾಮೃಗದ ವರ್ತನೆ  ನಿಜವಾಗಿಯೂ ಸಹಜವಾಗಿರಲಿಲ್ಲ.  ಇದು ಆತನ ಪಾಲಿನ ಟಾಪ್‌ 5ನೇ ಅತ್ಯಂತ ಅಪಾಯಕಾರಿ ಪ್ರಾಣಿಯೊಂದಿಗಿನ ಮುಖಾಮುಖಿಯಾಗಿತ್ತು. ಆದರೂ ಅದೊಂದು ಸುಂದರ ದಿನವಾಗಿತ್ತು. ಇದು ಪ್ರಾಣಿಗಳ ನಿವಾಸವಾಗಿದ್ದು, ಇಲ್ಲಿ ನಾವು ಕೇವಲ ಅತಿಥಿಗಳು ಎಂದು ಅವರು ಬರೆದುಕೊಂಡಿದ್ದಾರೆ. 

ಈ ವಿಡಿಯೋ ಈಗ ವೈರಲ್ ಆಗಿದ್ದು, ಜನ ಈ ಘಟನೆಗೆ ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ. ಇದು ನನ್ನ ಊಹೆಯನ್ನು ಸುಳ್ಳು ಮಾಡಿದೆ. ನಾನು ಘೇಂಡಾಮೃಗಗಳು (Rhinos) ಅವುಗಳ ತೂಕದಿಂದ ಬೇಗ ಆಯಾಸಗೊಳ್ಳುತ್ತವೆ. ಅವುಗಳು ನಿಧಾನವಾಗಿ ಚಲಿಸುತ್ತವೆ ಅವುಗಳನ್ನು ಸುಲಭವಾಗಿ ಸೋಲಿಸಬಹುದು ಎಂದು ನಾನು ಭಾವಿಸಿದ್ದೆ ಆದರೆ ನನ್ನ ಊಹೆ ನಿಜವಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಮೈಸೂರು ಝೂಗೆ ವಿಮಾನದಲ್ಲಿ ಬಂದ ಬಿಳಿ ಘೇಂಡಾಮೃಗ

ನಾವು ಅವುಗಳನ್ನು ಅವುಗಳಷ್ಟಕ್ಕೆ ಇರಲು ಬಿಡಬೇಕು. ಅವುಗಳ ಸಮೀಪ ಹೋಗಬಾರದು. ನಾವು ಮಾನವರು ಅವುಗಳ ವಾಸಸ್ಥಾನದತ್ತ ನುಗ್ಗುತ್ತಿದ್ದೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ, ಪಶ್ಚಿಮ ಬಂಗಾಳದ (West Bengal) ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಿಂದ (aldapara National Park) ಇದೇ ರೀತಿಯ ವೀಡಿಯೋವೊಂದು ವೈರಲ್ ಆಗಿದ್ದು,  ವಾಹನವನ್ನು ಘೇಂಡಾಮೃಗ ಓಡಿಸುತ್ತಿದ್ದರೆ ಪ್ರವಾಸಿಗರು ಅದರ ಫೋಟೋವನ್ನು ತೆಗೆಯುತ್ತಿರುವುದರು. ಈ ವೇಳೆ ವಾಹನ ಚಾಲಕ ತರಾತುರಿಯಲ್ಲಿ ವಾಹನವನ್ನು ಹಿಂದಕ್ಕೆ ಚಲಾಯಿಸಿದ್ದು, ಈ ವೇಳೆ ಜೀಪ್ ಹೊಂಡಕ್ಕೆ ಬಿದ್ದಿತ್ತು.

 

click me!