ಡ್ರಗ್ಸ್ ಚಟಕ್ಕೆ ಬಲಿಯಾಗಿ ಬೀದಿಗಳಲ್ಲೇ ಜೋಂಬಿಗಳಂತೆ ತೂಕಾಡಿಸುವ ಮಾದಕ ವ್ಯಸನಿಗಳು

Published : Sep 28, 2025, 04:53 PM IST
Devastating Drug Crisis in Philadelphia

ಸಾರಾಂಶ

Philadelphia drug crisis: ಫಿಲಡೆಲ್ಫಿಯಾದಲ್ಲಿ ಡ್ರಗ್ಸ್ ಚಟಕ್ಕೆ ದಾಸರಾದ ಜನರು ಜೋಂಬಿಗಳಂತೆ ವರ್ತಿಸುತ್ತಿರುವ ಆಘಾತಕಾರಿ ವೀಡಿಯೋ ವೈರಲ್ ಆಗಿದೆ. ಫೆಂಟನಿಲ್‌ನಂತಹ ಮಾದಕವಸ್ತುಗಳಿಂದ ಉಂಟಾದ ಈ ಬಿಕ್ಕಟಿನಿಂದ ಅನೇಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಯಾವುದೇ ದುಶ್ಚಟಗಳಿರಲಿ, ಅದರಿಂದ ಹೊರಗೆ ಬರುವುದು ಬಹಳ ಕಷ್ಟದ ಕೆಲಸ, ಅದು ಕುಡಿತವೂ ಆಗಿರಬಹುದು, ಬೀಡಿ ಸಿಗರೇಟ್‌ನಂತಹ ತಂಬಾಕಿನ ಚಟವೂ ಆಗಿರಬಹುದು. ಒಮ್ಮೆ ಚಟ ಹಿಡಿಸಿಕೊಂಡರೆ ಚಟ್ಟ ಸೇರುವವರೆಗೂ ಅನೇಕರಿಗೆ ಇದನ್ನು ಬಿಡಲಾಗುವುವಿಲ್ಲ, ಆದರೆ ಮನೋ ಸಂಕಲ್ಪದ ಮುಂದೆ ಎಲ್ಲ ಅಸಾಧ್ಯಗಳು ಸಾಧ್ಯ ಎಂಬುದನ್ನು ನಾವು ಮರೆಯುವಂತಿಲ್ಲ, ಆದರೆ ಒಮ್ಮೆ ಡ್ರಗ್ ಚಟಕ್ಕೆ ದಾಸರಾದವರನ್ನು ಆ ಚಟದಿಂದ ದೂರ ಮಾಡುವುದು ಎಲ್ಲಕ್ಕಿಂತಲೂ ಕಷ್ಟದ ಕೆಲಸ. ಡ್ರಗ್‌ಗೆ ದಾಸರಾದವರು ಏನೋ ಮಾಡುತ್ತಾರೆ ಎಂಬುದು ಅವರಿಗೇ ತಿಳಿದಿರುವುದಿಲ್ಲ, ಅಷ್ಟೊಂದು ಮನೋವಿಕೃತಿಯನ್ನು ಈ ಡ್ರಗ್ಸ್ ಸೇವನೆ ಮಾಡುವವರಿಗೆ ಉಂಟು ಮಾಡಬಲ್ಲದು. ಭಾರತದಲ್ಲಿ ಡ್ರಗ್ಸ್‌ಗೆ ಸಂಪೂರ್ಣ ನಿಷೇಧವಿದೆ. ವೈದ್ಯಕೀಯಕ್ಕೆ ಸಂಬಂಧಿಸಿದ ಡ್ರಗ್ಸ್ ಹೊರತಾಗಿ ಬೇರೆ ಯಾವುದೇ ಡ್ರಗ್ ಅನ್ನು ಜನರು ಬಳಸುಂತಿಲ್ಲ. ಆದರೆ ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಹಾಗಲ್ಲ, ಡ್ರಗ್ಸ್ ಬೇಕಾಬಿಟ್ಟಿಯಾಗಿ ಜನರಿಗೆ ಸಿಗುತ್ತದೆ. ಜನರು, ಪುಟ್ಟ ಮಕ್ಕಳು ಹಿರಿಯರು ಕಿರಿಯರೆನ್ನದೇ ಎಲ್ಲರೂ ಈ ಡ್ರಗ್ ಎಂಬ ಚಟಕ್ಕೆ ದಾಸರಾಗುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಡ್ರಗ್ಸ್‌ಗೆ ದಾಸರಾಗಿ ಮನೆ ಮಟ್ಟ ಬಿಟ್ಟು ಬಂದು ರಸ್ತೆಯನ್ನೇ ಮನೆಯಾಗಿಸಿಕೊಂಡವರ ವೀಡಿಯೋ ವೈರಲ್ ಆಗಿದೆ..

ಡ್ರಗ್ಸ್‌ಗೆ ದಾಸರಾಗಿ ಬೀದಿ ಸೇರಿದರು.. ಡ್ರಗ್ಸ್‌ನ ಭಯಾನಕ ಮುಖವಿದು…

evoclique ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ವೈರಲ್ ಆಗಿದ್ದು, ಫಿಲಡೆಲ್ಫಿಯಾದ ವೀಡಿಯೋ ಇದಾಗಿದೆ. ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ ಘಟನೆಗಳು ಹೃದಯ ವಿದ್ರಾವಕವಾಗಿವೆ. ನಗರವು ಹದಗೆಡುತ್ತಿರುವ ಮಾದಕವಸ್ತು ಬಿಕ್ಕಟ್ಟಿನ ಹಿಡಿತದಲ್ಲಿದೆ. ಫೆಂಟನಿಲ್ ಅಥವಾ ಕ್ಸೈಲಾಜಿನ್ ಮಿಶ್ರಿತ ವಸ್ತುಗಳು ಬಳಕೆದಾರರನ್ನು ಚಲನರಹಿತವಾಗಿ ಅಥವಾ ಬೆಂಡಾಗುವ ಮನುಷ್ಯರಂತೆ ಮಾಡುತ್ತಿವೆ, ಕೆಲವರು ಅವರನ್ನು ಸೋಮಾರಿಗಳು ಎಂದು ಕರೆಯುತ್ತಾರೆ. ಕೆನ್ಸಿಂಗ್ಟನ್‌ನಂತಹ ಪ್ರದೇಶಗಳ ಡ್ರಗ್‌ಗೆ ದಾಸರಾದ ವ್ಯಕ್ತಿಗಳ ವೀಡಿಯೊಗಳು ಜನರು ಹಗಲು ಹೊತ್ತಿನಲ್ಲಿಯೂ ತತ್ತರಿಸುತ್ತಿರುವ, ಪ್ರಜ್ಞಾಹೀನರಾಗಿರುವ ಅಥವಾ ತಮ್ಮ ಸುತ್ತಮುತ್ತಲಿನ ಬಗ್ಗೆ ಸಂಪೂರ್ಣವಾಗಿ ಅರಿವಿಲ್ಲದಿರುವ ವ್ಯಕ್ತಿಗಳಂತೆ ಜನರನ್ನು ತೋರಿಸುತ್ತಿದೆ.

ಫಿಲಿಡೆಲ್ಫಿಯಾದ ವೀಡಿಯೋ ಭಾರಿ ವೈರಲ್

ಇದು ಕೇವಲ ಸ್ಥಳೀಯ ಸಮಸ್ಯೆಗಿಂತಲೂ ಹೆಚ್ಚಿನ ಹಾನಿಕಾರಕವಾಗಿದೆ. ಪ್ರಬಲವಾದ ಸಂಶ್ಲೇಷಿತ ಒಪಿಯಾಯ್ಡ್‌ಗಳು ಮತ್ತು ದೀರ್ಘಕಾಲೀನ ಚೇತರಿಕೆ ಪರಿಹಾರಗಳಿಗೆ ಪ್ರವೇಶದ ಕೊರತೆಯಿಂದಾಗಿ ಇದು ಬೆಳೆಯುತ್ತಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ. ನಾವು ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನಿಜ ಜೀವನಗಳು ನಾಶವಾಗುತ್ತಿವೆ. ಇದು ಇಂಥವರನ್ನು ನೋಡಿ ನಾವೇ ಏನೋ ಒಂದು ನಿರ್ಧರಿಸುವ ಸಮಯ ಅಲ್ಲ ಜಾಗೃತಿ ಮೂಡಿಸುವ, ಚಟಕ್ಕೆ ತುತ್ತಾದವರಿಗೆ ಕರುಣೆ ತೋರುವ ಮತ್ತು ಇದರ ಬಗ್ಗೆ ಏನಾದರೊಂದು ಕ್ರಮ ಕೈಗೊಳ್ಳುವ ಸಮಯ ಇದಾಗಿದೆ ಎಂದು ಈ ವೀಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ.

ಹೀಗೆ ಮಾದಕಚಟಕ್ಕೆ ತುತ್ತಾಗಿರುವ ಫಿಲಡೆಲ್ಫಿಯಾ ಅಮೆರಿಕಾದ ಪೆನ್ಸಿಲ್ವೇನಿಯಾದ ಅತಿದೊಡ್ಡ ನಗರ ಮತ್ತು ಪ್ರಮುಖ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಆರ್ಥಿಕ ಕೇಂದ್ರವಾಗಿದೆ. ಅಮೆರಿಕಾದ ಸ್ಥಾಪನೆಯಲ್ಲಿ ಈ ಸ್ಥಳದ ಪಾತ್ರಕ್ಕಾಗಿ ಇದನ್ನು ಅಮೆರಿಕಾದ ಜನ್ಮಸ್ಥಳವೆಂದು ಕೂಡ ಕರೆಯಲಾಗುತ್ತದೆ. ಇಂತಹ ಸ್ಥಳದಲ್ಲಿನ ಈ ದೃಶ್ಯದ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ಅನೇಕರು ಆತಂಕಗೊಂಡಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಡ್ರಗ್ಸ್‌ ಚಟಕ್ಕೆ ದಾಸರಾದ ಯುವಕ ಯುವತಿಯರು ಹೊರ ಪ್ರಪಂಚದ ಯಾವುದೇ ಅರಿವು ಇಲ್ಲದೇ ನಿಂತಲ್ಲಿಯೇ ಸಿನಿಮಾಗಳಲ್ಲಿ ಬರುವ ಜೋಂಬಿಗಳಂತೆ ತೂಕಾಡಿಸುತ್ತಿರುವುದು, ಕೆಲವರು ಸಂಪೂರ್ಣವಾಗಿ ನೆಲಕ್ಕೆ ತಲೆ ಬಾಗಿಸಿ ಮುಖ ಕೆಳಗೆ ಮಾಡಿ ವಾಲಾಡುವುದನ್ನು, ಇನ್ನು ಕೆಲವರು ಬೀದಿಯಲ್ಲೇ ಪ್ರಪಂಚದ ಪ್ರಜ್ಞೆ ಇಲ್ಲದೇ ಬಿದ್ದಿರುವುದನ್ನು ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ಆಘಾತಕ್ಕೀಡಾಗಿದ್ದು, ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇತ್ತ ಭಾರತದಲ್ಲಿ ಡ್ರಗ್ಸ್ ಸಾರ್ವಜನಿಕವಾಗಿ ಸುಲಭವಾಗಿ ಸಿಗದೇ ಹೋದರೂ ಕೂಡ ಅನೇಕ ಯುವಕ ಯುವತಿಯರು ಡ್ರಗ್ಸ್‌ಗೆ ದಾಸರಾಗಿದ್ದಾರೆ. ಕೆಲವರು ತಿಳಿದು ತಿಳಿದೇ ಈ ಹೊಂಡಕ್ಕೆ ಬಿದ್ದಿದ್ದರೆ, ಇನ್ನೂ ಕೆಲವರು ಅರಿವಿಲ್ಲದೇ ಈ ಅನಾಹುತಕ್ಕೆ ಬಲಿಯಾಗಿದ್ದಾರೆ.ಡ್ರಗ್ಸ್ ಎಷ್ಟೊಂದು ವ್ಯಾಪಕ ಜಾಲವಾಗಿದೆ ಎಂದರೆ ಕೆಲವು ಮಹಾನಗರಗಳಲ್ಲಿ ಓದಲು ಹೋದ ಮಕ್ಕಳು ಡ್ರಗ್ಸ್‌ಗೆ ದಾಸರಾದಂತಹ ಹಲವು ಪ್ರಕರಣಗಳಿವೆ.

ಇದನ್ನೂ ಓದಿ: ಡ್ರಾಪ್ ನೀಡಿದ ಬಳಿಕವೂ ಅಣ್ಣನಂತೆ ಯುವತಿ ಸುರಕ್ಷತೆ ಕಾಯ್ದ ರಾಪಿಡೋ ಚಾಲಕ: ವೀಡಿಯೋ ವೈರಲ್

ಇದನ್ನೂ ಓದಿ: ಹಿಂದೆಗೂ ಮುಂದೆಗೂ ಅಜಗಜಾಂತರ: ಮುಂದೆಯಿಂದ ನೋಡಿದ್ರೆ ಫ್ಯಾಷನ್ ಐಕಾನ್... ಹಿಂದಿನಿಂದ ನೋಡಿದ್ರೆ...

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!