
ವಾಷಿಂಗ್ಟನ್: ಟೆಕ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಕ್ರಮಣ ಶುರುವಾದ ಬೆನ್ನಲ್ಲೇ ಅಮೆರಿಕದ ಬಹುತೇಕ ಕಂಪನಿಗಳು ಉದ್ಯೋಗ ಕಡಿತವನ್ನು ಭಾರೀ ಪ್ರಮಾಣದಲ್ಲಿ ಮಾಡುತ್ತಿವೆ. ಇದು ತಾತ್ಕಾಲಿಕ ಬದಲಾವಣೆಯಾಗಿರದೆ, ಶಾಶ್ವತ ರೂಪಾಂತರ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2026ರಲ್ಲಿ 92,000 ಟೆಕ್ಕಿಗಳನ್ನು ತೆಗೆದುಹಾಕಲಾಗಿದ್ದರೆ, 2020ರಿಂದ ಈವರೆಗೆ 9,00,000 ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಟೆಕ್ ದೈತ್ಯ ಮೆಟಾ ಮತ್ತು ಮೈಕ್ರೋಸಾಫ್ಟ್‌ನಿಂದ ಗೇಟ್‌ಪಾಸ್ ಪಡೆದವರೇ 20,000 ಮಂದಿಯಾಗುತ್ತಾರೆ. ಅಮೆಜಾನ್, ಗೂಗಲ್, ಒರಾಕಲ್, ಸೇಲ್ಸ್‌ಫೋರ್ಸ್, ನೈಕಿ ಮತ್ತು ಸ್ನ್ಯಾಪ್‌ನಂತಹ ಕಂಪನಿಗಳೂ ಉದ್ಯೋಗ ಕಡಿತಕ್ಕೆ ಹೊರತಾಗಿಲ್ಲ. ಎಐ ಅಳವಡಿಕೆ ಮತ್ತು ಕೊರೋನಾ ಕಾಲದಲ್ಲಾದ ಅನಗತ್ಯ ನೇಮಕಾತಿಗಳ ಪರಿಣಾಮ ಇದು ಎನ್ನಲಾಗುತ್ತಿದೆ.
ಮುಂದಿನ ದಿನಗಳಲ್ಲಿ 8,000 ಜನರ ಕೆಲಸ ಕಸಿಯುವ ಯೋಜನೆಯಲ್ಲಿರುವ ಮೆಟಾ, 6,000 ಹುದ್ದೆಗಳಿಗೆ ಹೊಸ ನೇಮಕಾತಿಗಳನ್ನು ಮಾಡದೇ ಇರಲು ನಿರ್ಧರಿಸಿದೆ. ಮೈಕ್ರೊಸಾಫ್ಟ್ ತನ್ನ ಅಮೆರಿಕನ್ ಉದ್ಯೋಗಿಗಳಲ್ಲಿ ಶೇ.7ರಷ್ಟು ಮಂದಿಗೆ ಸ್ವಯಂ ನಿವೃತ್ತಿ ಪಡೆಯಲು ಹಲವು ಪ್ರೋತ್ಸಾಹಿಸುತ್ತಿದೆ. ನೈಕಿ 1,400 ಹುದ್ದೆಗಳನ್ನೇ ರದ್ದು ಮಾಡಿದೆ.
ಒಂದು ಕಡೆ ವೆಚ್ಚ ಕಡಿತಕ್ಕಾಗಿ ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವ ಕಂಪನಿಗಳು, ಇನ್ನೊಂದು ಕಡೆ ಎಐ ಮೇಲೆ ಅಪಾರ ಹೂಡಿಕೆ ಮಾಡುತ್ತಿವೆ. ಆಲ್ಫಬೆಟ್, ಮೈಕ್ರೋಸಾಫ್ಟ್, ಮೆಟಾ ಮತ್ತು ಅಮೆಜಾನ್ 2026ರಲ್ಲಿ ಮಾಡಲಿರುವ ಹೂಡಿಕೆಯನ್ನು ಒಟ್ಟುಗೂಡಿಸಿದರೆ 66 ಲಕ್ಷ ಕೋಟಿ ರು. ಆಗುತ್ತದೆಂಬ ಅಂದಾಜಿದೆ. ಒರಾಕಲ್‌ನಲ್ಲಿ ಉದ್ಯೋಗ ಕಡಿತದಿಂದಾಗಿ 75-94 ಸಾವಿರ ಕೋಟಿ ರು. ಉಳಿತಾಯವಾಗಲಿದೆ. ಈ ಮುಂಚೆ 250 ಉದ್ಯೋಗಿಗಳಿದ್ದಾಗ 472 ಕೋಟಿ ರು. ಆದಾಯ ಗಳಿಸುತ್ತಿದ್ದ ಕಂಪನಿಗಳು ಈಗ ಇದೇ ಮೊತ್ತವನ್ನು ಕೇವಲ 50 ಕೆಲಸಗಾರರನ್ನಿಟ್ಟುಕೊಂಡು ಸಂಪಾದಿಸುತ್ತಿವೆ.
ಅಮೆರಿಕದ ಉದ್ಯೋಗಿಗಳು ತನ್ನ ಕಂಪನಿಯ ಭವಿಷ್ಯದ ಬೆಳವಣಿಗೆಯ ಬಗ್ಗೆ ಹೊಂದಿರುವ ಭರವಸೆಯನ್ನು ಅಳೆಯುವ ಗ್ಲಾಸ್‌ಡೋರ್ ಎಂಪ್ಲಾಯಿ ಕಾನ್ಫಿಡೆನ್ಸ್ ಸೂಚ್ಯಂಕದ ಪ್ರಕಾರ, ಟೆಕ್ ಕ್ಷೇತ್ರದಲ್ಲಿ ಈ ಭರವಸೆಯು ಶೇ.6.8ರಷ್ಟು ಕುಸಿದು, ಮಾರ್ಚ್‌ನಲ್ಲಿ ಶೇ.47.2ರಷ್ಟಾಗಿದೆ. ಇದರಿಂದ ಭೀತಿಗೊಳಗಾಗಿ ಹಲವರು ಕೆಲಸ ತೊರೆಯತೊಡಗಿದ್ದಾರೆ ಎನ್ನಲಾಗಿದೆ.
ಇಸ್ಲಾಮಾಬಾದ್: ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಪ್ರಸ್ತಾವನೆಗೆ ಇರಾನ್‌ನ ಪ್ರತಿಕ್ರಿಯೆಯನ್ನು ಮಧ್ಯವರ್ತಿ ಪಾಕಿಸ್ತಾನದ ಮೂಲಕ ಕಳುಹಿಸಲಾಗಿದೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಎನ್‌ಎ ತಿಳಿಸಿದೆ. ಇದನ್ನು ಪಾಕಿಸ್ತಾನ ಕೂಡ ಖಚಿತಪಡಿಸಿದೆ,
ಪ್ರಸ್ತಾವಿತ ಯೋಜನೆಯ ಪ್ರಕಾರ, ಮಾತುಕತೆಗಳ ಮೊದಲ ಹಂತವು ಯುದ್ಧವನ್ನು ಕೊನೆಗೊಳಿಸುವುದರ ಜೊತೆಗೆ ಕೊಲ್ಲಿ ಮತ್ತು ಹೋರ್ಮುಜ್ ಜಲಸಂಧಿಯಲ್ಲಿ ‘ಸಮುದ್ರ ಭದ್ರತೆ’ಯನ್ನು ಖಚಿತಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ವರದಿ ಭಾನುವಾರ ತಿಳಿಸಿದೆ.
ಇರಾನಿನ ಪ್ರತಿಕ್ರಿಯೆಯನ್ನು ಪಾಕಿಸ್ತಾನವು ಅಮೆರಿಕದ ಕಡೆಗೆ ವರ್ಗಾಯಿಸಿದೆ ಎಂದು ಪಾಕಿಸ್ತಾನದ ರಾಜತಾಂತ್ರಿಕ ಮೂಲವೊಂದು ತಿಳಿಸಿದೆ. ಆದರೆವಿರಾನ್ ಪ್ರಸ್ತಾವದಲ್ಲೇನಿದೆ ಎಂಬುದನ್ನು ಹೇಳಲು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನಿರಾಕರಿಸಿದ್ದಾರೆ. ಈ ವಾರದ ಆರಂಭದಲ್ಲಿ ವಾಷಿಂಗ್ಟನ್ ಇರಾನ್‌ಗೆ 14 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ