ಭಯೋತ್ಪಾದನಾ ದಾಳಿ ಹೆಚ್ಚುತ್ತಿರುವ ಪಾಕಿಸ್ತಾನಕ್ಕೆ ಪ್ರವಾಸ ಬೇಡ, ಜನತೆಗೆ ಅಮೆರಿಕ ಸಂದೇಶ!

By Suvarna NewsFirst Published Oct 7, 2022, 5:22 PM IST
Highlights

ಪಾಕಿಸ್ತಾನದಲ್ಲಿ ಉಗ್ರರ ಆತಂಕ ಹೆಚ್ಚಾಗಿದೆ. ಹೀಗಾಗಿ ಪಾಕ್ ಪ್ರವಾಸ ಮುಂದೂಡಿ ಅಥವಾ ರದ್ದು ಮಾಡಿ ಎಂದು ಅಮರಿಕ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

ವಾಶಿಂಗ್ಟನ್(ಅ.07): ಪಾಕಿಸ್ತಾನದಲ್ಲಿ ವಿದೇಶಿಗರ ಮೇಲೆ ದಾಳಿಗಳು ಹೆಚ್ಚಾಗುತ್ತಿದೆ. ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗುತ್ತಿದೆ. ಆತಂಕದ ವಾತಾವರಣ ನಿರ್ಮಾಣವಾಗಿರುವ ಕಾರಣ ಅಮರಿಕ ಪ್ರಜೆಗಳು ಪಾಕ್ ಪ್ರವಾಸಕ್ಕೂ ಮುನ್ನ ಎರಡು ಬಾರಿ ಯೋಚಿಸಿ ಎಂದು ಅಮೆರಿಕ ಸಂದೇಶ ನೀಡಿದೆ. ಪ್ರಯಾಣ ಮಾರ್ಗಸೂಚಿ ಬಿಡುಗಡೆ ಮಾಡಿರುವ ಅಮೆರಿಕ, ಭಯೋತ್ಪಾದನೆಯಿಂದ ಪಾಕಿಸ್ತಾನ ಪ್ರವಾಸ ಅತೀ ಹೆಚ್ಚು ರಿಸ್ಕ್ ಪ್ರದೇಶವಾಗಿದೆ ಎಂದಿದೆ. ಅಮೆರಿಕ ಲೆವಲ್ 3 ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇನ್ನು ಪಾಕ್ ಪ್ರವಾಸ ಮಾಡಲು ಈಗಾಗಲೇ ಟಿಕೆಟ್ ಬುಕ್ ಮಾಡಿರುವ ಪ್ರವಾಸಿಗರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಈಗಾಗಲೇ ಪಾಕಿಸ್ತಾನ ತಲುಪಿರುವ ಅಮೆರಿಕ ಪ್ರಜೆಗಳು ಪಾಕಿಸ್ತಾನದ ಕೆಲ ಪ್ರಾಂತ್ಯಕ್ಕೆ ಕಾಲಿಡಲೇಬಾರದು ಎಂದು ಸೂಚಿಸಿದೆ. 

ಬಲೂಚಿಸ್ತಾನ ಪ್ರಾಂತ್ಯ, ಖೈಬರ್ ಪಂಖ್ತುಕ್ವಾ, ಕೆಲ ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡದಂತೆ ಅಮರಿಕ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಈ ಪ್ರದೇಶಗಳಲ್ಲಿ ವಿದೇಶಿಗರ ಮೇಲೆ ದಾಳಿ, ಅಪಹರಣ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚಾಗಿದೆ. ಭಯೋತ್ಪಾದಕ ದಾಳಿ, ಸಂಘರ್ಷ, ವಿದೇಶಿಗರ ಮೇಲಿನ ದಾಳಿ ಪ್ರಕರಣಗಳು ಪಾಕಿಸ್ತಾನದಲ್ಲಿ ಹೆಚ್ಚಾಗಿದೆ. 

ಉಗ್ರರ ಬೇಟೆ ನಿಲ್ಲಲ್ಲ, ಪಾಕ್‌ ಜೊತೆ ಮಾತಿಲ್ಲ: ಅಮಿತ್‌ ಶಾ

ಪಾಕಿಸ್ತಾನದಲ್ಲಿನ ಉಗ್ರ ಸಂಘಟನೆಗಳು ದಾಳಿಗೆ ಸಜ್ಜಾಗಿದೆ. ಶಾಪಿಂಗ್ ಮಾಲ್, ಸಾರಿಗೆ ಕೇಂದ್ರಗಳು, ಮಾರುಕಟ್ಟೆ,, ಮಿಲಿಟರಿ ಕೇಂದ್ರ, ವಿಮಾನ ನಿಲ್ದಾಣ, ಪ್ರವಾಸಿ ತಾಣಗಳು, ಶಾಲೆ, ಆಸ್ಪತ್ರೆ ಸೇರಿದಂತೆ ಹಲವು ಜನನಿಬಿಡ ಪ್ರದೇಶದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಉಗ್ರರ ದಾಳಿ ಕುರಿತು ಗುಪ್ತಚರ ಸಂಸ್ಥೆ ಕೆಲ ಮಾಹಿತಿ ನೀಡಿದೆ. ಈ ಮಾಹಿತಿ ಆಧಾರದಡಿ ಅಮರಿಕ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಉಗ್ರರನ್ನು ಪೋಷಿಸಿ ಭಾರತದ ವಿರುದ್ಧ ಛೂ ಬಿಡುತ್ತಿದೆ. ಈ ಕುರಿತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಈ ಮಾತನ್ನು ಪುನರುಚ್ಚರಿಸಿದೆ.  ಇತ್ತೀಚೆಗೆ ವಿದೇಶಾಂಗ ಸಚಿವ ಜೈಶಂಕರ್ ಪಾಕಿಸ್ತಾನ ಹಾಗೂ ಚೀನಾ ಕುತಂತ್ರವನ್ನು ಬಯಲು ಮಾಡಿದ್ದರು. 

ಉಗ್ರರ ರಕ್ಷಿಸುವ ಚೀನಾ, ಪಾಕ್‌ ವಿರುದ್ಧ ಜೈಶಂಕರ್‌ ವಾಗ್ದಾಳಿ
ಘೋಷಿತ ಭಯೋತ್ಪಾದಕರನ್ನು ವಿಶ್ವಸಂಸ್ಥೆಯಲ್ಲಿ ರಕ್ಷಿಸುವ ರಾಷ್ಟ್ರಗಳು ತಮ್ಮ ಸ್ವಹಿತಾಸಕ್ತಿಯನ್ನು ಅಥವಾ ಖ್ಯಾತಿಯನ್ನು ಬಳಸಿ ಅಥವಾ ತಮ್ಮ ವಾಕ್ಚಾತುರ್ಯದಿಂದ ರಕ್ತದ ಕಲೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ವಿಶ್ವಸಂಸ್ಥೆಯಲ್ಲಿ ಚೀನಾ ಹಾಗೂ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಭಾರತವು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ. ನಮ್ಮ ಪ್ರಕಾರ ಯಾವುದೇ ರೀತಿಯ ಉಗ್ರಕೃತ್ಯವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ವಾಕ್ಚಾತುರ್ಯವು ರಕ್ತದ ಕಲೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ. ಇತ್ತೀಚೆಗೆ ಮುಂಬೈ ದಾಳಿ ನಡೆಸಿದ ಲಷ್ಕರ್‌-ಎ- ತೊಯ್ಬಾದ ವಾಂಟೆಡ್‌ ಉಗ್ರ ಸಾಜಿದ್‌ ಮೀರ್‌ನನ್ನು ‘ಜಾಗತಿಕ ಉಗ್ರ’ನೆಂದು ಘೋಷಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ತಡೆಯೊಡ್ಡಿತ್ತು. ಇದಕ್ಕೂ ಮೊದಲು ಪಾಕ್‌ ಮೂಲದ ಜೈಷ್‌ ಉಗ್ರ ಅಬ್ದುಲ್‌ ರೌಫ್‌ ಅಜರ್‌ ಹಾಗೂ, ಅಲ್‌ಖೈದಾದ ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಸ್ತಾಪಕ್ಕೂ ಚೀನಾ ಯಾವುದೇ ಕಾರಣ ನೀಡದೇ ವಿಟೋ ಅಧಿಕಾರ ಬಳಸಿ ತಡೆಯೊಡ್ಡಿತ್ತು.
 

click me!