
ಅಲಾಸ್ಕಾ ಏರ್‌ಲೈನ್ಸ್ ತನ್ನ ಏರ್ ಹೋಸ್ಟೆಸ್ ಒಬ್ಬರನ್ನು ಕೇವಲ 6 ತಿಂಗಳಲ್ಲಿ ಕೆಲಸದಿಂದ ತೆಗೆದುಹಾಕಿದೆ. ವಿಮಾನದಲ್ಲಿ ಪ್ರಯಾಣಿಕರ ಪ್ರವೇಶಕ್ಕೂ ಮುನ್ನ ಏರ್ ಹೋಸ್ಟೆಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ವಿಡಿಯೋ ಬಹಿರಂಗವಾದ ನಂತರ ಆಡಳಿತ ಮಂಡಳಿ ಏರ್ ಹೋಸ್ಟೆಸ್‌ರನ್ನು ವಜಾಗೊಳಿಸಿದೆ. ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಏರ್ ಹೋಸ್ಟೆಸ್‌ಗೆ ಸಹಾಯ ಮಾಡಲು ಈಗ ನಿಧಿ ಸಂಗ್ರಹಿಸಲಾಗುತ್ತಿದೆ.
ಏನಿದು ಪ್ರಕರಣ?
ನೆಲ್ ಡಯಾಲಾ ಅಲಾಸ್ಕಾ ಏರ್‌ಲೈನ್ಸ್‌ನಲ್ಲಿ ವಿಮಾನ ಪರಿಚಾರಕಿಯರಾಗಿ ಕೆಲಸ ಮಾಡುತ್ತಿದ್ದರು. ನೆಲ್ ಡಯಾಲಾ ಇನ್ನೂ ತರಬೇತಿ ಅವಧಿಯಲ್ಲಿದ್ದರು. ಆಕೆಯ ತರಬೇತಿ ಅವಧಿ ಶೀಘ್ರದಲ್ಲೇ ಮುಗಿಯುತಿತ್ತು. ಹಾಗಾಗಿ ಅವರು ಸಂತೋಷದಿಂದ ವಿಡಿಯೋವೊಂದನ್ನು ಮಾಡಿದರು. ಕ್ಯಾಪ್ಟನ್ ಮತ್ತು ಇತರ ಪ್ರಯಾಣಿಕರು ವಿಮಾನಕ್ಕೆ ಬರುವ ಮೊದಲು ಈ ವಿಡಿಯೋವನ್ನು ಮಾಡಲಾಗಿದೆ. ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಹಾಕುವ ಮೂಲಕ ಗಗನ ಸಖಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಡಿಯೋದಲ್ಲಿ ನೆಲ್ ಡಯಾಲಾ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋಗೆ: 'ಗೇಟೋ ಗರ್ಲ್ಸ್ ಫಾರೆವರ್, ಸಮವಸ್ತ್ರದಿಂದ ಮೋಸ ಹೋಗಬೇಡಿ' ಎಂದು ಶೀರ್ಷಿಕೆ ಕೊಟ್ಟಿದ್ದಾಳೆ.
ಇದನ್ನೂ ಓದಿ: ಟೇಕಾಫ್ ಆಗುವಾಗ ವಿಮಾನದಿಂದ ಕೆಳಗೆ ಬಿದ್ದ ಗಗನಸಖಿ; ಆಸ್ಪತ್ರೆಗೆ ದಾಖಲು
ಈ ವಿಡಿಯೋ ವೈರಲ್ ಆದ ನಂತರ, ಡಯಾಲಾ ಅವರ ತರಬೇತಿ ಅವಧಿ ಮುಗಿದ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಕೆಲಸ ಖಾಯಂ ಆಗುವ ಮೊದಲೇ ಅವರ ಕೆಲಸವನ್ನು ಕೊನೆಗೊಳಿಸಲಾಯಿತು. ವಾಸ್ತವವಾಗಿ, ಏರ್‌ಲೈನ್ ಆಡಳಿತ ಮಂಡಳಿಯು ನೆಲ್ ಡಯಾಲಾ ಅವರನ್ನು ಶಿಸ್ತಿನಿಂದ ವರ್ತಿಸಿಲ್ಲ ಎಂದು ಪರಿಗಣಿಸಿ ಅವರನ್ನು ವಜಾಗೊಳಿಸಿದೆ. ಯುವತಿ ಕೆಲಸಕ್ಕೆ ಸೇರಿ ಕೇವಲ 6 ತಿಂಗಳ ವಜಾಗೊಳಿಸಿದ ಏರ್‌ಲೈನ್, ತಮ್ಮ ಸಿಬ್ಬಂದಿ ನೆಲ್ ಡಯಾಲಾ ವಿಡಿಯೋ ಮಾಡುವ ಮೂಲಕ ಶಿಸ್ತು ಉಲ್ಲಂಘಿಸಿದ್ದಾರೆ ಎಂದು ಕಾರಣವನ್ನು ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ: ನೆಲ್ ಡಯಾಲಾ ಅವರನ್ನು ಕೆಲಸದಿಂದ ವಜಾಗೊಳಿಸಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಲಾಸ್ಕಾ ಏರ್‌ಲೈನ್ಸ್ ಅನ್ನು ಟೀಕಿಸುತ್ತಾ, ವಜಾಗೊಂಡ ಏರ್ ಹೋಸ್ಟೆಸ್ ನೆಲ್ ಡಯಾಲಾ ಅವರ ವಿಡಿಯೋ ಮಾಡುವುದನ್ನು ಸಾಮಾನ್ಯವೆಂದು ಜನರು ಹೇಳುತ್ತಿದ್ದಾರೆ. ಕೆಲಸದ ಮೊದಲು ಸ್ವಲ್ಪ ಮೋಜು ಮಾಡುವುದರಲ್ಲಿ ತಪ್ಪೇನು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆದಾಗ್ಯೂ, ಕೆಲವರು ಆಡಳಿತ ಮಂಡಳಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಬ್ಬ ಬಳಕೆದಾರರು ಬರೆದಿದ್ದಾರೆ: ನೀವು ಸಮವಸ್ತ್ರವನ್ನು ಗೌರವಿಸದಿದ್ದರೆ, ನೀವು ಕೆಲಸವನ್ನೂ ಗೌರವಿಸುವುದಿಲ್ಲ. ಸಮವಸ್ತ್ರದಲ್ಲಿ ನೃತ್ಯ ಮಾಡುವುದು ತಪ್ಪು ಎಂದಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರ ಈ ಬೇಡಿಕೆಯನ್ನು ಎಂದೂ ಈಡೇರಿಸಲ್ಲ ಗಗನಸಖಿಯರು!
ಗೋಫಂಡ್‌ಮಿ ಅಭಿಯಾನ: ಇತ್ತ ವಜಾಗೊಂಡ ಏರ್ ಹೋಸ್ಟೆಸ್ ನೆಲ್ ಡಯಾಲಾ ಸಹಾಯಕ್ಕಾಗಿ ಗೋಫಂಡ್‌ಮಿ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನದ ಅಡಿಯಲ್ಲಿ ನೆಲ್ ಡಯಾಲಾಗೆ 12,000 ಡಾಲರ್ ನಿಧಿ ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ. ನೆಲ್ ಡಯಾಲಾ ಅವರು ಮಾತನಾಡಿ, ಏರ್ ಹೋಸ್ಟೆಸ್ ಕೆಲಸ ನನ್ನ ಕನಸಿನ ಕೆಲಸವಾಗಿತ್ತು. ಇದು ನನಗೆ ಪ್ರಪಂಚವನ್ನು ನೋಡಲು ಮತ್ತು ಹೊಸ ಜನರನ್ನು ಭೇಟಿ ಮಾಡಲು ಅವಕಾಶವನ್ನು ನೀಡಿತು. ಈಗ ಬೇಸರವಾಗಿದೆ ಎಂದೂ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ