ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ 48ನೇ ಹುಟ್ಟುಹಬ್ಬದಂದು ಅಲ್ಬೇನಿಯಾದ ಪ್ರಧಾನಿ ಇಡಿ ರಾಮ ಅವರು ಮಂಡಿಯೂರಿ ಸ್ಕಾರ್ಫ್ ಉಡುಗೊರೆ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಯಾರಿಗೆ ಗೊತ್ತಿಲ್ಲ ಹೇಳಿ ತಮ್ಮ ಸೌಂದರ್ಯದಿಂದಲೇ ಜಗತ್ತನ್ನು ಸೆಳೆದವರು ಇದೇ ಕಾರಣಕ್ಕೆ ಅವರು ಭೇಟಿಯಾದವರನ್ನೆಲ್ಲಾ ಅವರ ಜೊತೆಗಿನ ಫೋಟೋ ವೀಡಿಯೋಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿತ್ತು. ಈ ಟ್ರೋಲ್‌ನಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕೂಡ ತಪ್ಪಿಸಿಕೊಳ್ಳಲಾಗಲಿಲ್ಲ, ಡಿವೋರ್ಸಿಯೂ ಆಗಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಸೌಂದರ್ಯ ಹಾಗೂ ಬಿಂದಾಸ್ ಆಗಿ ನಗುನಗುತ್ತಾ ಮಾತನಾಡುವ ರೀತಿ ಇದಕ್ಕೆ ಕಾರಣ. ಇತ್ತೀಚೆಗೆ ಜಾರ್ಜಿಯಾ ಮೆಲೋನಿ ಅವರು ತಮ್ಮ 48ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅವರಿಗೆ ಶುಭ ಹಾರೈಸುವ ಭರದಲ್ಲಿ ಅಲ್ಬೇನಿಯಾದ ಪ್ರಧಾನಿ ಇಡಿ ರಾಮ ಅವರು ವರ್ತಿಸಿದ ರೀತಿ ಸ್ವತಃ ಜಾರ್ಜಿಯಾ ಮೆಲೋನಿಯವರನ್ನೇ ಅಚ್ಚರಿಗೀಡು ಮಾಡುವಂತೆ ಮಾಡಿದ್ದು, ಅದರ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
ಅಬುಧಾಬಿಯಲ್ಲಿ ನಡೆದ ವಿಶ್ವ ಭವಿಷ್ಯದ ಇಂಧನ ಶೃಂಗಸಭೆಗಾಗಿ ಅಲ್ಬೇನಿಯಾದ ಪ್ರಧಾನಿ ಎಡಿ ರಾಮಾ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇತರ ಜಾಗತಿಕ ನಾಯಕರೊಂದಿಗೆ ಅಲ್ಲಿ ಸೇರಿದ್ದರು. ಅದೇ ದಿನ ಜಾರ್ಜಿಯಾ ಮೆಲೋನಿ ಅವರ 48 ನೇ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಅಲ್ಬೇನಿಯಾದ ಪ್ರಧಾನಿ ಎಡಿ ರಾಮಾ ಅವರು ಇಟಲಿ ಪ್ರಧಾನಿಗೆ ಸ್ಕಾರ್ಫ್‌ಗಳ ಉಡುಗೊರೆ ನೀಡಿದ್ದರು. ಬರೀ ಉಡುಗೊರೆಯಂತೆ ಅವರು ಅದನ್ನು ಮೆಲೋನಿಗೆ ನೀಡಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ಅಲ್ಬೇನಿಯಾ ಪ್ರಧಾನಿ ಎಡಿ ರಾಮ ಪಕ್ಕ ಪ್ರೇಮಿಯಂತೆ ಮೆಲೋನಿ ಮುಂದೆ ಮೊಣಕಾಲೂರಿ ಕುಳಿತು ಈ ಸ್ಕಾರ್ಫನ್ನು ಅವರಿಗೆ ನೀಡಿದ್ದಾರೆ. ಎಡಿ ರಾಮ ಅವರ ಈ ನಡೆಯಿಂದ ಮೆಲೋನಿಯೂ ಅಚ್ಚರಿ ಪಟ್ಟಿದ್ದರು.
ಮೆಲೋನಿಗಿಂತ ಬಹಳ ಎತ್ತರವಿರುವ ಎಡಿ ರಾಮ ಮೆಲೋನಿ ಮುಂದೆ ಮೊಣಕಾಲೂರಿ ಸ್ಕಾರ್ಫನ್ನು ಉಡುಗೊರೆ ನೀಡಿ ಟಂಟಿ ಅಗುರಿ (tanti auguri) ಅಂದರೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದರು. @kos_data ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು, 'ಅಬುಧಾಬಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಬೇನಿಯಾದ ಪ್ರಧಾನಿ ಎಡಿ ರಾಮಾ ಅವರು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಮುಂದೆ ಮಂಡಿಯೂರಿ, ಹುಟ್ಟುಹಬ್ಬದ ಉಡುಗೊರೆಯಾಗಿ ಸ್ಕಾರ್ಫ್ ಅನ್ನು ಉಡುಗೊರೆಯಾಗಿ ನೀಡಿ "ಮಹಾರಾಣಿ" ಎಂದು ಉಲ್ಲೇಖಿಸಿದರು. ಅವರು ಸ್ಕಾರ್ಫ್ ಅನ್ನು ಅವರ ತಲೆಯ ಮೇಲೆ ಹಿಜಾಬ್‌ನಂತೆ ಇರಿಸಲು ಪ್ರಯತ್ನಿಸಿದರು.' ಎಂದು ಬರೆದುಕೊಂಡಿದ್ದಾರೆ.
ಆ ಕ್ಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು,. ಎಡಿ ರಾಮ ಉಡುಗೊರೆಯಾಗಿ ನೀಡಿದ ಈ ಹಗುರವಾದ ಸ್ಕಾರ್ಫನ್ನು ಅಲ್ಬೇನಿಯಾಗೆ ಸ್ಥಳಾಂತರಗೊಂಡ ಇಟಾಲಿಯನ್ ವಿನ್ಯಾಸಕರ ಮಾಡಿದ್ದಾನೆ ಎಂದು ಎಡಿ ರಾಮ ಅವರು ಮೆಲೋನಿಗೆ ವಿವರಿಸಿದರು. ರಾಜಕೀಯ ನಂಬಿಕೆಗಳ ವ್ಯತಿರಿಕ್ತತೆಯ ಹೊರತಾಗಿಯೂ ಇಬ್ಬರು ನಾಯಕರು ಉತ್ತಮ ಕೆಲಸದ ಒಡನಾಟವನ್ನು ಹೊಂದಿದ್ದಾರೆ . ಮೆಲೋನಿ ಇಟಲಿಯ ಬಲಪಂಥೀಯ ಬ್ರದರ್ಸ್ ಅನ್ನು ಮುನ್ನಡೆಸಿದರೆ, ರಾಮ ಅಲ್ಬೇನಿಯಾದ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಬುಧವಾರ ನಡೆದ ಶೃಂಗಸಭೆಯಲ್ಲಿ, ಇಟಲಿ, ಅಲ್ಬೇನಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್, ಆಡ್ರಿಯಾಟಿಕ್‌ನಾದ್ಯಂತ ನವೀಕರಿಸಬಹುದಾದ ಇಂಧನಕ್ಕಾಗಿ ಸಬ್‌ಸೀ ಇಂಟರ್‌ಕನೆಕ್ಷನ್ ನಿರ್ಮಿಸಲು ಕನಿಷ್ಠ 1 ಬಿಲಿಯನ್ ಯುರೋಗಳಷ್ಟು ($1 ಬಿಲಿಯನ್) ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದವು.
🇦🇱🇮🇹 Albanian PM Edi Rama knelt before Italian PM Giorgia Meloni during their visit to Abu Dhabi, presenting her with a scarf as a birthday gift and referring to her as "Your Majesty".
He also tried to place the scarf over her head like a hijab. pic.twitter.com/QSqEuuBexM