ಆಸ್ಟ್ರೇಲಿಯಾದಲ್ಲಿ ಅರಣ್ಯ ಸಮೀಪ ರಜಾ ದಿನಗಳ ಮೋಜು ಮಾಡುವುದಕ್ಕೆಂದು ಎಣ್ಣೆಯೊಂದಿಗೆ ಕ್ಯಾಂಪ್ ಮಾಡಿದವರಿಗೆ ಕಾಡು ಹಂದಿಯೊಂದು ಶಾಕ್ ನೀಡಿದೆ.
ಎಣ್ಣೆ ಆಲ್ಕೋಹಾಲ್, ಬೀರ್ ಮುಂತಾದ ಅಮಲು ಪದಾರ್ಥಗಳ ಸೇವನೆಯ ನಂತರ ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ಕೂಡ ವಿಚಿತ್ರವಾಗಿ ಆಡಲು ಪ್ರಾರಂಭಿಸುತ್ತವೆ. ಕಾಡಿನಲ್ಲಿ ಸಿಗುವ ಅಮಲೇರುವ ಹಣ್ಣುಗಳನ್ನು ತಿಂದು ಮಂಗಗಳು ಆನೆಗಳು ಸದ್ದಿಲ್ಲದೇ ಇದ್ದಲ್ಲೇ ನಿದ್ದೆಗೆ ಜಾರಿದ ಹಲವು ಘಟನೆಗಳು ಈ ಹಿಂದೆಯು ನಡೆದಿದ್ದವು. ಆದರೆ ಈಗ ಆಸ್ಟ್ರೇಲಿಯಾದಲ್ಲಿ ಅರಣ್ಯ ಸಮೀಪ ರಜಾ ದಿನಗಳ ಮೋಜು ಮಾಡುವುದಕ್ಕೆಂದು ಎಣ್ಣೆಯೊಂದಿಗೆ ಕ್ಯಾಂಪ್ ಮಾಡಿದವರಿಗೆ ಕಾಡು ಹಂದಿಯೊಂದು ಶಾಕ್ ನೀಡಿದೆ.
ಆಸ್ಟ್ರೇಲಿಯಾದ ಅರಣ್ಯವೊಂದರ ಸಮೀಪ ಇರುವ ನದಿಯೊಂದರ ಬಳಿ ಪ್ರವಾಸಿಗರು ಕ್ಯಾಂಪ್ ಮಾಡಿದ್ದು, ಇಲ್ಲಿ ಸುಂದರ ಕ್ಷಣಗಳ ಮಜಾ ಹೆಚ್ಚಿಸಲು ಇವರು ಬಿಯರ್‌ಗಳನ್ನು ಕೂಡ ತಂದಿದ್ದರು. ಆದರೆ ಕಾಡು ಹಂದಿಯೊಂದಕ್ಕೆ ಇದರ ವಾಸನೆ ಸಂಪೂರ್ಣವಾಗಿ ಅದರತ್ತ ಸೆಳೆದಿದ್ದು, ಕ್ಯಾಂಪ್‌ಗೆ ಬಂದ ಅದು ಅಲ್ಲಿದ್ದ ಬಿಯರ್ ಬಾಟಲ್‌ಗಳನ್ನು ಒಡೆದು ಕುಡಿಯಲಾರಂಭಿಸಿದೆ. ಆದರೆ ಕುಡಿದ ನಂತರ ಹಂದಿಗೆ ಅಮಲೇರಿದ್ದು, ಕುಳಿತಲ್ಲಿ ಕೂರದ ಹಂದಿ ಅಲ್ಲಿದ್ದ ಹಸುವಿನೊಂದಿಗೂ ತುಂಟಾಟವಾಡಲು ಮುಂದಾಗಿದ್ದು, ಈ ವೇಳೆ ಹಸು ಹಂದಿಯನ್ನು ಅಟ್ಟಿಸುತ್ತಾ ಸಾಗಿದೆ. ಈ ಘಟನೆಯನ್ನು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪಂಜುರ್ಲಿ ದೈವದ ರೂಪವಾಗಿ ಪೂಜಿಸುತ್ತಿದ್ದ ಕಾಡು ಹಂದಿಯನ್ನು, ಬಾಂಬ್ ಇಟ್ಟು ಹತ್ಯೆಗೈದ ದುಷ್ಕರ್ಮಿಗಳು
ನಾವು ಕ್ಯಾಂಪ್ ಫೈರ್‌ನ್ನು ಆನಂದಿಸುತ್ತಿದ್ದೆವು ಅಷ್ಟೊತ್ತಿಗೆ ಅಲ್ಲಿ ಏನೋ ಸದ್ದು ಕೇಳಿಸುತ್ತಿತ್ತು. ಹೋಗಿ ನೋಡಿದಾಗ ಹಂದಿಯೊಂದು ಪಾರ್ಟಿಗೆ ಹೋಗಿ ಪಳಗಿದವರಂತೆ ನಮ್ಮ ಬಿಯರ್ ಬಾಟಲ್‌ಗಳನ್ನು ತೆಗೆದು ಗುಟುಕಾಗಿ ಹೀರಲು ಶುರು ಮಾಡಿದ್ದು ನೋಡಿ ನಾವು ಅಚ್ಚರಿಗೊಳಗಾದೆವು. ಕುಡಿದ ನಂತರ ಹಂದಿಗೆ ಅಮಲೇರಿದ್ದು, ಅದು ಕ್ಯಾಂಪ್ ಮಾಡಿದ ಜಾಗದ ಸುತ್ತಲೂ ಓಡಾಡಲು ಶುರು ಮಾಡಿದೆ. ಈ ವೇಳೆ ಹಸುವಿನೊಂದಿಗೆ ಅದು ಪುಂಡಾಟ ತೋರಲು ಮುಂದಾಗಿದ್ದು, ಅದು ಹಂದಿಯನ್ನು ಓಡಿಸಿಕೊಂಡು ಹೋಗಿದೆ. ಆದರೆ ಅದೃಷ್ಟವಶಾತ್ ಈ ವೇಳೆ ಬೇರೆ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ.
ಕಾಡು ಹಂದಿ ಹಿಡಿಯಲು ಹಾಕಿದ್ದ ವಿದ್ಯುತ್ ತಂತಿಗೆ ಸಿಲುಕಿ ಇಬ್ಬರು ಪೊಲೀಸರು ಸಾವು
ಓರ್ವ ಪ್ರತ್ಯಕ್ಷದರ್ಶಿ ಈ ಘಟನೆಯನ್ನು ವಿವರಿಸಿದ್ದು, ನದಿಯ ಸಮೀಪದಲ್ಲಿ ಕೆಲವರು ಪಾರ್ಟಿ ಮಾಡುತ್ತಿದ್ದರು ಅವರ ವಾಹನದ ಹಿಂದೆ ಹಂದಿ ಓಡುತ್ತಿರುವುದನ್ನು ನಾವು ನೋಡಿದೆವು ಹಂದಿಯ ಹಿಂದೆ ಹಸುವೊಂದು ಬೆನ್ನಟ್ಟುತ್ತಿತ್ತು ಎಂದು ಹೇಳಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಹಂದಿಗೆ ಅಮಲು ಇಳಿದಿದ್ದು, ಅದು ತನ್ನ ಹ್ಯಾಂಗೋವರ್‌ನಿಂದ ಹೊರಗೆ ಬರಲು ಅರಣ್ಯದತ್ತ ಓಡಿತು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹಂದಿಯೂ ಎಣ್ಣೆ ಏಟ್ಟಿಗೆ ಕಪಿಯಂತೆ ಆಡಲು ಶುರು ಮಾಡಿದ ವಿಚಾರ ಇಂಟರ್‌ನೆಟ್‌ನಲ್ಲಿ ನಗು ಉಕ್ಕಿಸಲು ಕಾರಣವಾಯ್ತು. ಹಲವರು ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.