ಒಮ್ಮೊಮ್ಮೆ ಹೀಗೂ ಆಗುವುದು: ಶಾಲೆಯಲ್ಲಿ ಪದೇ ಪದೇ ಗ್ಯಾಸ್​ ಬಿಡ್ತಿದ್ದ ಬಾಲಕನ ಅರೆಸ್ಟ್​ ಮಾಡಿದ ಪೊಲೀಸ್ರು!

By Suchethana DFirst Published Oct 2, 2024, 8:54 PM IST
Highlights

ಶಾಲೆಯಲ್ಲಿ ಪದೇ ಪದೇ ಗ್ಯಾಸ್​ ಬಿಟ್ಟು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತಿದ್ದ ಬಾಲಕನನ್ನು ಅರೆಸ್ಟ್​  ಮಾಡಿದ್ದಾರೆ ಪೊಲೀಸರು.
 

 ಏನೇನೋ ಹಗರಣ ಮಾಡಿದ್ರೂ ಪೊಲೀಸರ ಕೈಗೆ ಸಿಗದೇ ಓಡಾಡಿಕೊಂಡಿರುವವರೇ ಹೆಚ್ಚು. ಪಾಪ ಅಂಥದ್ದರಲ್ಲಿ 13 ವರ್ಷದ ಬಾಲಕನನ್ನು ಪೊಲೀಸ್ರು ಅರೆಸ್ಟ್​ ಮಾಡಿದ್ದಾರೆ. ಅದೂ ಯಾವ ಕಾರಣಕ್ಕೆ ಅಂತೀರಾ? ಶಾಲೆಯಲ್ಲಿ ತರಗತಿ ನಡೆಯುತ್ತಿದ್ದಾಗ ಜೋರಾಗಿ ಹೂಸು ಬಿಟ್ಟ ಕಾರಣಕ್ಕೆ! ಈ ಸುದ್ದಿಯನ್ನು ನಂಬಲು ಕಷ್ಟವಾದರೂ ಇದು ಸತ್ಯವಾದದ್ದು. ಅಂದಹಾಗೆ, ನಮ್ಮ ಭಾರತದಲ್ಲಿ ಇಂಥದ್ದೆಲ್ಲಾ ಮಾಡಲ್ಲ ಬಿಡಿ, ಹೆಚ್ಚೆಂದರೆ ಮೂಗು ಮುಚ್ಚಿಕೊಳ್ತಾರೆ, ಇಲ್ಲಾ ಅಂದ್ರೆ ಶಾಲೆಯಿಂದ ವಿದ್ಯಾರ್ಥಿಯನ್ನು ಸ್ವಲ್ಪ ಹೊತ್ತು ಹೊರಗೆ ಕಳಿಸ್ಬೋದು ಅಷ್ಟೇ. ಆದರೆ ಇಲ್ಲಿ ಪೊಲೀಸರು ಬಂದು ವಿದ್ಯಾರ್ಥಿಯನ್ನು ಬಂಧಿಸಿಕೊಂಡೇ ಹೋಗಿಬಿಟ್ಟಿದ್ದಾರೆ.

ಅಂದಹಾಗೆ, ಇದು ನಡೆದಿರುವುದು ಫ್ಲೋರಿಡಾದಲ್ಲಿ. 13 ವರ್ಷದ ಬಾಲಕ ಮಾರ್ಟಿನ್ ಕೌಂಟಿ ಶೆರಿಫ್ ಪದೇ ಪದೇ ಹೂಸು ಬಿಡುತ್ತಿದ್ದ. ಜೋರಾಗಿ ಬಿಡುತ್ತಲೇ ಇದ್ದ. ಮಾತ್ರವಲ್ಲದೇ ಕಿಲಾಡಿಯಾಗಿರೋ ಈ ಬಾಲಕ ಎಲ್ಲರ ಕಂಪ್ಯೂಟರ್​ಗಳನ್ನು ಆಫ್​ ಮಾಡುತ್ತಿದ್ದನಂತೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳೆಲ್ಲಾ ದೂರಿದ್ದರು. ಶಿಕ್ಷಕರು ಕೂಡ ವಾಸನೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಇನ್ನು ಪಾಲಕರು ಸುಮ್ಮನಿರುತ್ತಾರೆಯೇ? ಪೊಲೀಸರಲ್ಲಿ ದೂರು ಕೊಟ್ಟಿದ್ದಾರೆ. ಪೊಲೀಸರು ಶಾಲೆಗೆ ಬಂದು ಆ ಬಾಲಕನ ಬಗ್ಗೆ ವಿಚಾರಿಸಿದ್ದಾರೆ. ಎಲ್ಲರೂ ಹೌದು ಎಂದಿದ್ದಾರೆ. ಕೊನೆಗೆ ಪೊಲೀಸರಿಗೆ ಹೆದರಿ ಬಾಲಕ ಕೂಡ ತಪ್ಪು ಒಪ್ಪಿಕೊಂಡಿದ್ದಾನೆ.

Latest Videos

ಕೆಲಸದ ಒತ್ತಡ ಸಹಿಸದೇ ಬಜಾಜ್​ ಫೈನಾನ್ಸ್​ ಸಿಬ್ಬಂದಿ ಸಾವಿಗೆ ಶರಣು! 5 ಪುಟಗಳಲ್ಲಿ ಆಘಾತಕಾರಿ ವಿವರ

ಕೂಡಲೇ ತಡ ಮಾಡದ ಪೊಲೀಸರು ಆತನನ್ನು ಅರೆಸ್ಟ್​ ಮಾಡಿ ಜೈಲಿಗೆ ಅಟ್ಟಿದ್ದಾರೆ. ಕೊನೆಗೆ ಬಾಲಕನ ತಾಯಿ ಬಂದು ಕ್ಷಮಾಪಣೆ ಕೋರಿ ಮಗನನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಈ ಕಿಲಾಡಿ ಬಾಲಕ, ಬೇಕಂತಲೇ ಹೂಸು ಬಿಡುತ್ತಿದ್ದ, ಸಹಪಾಠಿಗಳಿಗೆ ಕಿರಿಕಿರಿಯಾಗಲಿ ಎಂದು ಹೀಗೆ  ಮಾಡುತ್ತಿದ್ದ ಎಂದೂ ತಿಳಿದುಬಂದಿದೆ. 
  
ಸ್ಪೆಕ್ಟ್ರಮ್ ಜೂನಿಯರ್-ಸೀನಿಯರ್ ಹೈಸ್ಕೂಲ್ ವಿದ್ಯಾರ್ಥಿಯಾಗಿರುವ ಬಾಲಕ ಇನ್ನು ಮುಂದೆ ತಾನು ಹಾಗೆ ಮಾಡುವುದಿಲ್ಲ ಎಂದು ಕ್ಷಮಾಪಣೆ ಕೋರಿದ ಮೇಲೆ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಬಹುಶಃ ಭಾರತದಲ್ಲಿ ಹೀಗೆ ಆಗಿದ್ದರೆ ಮಕ್ಕಳ ಕಲ್ಯಾಣ ಇಲಾಖೆ ಮಧ್ಯೆ ಪ್ರವೇಶಿಸಿ ಏನೇನು ಆಗುತ್ತಿತ್ತೋ ಗೊತ್ತಿಲ್ಲ. ಆದರೆ ಫ್ಲೋರಿಡಾದಲ್ಲಿ ಶಿಕ್ಷೆ ಎಂದರೆ ಎಲ್ಲರಿಗೂ ಸಮಾನ. ಮಕ್ಕಳು ಮಾಡಿದರೂ ಅವರನ್ನು ಅರೆಸ್ಟ್​ ಮಾಡಲಾಗುತ್ತದೆ. 

ಅಬ್ಬಬ್ಬಾ ಈ ತಿಂಗಳು ಶಾಲಾ-ಕಾಲೇಜುಗಳಿಗೆ ಇಷ್ಟೊಂದು ರಜೆ ಇವೆಯಾ? ಇಲ್ಲಿದೆ ಡಿಟೇಲ್ಸ್‌

click me!