ಗಾಯಗೊಂಡು ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಬಂದ ಬೀದಿನಾಯಿ: ಅಪರೂಪದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Published : Feb 21, 2023, 11:14 AM ISTUpdated : Feb 21, 2023, 11:16 AM IST
ಗಾಯಗೊಂಡು ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಬಂದ ಬೀದಿನಾಯಿ:  ಅಪರೂಪದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಾರಾಂಶ

ಪ್ರಾಣಿಗಳು ನಮಗೂ ಭಾವನೆಗಳಿವೆ ನಮಗೂ ಮನಸ್ಸಿದೆ. ನಮಗೂ ಪ್ರೀತಿ ತೋರಿ ಎಂದು ಮೂಕ ಭಾಷೆಯಲ್ಲಿ ಮನುಷ್ಯರಿಗೆ ತಿಳಿಸುವ ಪ್ರಯತ್ನ ಮಾಡುತ್ತವೆ. ಅಂತಹ ಕ್ಷಣ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಆ ಹಳೆಯ ವಿಡಿಯೋವೊಂದು ಈಗ ಮತ್ತೆ ವೈರಲ್ ಆಗಿದೆ. 

ಬ್ರೆಸಿಲಿಯಾ: ಸಾಮಾನ್ಯವಾಗಿ ನಾವು ಪ್ರಾಣಿಗಳನ್ನು ಬುದ್ಧಿ ಇಲ್ಲದ ಪ್ರಾಣಿಗಳೆಂದು ಕಡೆಗಣಿಸುವುದೇ ಹೆಚ್ಚು, ಆದರೆ ಪ್ರಾಣಿಗಳು ನಮಗಿಂತಲೂ ಹೆಚ್ಚು ಭಾವಜೀವಿಗಳು. ಇದನ್ನು ಪ್ರಾಣಿಗಳು ತಮ್ಮ ಹಲವು ನಡೆಗಳ ಮೂಲಕ ಹಲವು ಬಾರಿ ಸಾಬೀತುಪಡಿಸಿವೆ. ಮನೆಯಲ್ಲಿ ಪ್ರಾಣಿಗಳನ್ನು ಸಾಕುವವರಿಗೆ ಇದರ ಅನುಭವ ಆಗಿರಲೂಬಹುದು. ಅದರಲ್ಲೂ ಶ್ವಾನಗಳು ಮನುಷ್ಯನ ಪಾಲಿನ ಅತ್ಯಂತ ಸ್ವಾಮಿನಿಷ್ಠ ಪ್ರಾಣಿ. ಒಂದು ತುತ್ತು ಅನ್ನ ಕೊಟ್ಟರೆ ಜೀವನದಲ್ಲಿ ಆ ಶ್ವಾನ ನಿಮ್ಮನೆಂದೂ ಮರೆಯದು. ಇಂತಹ ಮನುಷ್ಯನೊಂದಿಗೆ ಅವಿನಾಭಾವ ಒಡನಾಟ ಹೊಂದಿರುವ ಪ್ರಾಣಿಗಳು ನಮಗೂ ಭಾವನೆಗಳಿವೆ ನಮಗೂ ಮನಸ್ಸಿದೆ. ನಮಗೂ ಪ್ರೀತಿ ತೋರಿ ಎಂದು ಮೂಕ ಭಾಷೆಯಲ್ಲಿ ಮನುಷ್ಯರಿಗೆ ತಿಳಿಸುವ ಪ್ರಯತ್ನ ಮಾಡುತ್ತವೆ. ಅಂತಹ ಕ್ಷಣ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಆ ಹಳೆಯ ವಿಡಿಯೋವೊಂದು ಈಗ ಮತ್ತೆ ವೈರಲ್ ಆಗಿದೆ. 

ಪ್ರಪಂಚದಾದ್ಯಂತ ಲಕ್ಷಾಂತರ ಪ್ರಾಣಿಗಳು ಪ್ರತಿದಿನ ಬೀದಿಗಳಲ್ಲಿ ಅಲೆದಾಡುತ್ತಿರುತ್ತವೆ. ಮಾಲೀಕರಿಲ್ಲದ ಅವುಗಳು ತಮ್ಮ ಒಂದು ಹೊತ್ತಿನ ಕೂಳಿಗಾಗಿ  ಅಲ್ಲಿ ಇಲ್ಲಿ ಅಡ್ಡಾಡುತ್ತಾ  ಬೇರೆ ಬೇರೆ ನಾಯಿಗಳಿಂದ ಕಚ್ಚಿಸಿಕೊಳ್ಳುತ್ತಾ ಅಥವಾ ವಾಹನಗಳಿಂದ ಅಪಘಾತಕ್ಕೀಡಾಗಿ ಹೀಗೆ ಏನಾದರೊಂದು ಕಾರಣಕ್ಕೆ ಅವುಗಳು ಗಾಯಗೊಂಡು ನರಳಾಡುತ್ತಿರುತ್ತವೆ. ಅಂತಹ ಶ್ವಾನಗಳನ್ನು ಕೆಲವು ಮಾನವೀಯ ಮನಸ್ಸುಗಳು ಚಿಕಿತ್ಸೆ ನೀಡಿ ಸಲಹುತ್ತವೆ. ಮತ್ತೆ ಕೆಲವು ಹಾಗೆ ಕುಟುಂತ್ತಾ ಬದುಕು ಸಾಗಿಸಿದರೆ ಮತ್ತೆ ಕೆಲವು ಸಾವಿಗೀಡಾಗುತ್ತವೆ. ಮಾಲೀಕರಿಲ್ಲದ ಕಾರಣ ಈ ಬೀದಿ ನಾಯಿಗಳಿಗೆ ಶಾಶ್ವತವಾದ ಸ್ಥಳವಿಲ್ಲ. ಶಾಶ್ವತ ಆಹಾರವೂ ಇಲ್ಲ. ಹೀಗಿರುವಾಗ ಒಂದು ಗಾಯಗೊಂಡಿದ್ದ ಆದರೆ ಬುದ್ಧಿವಂತನಾಗಿದ್ದ ನಾಯಿಯೊಂದು ಅತ್ತಿತ್ತ ನೋಡುತ್ತಾ ಸೀದಾ ನಗರದ ಪಶು ವೈದ್ಯಕೀಯ ಆಸ್ಪತ್ರೆಗೆ ಬಂದಿದೆ. ಬಹುಶಃ ತನ್ನ ನೋವಿಗೆ ವೈದ್ಯರು ಚಿಕಿತ್ಸೆ ನೀಡಬಹುದು ಎಂದು ಅದು ಭಾವಿಸಿತ್ತೋ ಏನೋ. ಆದರೆ ಬಾಯಿ ಬಾರದ ಬುದ್ಧಿ ಇಲ್ಲ ಎಂದು ಮನುಷ್ಯರು ಭಾವಿಸಿದ ಈ ಶ್ವಾನದ ನಡೆ ನೋಡಿ ಅಚ್ಚರಿ ಪಡುವ ಕ್ಷಣ ವೈದ್ಯರದ್ದಾಗಿತ್ತು. 

ನಾಯಿಯನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡ 28 ವರ್ಷದ ಯುವಕ

ಅಂದಹಾಗೆ ಬ್ರೆಜಿಲ್‌ನಲ್ಲಿ(Brazil) ಈ ಘಟನೆ ನಡೆದಿದೆ. ವೈದ್ಯ ಡೇಸ್ ಫೆರೆರಾ (Dayse Ferreira) ಕೆಲಸ ಮಾಡುವ ಪಶುವೈದ್ಯಕೀಯ ಚಿಕಿತ್ಸಾಲಯ (veterinary clinic) ಕಾಲು ನೋವಿನಿಂದ ಬಳಲುತ್ತಿದ್ದ ಶ್ವಾನವೊಂದು ಕುಂಟುತ್ತಾ ಕುಂಟುತ್ತಾ ಆಗಮಿಸಿದೆ.  ಮಾಲೀಕರಿಲ್ಲದ ಈ ಬೀದಿ ನಾಯಿ ಆಸ್ಪತ್ರೆಗೆ ಬಂದಿದ್ದನ್ನು ನೋಡಿ ಅವರಿಗೆ ಅಚ್ಚರಿ ಕಾದಿತ್ತು.  ತಾನು ಚಿಕಿತ್ಸೆಗೆ ಸರಿಯಾದ ಸ್ಥಳಕ್ಕೆ ಬಂದಿದ್ದೇನೆ ಎಂದು ತಿಳಿದಿರುವ ಬುದ್ಧಿವಂತ ನಾಯಿಗೆ ವೈದ್ಯರು ಆರೈಕೆ ಮಾಡಲು ಹಿಂಜರಿಕೆ ಮಾಡಲಿಲ್ಲ. 

ನಾಯಿ ಕ್ಲಿನಿಕ್‌ಗೆ ಆಗಮಿಸಿದ ವೇಳೆ ಡಾಕ್ಟರ್ ಫೆರೇರಾ ಅವರು ತಮ್ಮ ಗ್ರಾಹಕರೊಂದಿಗೆ ಮಾತುಕತೆ ನಡೆಸಿ ಆಗಷ್ಟೇ ಹೊರ ಬಂದಿದ್ದರು. ನಾಯಿ ಕ್ಲಿನಿಕ್‌ಗೆ ಬಂದಿದ್ದನ್ನು  ಗಮನಿಸಿದಾಗ  ಆ ನಾಯಿ ಗಾಯಗೊಂಡಿದ್ದು, ನಡೆಯಲು ಕಷ್ಟಪಡುತ್ತಾ ಕುಂಟುತ್ತಿದ್ದಿದ್ದನ್ನು ಗಮನಿಸಿದರು. ಅಲ್ಲದೇ ಏನೂ ಅರಿಯದ ನಾಯಿ ಸರಿಯಾದ ಸ್ಥಳಕ್ಕೆ ಬಂದಿದ್ದನ್ನು ನೋಡಿ ಅವರು ಅಚ್ಚರಿ ಪಟ್ಟರು. ವೈದ್ಯ ಫೆರೇರಾ ಅವರನ್ನು ನೋಡಿದ ನಾಯಿ  ಅವರನ್ನು ಸಂಪೂರ್ಣವಾಗಿ ನಂಬಿತ್ತು. 

ಟ್ವಿಟರ್‌ಗೆ ಹೊಸ CEO ನೇಮಿಸಿದ ಎಲಾನ್ ಮಸ್ಕ್, ತಲೆಕೆಟ್ಟು ಎಡವಟ್ಟಾಯ್ತಾ ಎಂದ ನೆಟಿಜೆನ್ಸ್!

ಈ ಬಗ್ಗೆ ಪ್ರಾಣಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಸದಾ ವಿಡಿಯೋ ಪೋಸ್ಟ್ ಮಾಡುತ್ತಾ ಪ್ರಾಣಿ ಕಲ್ಯಾಣದಲ್ಲಿ ತೊಡಗಿರುವ ಡುಡೋ ಜೊತೆ ಮಾತನಾಡಿದ ವೈದ್ಯ ಫೆರೇರಾ ಹೇಳಿದ್ದಿಷ್ಟು, 'ಈ ಶ್ವಾನ ಕ್ಲಿನಿಕ್‌ನೊಳಗೆ ಬಂದು ಗಾಯಗೊಂಡ ತನ್ನ ಕಾಲನ್ನು ನನ್ನ ಮುಂದೆ ಇರಿಸಿದ. ಒಂದು ಹೆಲೋ ಹೇಳಲು ಹಾಗೂ ತನಗೆ ನೋವಾಗಿದೆ ಚಿಕಿತ್ಸೆ ನೀಡಿ ಎಂದು ತೋರಿಸಲು ಆತ ತನ್ನ ಮುಂಭಾಗದ ಕಾಲು ಮುಂದೆ ಮಾಡಿದ್ದ. ತನಗೆ ಸಹಾಯ ಎಲ್ಲಿ ಕೇಳಬೇಕೆಂದು ತಿಳಿದಿದ್ದ ಅವನ ನಡೆ ನಮಗೆ ಅಚ್ಚರಿ ಮೂಡಿಸಿತ್ತು' ಎಂದು ವೈದ್ಯರು ಹೇಳಿದ್ದಾರೆ. 

ನಂತರ ವೈದ್ಯರು ಶ್ವಾನವನ್ನು ತಪಾಸಣೆ ಮಾಡಿದ್ದು, ಆತ ಗಂಭೀರ ಗಾಯಗೊಂಡಿಲ್ಲ ಎಂಬುದನ್ನು  ಕಂಡುಕೊಂಡರು.  ಆದರೆ ಕಾಲಿನಲ್ಲೊಂದು ಗಡ್ಡೆ ಇತ್ತು. ಅದಕ್ಕೆ ವೈದ್ಯರು ಚಿಕಿತ್ಸೆ ನೀಡಿದರು. ಅಲ್ಲದೇ ನಾಯಿಯನ್ನು ಚೆಂದ ಶುಚಿಗೊಳಿಸಿ ಅದಕ್ಕೆ ಕೆಲವು ಔಷಧಿಗಳನ್ನು ನೀಡಿದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!