ಸುಧಾರಿಸಿಕೊಳ್ಳುವ ಮೊದಲೇ ಟರ್ಕಿ-ಸಿರಿಯಾದಲ್ಲಿ ಮತ್ತೆ ಪ್ರಬಲ ಭೂಕಂಪ, ಬಹುತೇಕ ನೆಲಸಮ!

Published : Feb 20, 2023, 11:23 PM ISTUpdated : Feb 20, 2023, 11:37 PM IST
ಸುಧಾರಿಸಿಕೊಳ್ಳುವ ಮೊದಲೇ ಟರ್ಕಿ-ಸಿರಿಯಾದಲ್ಲಿ ಮತ್ತೆ ಪ್ರಬಲ ಭೂಕಂಪ, ಬಹುತೇಕ ನೆಲಸಮ!

ಸಾರಾಂಶ

ಭೀಕರ ಭೂಕಂಪದಿಂದ ಟರ್ಕಿ ಇನ್ನೂ ಸುಧಾರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮತ್ತೆ ಟರ್ಕಿಯಲ್ಲಿ ಪ್ರಭಲ ಭೂಕಂಪ ಸಂಭವಿಸಿದೆ. ಈ ಬಾರಿ ಬಹುತೇಕ ಕಟ್ಟಗಳು ನೆಲಸಮಗೊಂಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ

ಟರ್ಕಿ(ಫೆ.20): ಟರ್ಕಿ ಹಾಗೂ ಸಿರಿಯಾ ತತ್ತರಿಸಿದೆ. ಫೆಬ್ರವರಿ 6 ರಂದು ಸಂಭವಿಸಿದ 7.8ರ ತೀವ್ರತೆಯ ಭೂಕಂಪದಿಂದ 50 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನೂ ಈ ಭೂಕಂಪದ ರಕ್ಷಣಾ ಕಾರ್ಯಗಳು, ಅವಶೇಷಗಳ ತೆರವು ಮುಗಿದಿಲ್ಲ. ಅಷ್ಟರಲ್ಲೇ ಟರ್ಕಿ ಹಾಗೂ ಸಿರಿಯಾ ಗಡಿಯಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ. ಇಂದು(ಫೆ.20) ರಾತ್ರಿ 10.34ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 6.3ರ ತೀವ್ರತೆ ದಾಖಲಾಗಿದೆ. ಸಿರಿಯಾದ ಲಟಾಕಿಯಾ ಪ್ರಾಂತ್ಯದ ಸುಮಾರು 70 ಕಿಲೋಮೀಟರ್ ವಲಯದಲ್ಲಿ ಭೂಮಿ ಕಂಪಿಸಿದರೆ, ಇತ್ತ ಟರ್ಕಿಯ ಆ್ಯಂಟಕ್ಯಾ ಪ್ರದೇಶ 14 ಕಿಲೋಮೀಟರ್ ಸುತ್ತಳೆತೆ ಪ್ರದೇಶದಲ್ಲಿ ಭೂಮಿ ಕಂಪಿಸಿದೆ.

ಟರ್ಕಿ ಹಾಗೂ ಸಿರಿಯಾ ಭಾಗದಲ್ಲಿ ಸಂಭವಿಸಿದ ಎರಡನೇ ಭೂಕಂಪದ ತೀವ್ರತೆಗೆ ಈಜಿಪ್ಟಿ ಹಾಗೂ ಲೆಬೆನಾನ್‌ನಲ್ಲಿ ಭೂಮಿ ಲಘುವಾಗಿ ಕಂಪಿಸಿದ ಅನುಭವಾಗಿದೆ. ಇದೀಗ ರಕ್ಷಣಾ ತಂಡಗಳು ಹೊಸದಾಗಿ ಭೂಕಂಪ ಸಂಭವಿಸಿದ ಸ್ಥಳಕ್ಕೆ ಧಾವಿಸಿದೆ. 

12 ದಿನಗಳ ಹಿಂದೆ ಟರ್ಕಿ ಮತ್ತು ಸಿರಿಯಾಗಳಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 46,002ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 40,402 ಹಾಗೂ ಸಿರಿಯಾದಲ್ಲಿ 5,800 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದೆ. 7.8 ತೀವ್ರತೆಯ ಭೂಕಂಪಕ್ಕೆ ಟರ್ಕಿಯಲ್ಲಿ 5 ಲಕ್ಷ ಕಟ್ಟಡಗಳು ನಾಶವಾಗಿದ್ದು ಹಲವಾರು ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಉರುಳಿದ ಕಟ್ಟಡಗಳ ಅಡಿಯಿಂದ ಜನರ ರಕ್ಷಣಾ ಕಾರ್ಯಚರಣೆ ಭಾನುವಾರ ಬಹುತೇಕ ಕೊನೆಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಟರ್ಕಿಗೆ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಎನ್‌ಡಿಆರ್‌ಎಫ್‌ನ ಮೂರೂ ತಂಡಗಳು ತಮ್ಮ ಕಾರ್ಯಾಚರಣೆ ಮುಗಿಸಿ ಭಾನುವಾರ ಭಾರತಕ್ಕೆ ಮರಳಿವೆ.

ಇಂದು ಸಂಭವಿಸಿದ ಭೂಕಂಪದಲ್ಲಿ ಕೆಲ ಕಟ್ಟಗಳು ಧರೆಗುರುಳಿದೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಆದರೆ ಸಾವು ನೋವಿನ ಕುರಿತ ಮಾಹಿತಿ ಲಭ್ಯವಾಗಿಲ್ಲ. ಟರ್ಕಿ ಹಾಗೂ ಸಿರಿಯಾ ಗಡಿ ಭಾಗದಲ್ಲಿ ಸಂಭವಿಸಿರುವ ಭೂಕಂಪದ ಕುರಿತು ಹೆಚ್ಚಿನ ಅಪ್‌ಡೇಟ್‌ಗಾಗಿ ಏಷ್ಯಾನೆಟ್ ಸುವರ್ಣನ್ಯೂಸ್ ಫಾಲೋ ಮಾಡಿ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ