
ವಾಷಿಂಗ್ಟನ್: ಅಮೆರಿಕಾದಲ್ಲಿ ಶ್ವಾನವೊಂದು ತನ್ನ ಮಾಲೀಕನಿಗೆ ಗುಂಡಿಕ್ಕಿದ ವಿಚಿತ್ರ ಘಟನೆ ನಡೆದಿದೆ. ನಾಯಿ ಮಾಲೀಕನಿಗೆ ಗುಂಡಿಕ್ಕೊದ? ಇದು ಹೇಗೆ ಸಾಧ್ಯ? ಅಂತ ನೀವು ಅಚ್ಚರಿಯಾಗೋದು ನಿಜ. ಆದರೆ ಈ ಘಟನೆ ನಡೆದಿದ್ದು ಕೂಡ ನಿಜ. ಅದು ಹೇಗೆ ನಡೆದಿರಬಹುದು ಅಂತ ಕುತೂಹಲನಾ ಹಾಗಿದ್ರೆ ಮುಂದೆ ಓದಿ..
ಘಟನೆ ನಡೆದಿದ್ದು ಹೇಗೆ?
ಅಮೆರಿಕಾದ ಟೆನ್ನೆಸ್ಸೀಯ ಮೆಂಫಿಸ್‌ನ ವ್ಯಕ್ತಿಯೊಬ್ಬ ಸೋಮವಾರ ಬೆಳಗಿನ ಜಾವ ತನ್ನ ಗೆಳತಿಯ ಪಕ್ಕದಲ್ಲಿ ಮಲಗಿದ್ದ ವೇಳೆ ನಾಯಿ ಗುಂಡು ಹಾರಿಸಿದೆಯಂತೆ ಅರೆರೆ ನಾಯಿಗೇನು ದ್ವೇಷ, ಗೆಳತಿಯ ಜೊತೆ ಅತ ಮಲಗಿದ್ದಕ್ಕೆ ನಾಯಿಗೆ ಹೊಟ್ಟೆಉರಿನ ಅಂತ ಅನ್ಕೋಬೇಡಿ. ಈತ ಹಾಸಿಗೆಯಲ್ಲೇ ಲೋಡೆಡ್ ಗನ್ (ಅಮೆರಿಕಾದಲ್ಲಿ ಮನೆಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದು ಸಾಮಾನ್ಯ ಎನಿಸಿದೆ). ಇಟ್ಕೊಂದು ಮಲಗಿದ್ದಾನೆ. ಈ ವೇಳೆ ನಾಯಿ ಹಾಸಿಗೆಯೇ ಮೇಲೆ ಹಾರಿದೆ. ನಾಯಿಯ ಕಾಲು ಸೀದಾ ಗನ್ ನಳಿಕೆ ಮೇಲೆ ಬಿದ್ದಿದ್ದ, ಇದರಿಂದ ಅಚಾನಕ್ ಆಗಿ ಗುಂಡು ಹಾರಿದೆ. ಪರಿಣಾಮ ತುಂಬಿದ್ದ ಗನ್‌ನಿಂದ ಗುಂಡು ಹಾರಿ ಹೋಗಿ ಮಾಲೀಕನ ತೊಡೆ ಸೀಳಿದೆ. ಅದೃಷ್ಟವಶಾತ್ ಆತ ಗಾಯದೊಂದಿಗೆ ಬದುಕುಳಿದಿದ್ದಾನೆ. ಗುಂಡು ತಗುಲಿದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಫೋನ್‌ನಲ್ಲಿ ಮುಳುಗಿದವನಿಗೆ ಪಕ್ಕದಲ್ಲಿದ್ದ ನಾಯಿನಾ ಚಿರತೆ ಹೊತ್ಕೊಂಡೋದ್ರು ಗೊತ್ತಾಗಿಲ್ಲ: ವೀಡಿಯೋ
ಮಾಲೀಕನಿಗೆ ಗುಂಡಿಕ್ಕಿದ ನಾಯಿ ಪಿಟ್‌ಬುಲ್
ಅಂದಹಾಗೆ ಹೀಗೆ ತನಗೆ ಗೊತ್ತಿಲ್ಲದೇ ಮಾಲೀಕನಿಗೆ ಗುಂಡಿಕ್ಕಿದ ನಾಯಿ ಪಿಟ್‌ಬುಲ್ ತಳಿಯ ನಾಯಿಯಾಗಿದ್ದು, ಈ ಪಿಟ್‌ಬುಲ್ ಶ್ವಾನಗಳು ತಮ್ಮ ಅಪಾಯಕಾರಿ ಆಕ್ರಮಣಕ್ಕೆ ಹೆಸರುವಾಸಿಯಾಗಿವೆ. ಇದೇ ಕಾರಣಕ್ಕೆ ಈ ತಳಿಯ ಶ್ವಾನಗಳನ್ನು ಸಾಕುವುದಕ್ಕೆ ಹಲವು ದೇಶಗಳಲ್ಲಿ ನಿಷೇಧವಿದೆ. ಇತ್ತ ಹೀಗೆ ಮಾಲೀಕನಿಗೆ ಗುಂಡಿಕ್ಕಿದ ಶ್ವಾನದ ಹೆಸರು ಓರಿಯೋ, ಮಾಲೀಕನ ಹಾಸಿಗೆಯ ಮೇಲೆ ಈ ಶ್ವಾನ ಹಾರಿದಾಗ ಅದರ ಕಾಲಿನ ಸ್ಪರ್ಶಕ್ಕೆ ಬಂದೂಕು ಟ್ರಿಗರ್ ಆಗಿ ಮಾಲೀ ಗಾಯಗೊಂಡಿದ್ದಾನೆ ಎಂದು ಈ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಪೊಲೀಸರು ಹೇಳಿದ್ದಾರೆ.
ಬಾಗಿಲಲ್ಲಿ ನೇತಾಡುವವರನ್ನೆಲ್ಲಾ ರೈಲಿನ ಒಳಗಟ್ಟಿದ ಶ್ವಾನ: ವೀಡಿಯೋ ಸಖತ್ ವೈರಲ್
ಟ್ರಿಗರ್ ಲಾಕ್ ಬಳಸಿ
ಇತ್ತ ಈ ಘಟನೆ ನಡೆಯುವ ವೇಳೆ ಈ ವ್ಯಕ್ತಿಯ ಗೆಳತಿ ಗಾಢ ನಿದ್ದೆಯಲ್ಲಿದ್ದರು ಎಂದು ವರದಿಯಾಗಿದೆ. ಈ ಘಟನೆ ಬಳಿಕ ಗನ್‌ಗೆ ಟ್ರಿಗರ್ ಲಾಕ್ ಬಳಸಿ ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಇದೇ ಮೊದಲಲ್ಲ,
ಹಾಗಂತ ನಾಯಿಗಳು ಹೀಗೆ ಅಚಾನಕ್ ಆಗಿ ಗುಂಡು ಹಾರಿಸುವುದು ಇದೇ ಮೊದಲಲ್ಲ, ಎರಡು ವರ್ಷಗಳ ಹಿಂದೆ, ಅಮೆರಿಕಾದ ಕಾನ್ಸಾಸ್‌ನಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ಬೇಟೆಯಾಡುವ ರೈಫಲ್ ಅನ್ನು ಅಚಾನಕ್ ಆಗಿ ತುಳಿದ ಪರಿಣಾಮ 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಹಾಗೆಯೇ 2018 ರಲ್ಲಿ, ಅಯೋವಾದ 51 ವರ್ಷದ ವ್ಯಕ್ತಿಯೊಬ್ಬರು ತನ್ನ ಪಿಟ್ ಬುಲ್-ಲ್ಯಾಬ್ರಡಾರ್ ಮಿಶ್ರ ತಳಿಯ ಶ್ವಾನದಿಂದ ಕಾಲಿಗೆ ಗುಂಡು ಹಾರಿಸಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ