
ಬೆಲ್ಜಿಯಂ(ಜ. 17): ರೈಲು ಬರುತ್ತಿದ್ದ ವೇಳೆ ಫ್ಲಾಟ್‌ಫಾರ್ಮ್ ಮೇಲೆ ನಿಂತಿದ್ದ ಮಹಿಳೆಯನ್ನು ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬ ನೋಡು ನೋಡುತ್ತಿದ್ದಂತೆ ಕೆಳಕ್ಕೆ ತಳ್ಳಿದ ಭಯಾನಕ ಘಟನೆ ಬೆಲ್ಜಿಯಂನ (Belgiam) ಬ್ರುಸ್ಸೆಲ್‌ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯಾವಳಿ ಕ್ಯಾಮರಾದಲ್ಲಿ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಯ ಹುಟ್ಟಿಸುತ್ತಿದೆ.
ಬೆಲ್ಜಿಯಂನ ರಾಜಧಾನಿಯಲ್ಲಿರುವ ರೋಜರ್ (Rogier) ಮೆಟ್ರೋ ಸ್ಟೇಷನ್‌ನಲ್ಲಿ ಈ ಅವಘಡ ಸಂಭವಿಸಿದ್ದು,ಅದೃಷ್ಟವಶಾತ್ ಮಹಿಳೆ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೇವಲ 30 ಸೆಕೆಂಡುಗಳ ಈ ವಿಡಿಯೋ ಎಲ್ಲರ ಮೈ ಜುಮ್ಮೆನಿಸುವಂತಿದೆ. ಶುಕ್ರವಾರ ಸಂಜೆ ಬ್ರುಸೆಲ್ಸ್‌ನ ರೋಜಿಯರ್ ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಮಹಿಳೆ ಹಾಗೂ ಇತರ ಪ್ರಯಾಣಿಕರ ಕಾಯುತ್ತಾ ನಿಂತಿದ್ದರು. ರೈಲು ನಿಲ್ದಾಣದೊಳಗೆ ಬರುತ್ತಿದ್ದಂತೆ, ಕಪ್ಪು ಟಿ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಮಹಿಳೆಯನ್ನು ಜೋರಾಗಿ ತಳ್ಳುತ್ತಾನೆ. ಈ ವೇಳೆ ನಿರೀಕ್ಷಿಸದ ಹೊಡೆತದಿಂದ ಸಮತೋಲನ ತಪ್ಪಿದ ಮಹಿಳೆ ತನ್ನತ್ತ ಬರುತ್ತಿರುವ ರೈಲಿನ ಮುಂದೆ ಹಳಿಗಳ ಮೇಲೆ ಬೀಳುತ್ತಾಳೆ.
ಅದೃಷ್ಟವಶಾತ್ ಸಮಯ ಪ್ರಜ್ಞೆ ಮೆರೆದ ರೈಲಿನ ಚಾಲಕ ತಕ್ಷಣವೇ ರೈಲು ನಿಲ್ಲಿಸಿದ ಪರಿಣಾಮ ಮಹಿಳೆಯ ಜೀವ ಉಳಿದಿದೆ. ಬಳಿಕ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಮಹಿಳೆಯನ್ನು ಹಳಿಗಳಿಂದ ಮೇಲೆತ್ತಿ ತಂದು ರಕ್ಷಣೆ ಮಾಡಿದ್ದಾರೆ. ರೈಲಿನ ಚಾಲಕನು ಸಮಯಕ್ಕೆ ವಿರಾಮಗಳನ್ನು ಅನ್ವಯಿಸುತ್ತಾನೆ. ತನ್ನ ಬೇರಿಂಗ್‌ಗಳನ್ನು ಪಡೆಯಲು ಹೆಣಗಾಡುತ್ತಿರುವ ದಿಗ್ಭ್ರಮೆಗೊಂಡ ಮಹಿಳೆಯಿಂದ ಮೆಟ್ರೋ ಇಂಚುಗಳಷ್ಟು ದೂರದಲ್ಲಿ ನಿಲ್ಲುತ್ತದೆ. ವೀಕ್ಷಕರು ಅವಳನ್ನು ಟ್ರ್ಯಾಕ್‌ಗಳಿಂದ ಸಹಾಯ ಮಾಡಲು ಧಾವಿಸುತ್ತಾರೆ.
ರೈಲಿನಲ್ಲಿ ಮಹಿಳೆ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಸಲಿ ಕಾರಣ ಕೇಳಿ ಪೊಲೀಸರು ಕಕ್ಕಾಬಿಕ್ಕಿ..!
ಬಳಿಕ ಮಹಿಳೆ ಹಾಗೂ ಮೆಟ್ರೋ ರೈಲಿನ ಚಾಲಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮಹಿಳೆಯನ್ನು ಕೆಳಗೆ ತಳ್ಳಿದ ದುಷ್ಕರ್ಮಿ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಆತ ಮತ್ತೊಂದು ಮೆಟ್ರೋ ರೈಲು ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾನೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ರೋಚಕ ಸ್ಟೋರಿಗಳಿವು
ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬ ರೈಲು ಬರುವುದನ್ನೇ ಕಾದು ರೈಲು ಬರುತ್ತಿದ್ದಂತೆ ಹಳಿಯ ಮೇಲೆ ಮಲಗಿದ್ದ ಘಟನೆ ಮುಂಬೈನ ಶಿವ್ಡಿ ರೈಲು ನಿಲ್ದಾಣದ ಸಮೀಪ ನಡೆದಿತ್ತು. ಆದರೆ ಆತನ ಅದೃಷ್ಟ ಚೆನ್ನಾಗಿತ್ತೇನೋ ಇದನ್ನು ನೋಡಿದ ರೈಲಿನ ಲೋಕೋಪೈಲೆಟ್ ಕೂಡಲೇ ರೈಲಿನ ತುರ್ತು ಬ್ರೇಕ್ ಎಳೆದು ರೈಲು ನಿಲ್ಲಿಸಿದ್ದರು. ನಂತರ ರೈಲ್ವೆ ಸಿಬ್ಬಂದಿ ಬಂದು ಈತನನ್ನು ಎಬ್ಬಿಸಿ ರಕ್ಷಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ