ಪ್ರಾಣ ಪಣಕ್ಕಿಟ್ಟು ಹೆಪ್ಪುಗಟ್ಟಿದ ಸರೋವರದಲ್ಲಿದ್ದ ನಾಯಿಯ ರಕ್ಷಿಸಿದ ಪೊಲೀಸ್ ಅಧಿಕಾರಿ

Suvarna News   | Asianet News
Published : Jan 17, 2022, 04:33 PM IST
ಪ್ರಾಣ ಪಣಕ್ಕಿಟ್ಟು ಹೆಪ್ಪುಗಟ್ಟಿದ ಸರೋವರದಲ್ಲಿದ್ದ ನಾಯಿಯ ರಕ್ಷಿಸಿದ ಪೊಲೀಸ್ ಅಧಿಕಾರಿ

ಸಾರಾಂಶ

ಪ್ರಾಣ ಪಣಕ್ಕಿಟ್ಟು ನಾಯಿಯ ರಕ್ಷಿಸಿದ ಅಧಿಕಾರಿ ಹಿಮದಿಂದ ಕೂಡಿದ ನೀರಿನಲ್ಲಿ ಸಿಲುಕಿದ್ದ ಶ್ವಾನ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಘಟನೆ

ನ್ಯೂಯಾರ್ಕ್‌: ಮೈನಸ್‌ ಡಿಗ್ರಿ ತಾಪಮಾನದಿಂದಾಗಿ ಭಾಗಶಃ ಗಟ್ಟಿಯಾಗಿದ್ದ ಸರೋವರ ಮಧ್ಯೆ ಸಿಲುಕಿದ್ದ ನಾಯಿಯೊಂದನ್ನು ಪೊಲೀಸ್‌ ಅಧಿಕಾರಿಯೊಬ್ಬರು ರಕ್ಷಣೆ ಮಾಡಿದ್ದಾರೆ. ನೀರಿನ ಮೇಲ್ಮೈಯಷ್ಟೇ ಗಟ್ಟಿಯಾಗಿದ್ದು, ನಾಯಿಯ ರಕ್ಷಣೆಯ ಸಲುವಾಗಿ ಪೊಲೀಸ್‌ ಅಧಿಕಾರಿ ತುಂಬಾ ತೆಳ್ಳನೆಯ ಮಂಜುಗಡ್ಡೆಯ ಮೇಲೆ ಕಾಲಿಟ್ಟು ನೀರಿನೊಳಗೆ ಇಳಿದು ಹೋಗಿ ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಲೆವಿಸ್ಟನ್ (Lewiston) ಪೊಲೀಸ್ ಠಾಣೆಯ ಅಧಿಕಾರಿ ಜಾನ್ ಸ್ಮಿತ್ (Jon Smith) ಅವರು ಬಾಂಡ್ ಸರೋವರ (Bond Lake)ದ ಒಳಗೆ ಸಿಲುಕಿ ಹೊರಗೆ ಬರಲಾಗದೆ ಕಷ್ಟಪಡುತ್ತಿದ್ದ ನಾಯಿಯನ್ನು ನೋಡಿ ರಕ್ಷಣೆಗೆ ಮುಂದಾಗಿದ್ದಾರೆ. ಈ ನಾಯಿಯು ದಡದಿಂದ ಸುಮಾರು 50 ಗಜಗಳಷ್ಟು ದೂರದಲ್ಲಿ ನೀರಿನಲ್ಲಿ ಸಿಲುಕಿಕೊಂಡಿತ್ತು.

 

ಪೊಲೀಸ್‌ ಅಧಿಕಾರಿ ಜಾನ್ ಸ್ಮಿತ್ ಈ ಹಿಂದೆಯೂ ಒಮ್ಮೆ ಜನ ಮೆಚ್ಚುವ ಕಾರ್ಯ ಮಾಡಿದ್ದರು. ಬೆಂಕಿ ಬಿದ್ದ ಮನೆಯೊಳಗೆ ಸಿಲುಕಿದ್ದ ಮಹಿಳೆಯೊಬ್ಬರನ್ನು ಅವರು ರಕ್ಷಿಸಿದ್ದರು. ಆದರೆ ಈ ಬಾರಿ ಅವರು ಸ್ವಾಮಿನಿಷ್ಠೆಗೆ ಹೆಸರಾದ ಶ್ವಾನಕ್ಕೆ ಸಹಾಯ ಮಾಡಿದ್ದಾರೆ ಎಂದು ಲೆವಿಸ್ಟನ್ ಪೊಲೀಸ್‌ ಠಾಣೆಯ ಪ್ರಕಟಣೆ ಹೇಳಿದೆ. ಯಾವುದೇ ಹಿಂಜರಿಕೆ ಇಲ್ಲದೇ ಜಾನ್‌ ಸ್ಮಿತ್ ತಮ್ಮ ಬಟ್ಟೆಗಳನ್ನು ಕಳಚಿ ಸರೋವರಕ್ಕೆ ಇಳಿದಿದ್ದು, ಬಳಿಕ ನಾಯಿಯನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಲ್ಲದೇ ಅದನ್ನು ಅದರ ಮಾಲೀಕನ ಬಳಿ ಸೇರಿಸಿದ್ದಾರೆ. 

Pet birthday: ನಾಯಿ ಸಾಕಲು ಬಿಡದ್ದಕ್ಕೆ ಮನೆ ಬಿಟ್ಟು ಬಂದರು..! ಶ್ವಾನದ ಬರ್ತ್‌ಡೇಗೆ ಸ್ಪೆಷಲ್ ಬಿರಿಯಾನಿ

ಇದರಿಂದ ಖುಷಿಗೊಂಡ ನಾಯಿಯ ಮಾಲೀಕರು ನಂತರ ಪೊಲೀಸರಿಗೆ ಪತ್ರ ಬರೆದಿದ್ದು, ಅದರಲ್ಲಿ ಅವರು, ಜಾನ್‌ ಸ್ಮಿತ್ ಅವರ ಕಾರ್ಯಗಳನ್ನು ಶ್ಲಾಘಿಸಿದರು. ಆ ಮಂಜುಗಡ್ಡೆಯ ಮೇಲೆ ನಡೆಯುವುದು ಅತ್ಯಂತ ಅಪಾಯಕಾರಿ ಆದರೆ ಧೈರ್ಯಶಾಲಿ ಪೊಲೀಸ್ ಅಧಿಕಾರಿ, ಅಪಾಯದಲ್ಲಿದ್ದ ನಾಯಿಯನ್ನು ನೋಡಿದ ನಂತರ ಅದರ ರಕ್ಷಿಸುವ ಹೊರತಾಗಿ ಬೇರೆನೂ ಯೋಚಿಸಲಿಲ್ಲ. ಅಲ್ಲದೇ ನಾಯಿಯು ಅದಾಗಿಯೇ ನೀರಿನಿಂದ ಹೊರಬರುವ ಸಾಧ್ಯತೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ನಾಯಿಯ ಜೀವ ಉಳಿಸಿದ ಅಧಿಕಾರಿ ಸ್ಮಿತ್‌ಗೆ ಅಭಿನಂದನೆಗಳು ಎಂದು ನಾಯಿಯ ಮಾಲೀಕರು ಬರೆದ ಪತ್ರದಲ್ಲಿತ್ತು.

MP Renukacharya ಶ್ವಾನಕ್ಕೆ ಸನ್ಮಾನ ಮಾಡಿದ ಬಿಜೆಪಿ ಶಾಸಕ ರೇಣುಕಾಚಾರ್ಯ

ಕಳೆದ ತಿಂಗಳು ಕೂಡ ಇಂತಹದೇ ಘಟನೆಯೊಂದು ನಡೆದಿತ್ತು. ಇಬ್ಬರು ಸ್ಪ್ಯಾನಿಷ್ ಪೊಲೀಸ್ ಅಧಿಕಾರಿಗಳು (Spanish police officers) ಮಂಜುಗಡ್ಡೆಯಾಗುತ್ತಿದ್ದ ನೀರಿನಲ್ಲಿ ಸಿಕ್ಕಿಬಿದ್ದ ನಾಯಿಯನ್ನು ರಕ್ಷಿಸಲು ಹೆಪ್ಪುಗಟ್ಟಿದ ಸರೋವರದಲ್ಲಿ ಇಳಿದು ನಾಯಿಯ ರಕ್ಷಣೆ ಮಾಡಿದ್ದರು. ಪೂರ್ವ ಸ್ಪೇನ್‌ನ (Spain) ಅರಾಗೊನ್‌ (Aragon) ದಲ್ಲಿರುವ ಕ್ಯಾನ್‌ಫ್ರಾಂಕ್‌ನಲ್ಲಿರುವ ಜಲಾಶಯದಲ್ಲಿ ನಾಯಿ ಗಂಟೆಗಳ ಕಾಲ ಸಿಲುಕಿಕೊಂಡಿತ್ತು. ಇದರ ರಕ್ಷಣೆಗೆ ಅಧಿಕಾರಿಯು ಮರದ ಕೋಲನ್ನು ಹಿಡಿದು ಮಂಜುಗಡ್ಡೆಯ ತುಂಡುಗಳ ಮೂಲಕ ಈಜುತ್ತಿರುವುದನ್ನು ವೀಡಿಯೊ ತುಣುಕಿನಲ್ಲಿ ಕಾಣಬಹುದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ