ಮ್ಯಾಚ್‌ ನೋಡಲು ಮೊಸಳೆಯೊಂದಿಗೆ ಸ್ಟೇಡಿಯಂಗೆ ಬಂದ ಅಭಿಮಾನಿ: ದಂಗಾದ ಭದ್ರತಾ ಸಿಬ್ಬಂದಿ

By Suvarna News  |  First Published Oct 2, 2023, 12:54 PM IST

ಇಲ್ಲೊಬ್ಬ ಬೇಸ್‌ಬಾಲ್ ಪ್ರೇಮಿ ಮ್ಯಾಚ್‌ ನೋಡಲು ತಾನು ಮನೆಯಲ್ಲಿ ಸಾಕಿದ್ದ ತನ್ನ ಪ್ರೀತಿಯ ಮೊಸಳೆಯೊಂದಿಗೆ ಸ್ಟೇಡಿಯಂಗೆ ಆಗಮಿಸಿದ್ದು, ಆತನಿಗೆ ಸ್ಟೇಡಿಯಂನ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. 


ಮೊಸಳೆ ಹಾವು ಮುಂತಾದ ಅಪಾಯಕಾರಿ ಪ್ರಾಣಿಗಳನ್ನು ನೋಡಿದಾಗ ನಾವು ಹೆದರಿ ಕಾಲಿಗೆ ಬುದ್ಧಿ ಹೇಳೋದೇ ಜಾಸ್ತಿ. ಆದರೆ ವಿದೇಶದಲ್ಲಿ ಹಾಗಲ್ಲ, ಕೆಲವೊಂದು ದೇಶಗಳಲ್ಲಿ ಕೆಲವು ವಿಚಿತ್ರ ಜನಗಳು, ನಾವು ಮನೆಯಲ್ಲಿ ನಾಯಿ ಬೆಕ್ಕುಗಳನ್ನು ಸಾಕುವಂತೆ ಅವರು ಹಾವು, ಮೊಸಳೆ, ಚಿರತೆ ಮುಂತಾದ ಪ್ರಾಣಿಗಳನ್ನು ಸಾಕುತ್ತಿರುತ್ತಾರೆ. ಆದೇ ರೀತಿ ಇಲ್ಲೊಬ್ಬ ಬೇಸ್‌ಬಾಲ್ ಪ್ರೇಮಿ ಮ್ಯಾಚ್‌ ನೋಡಲು ತಾನು ಮನೆಯಲ್ಲಿ ಸಾಕಿದ್ದ ತನ್ನ ಪ್ರೀತಿಯ ಮೊಸಳೆಯೊಂದಿಗೆ ಸ್ಟೇಡಿಯಂಗೆ ಆಗಮಿಸಿದ್ದು, ಆತನಿಗೆ ಸ್ಟೇಡಿಯಂನ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. 

ಸಾಕುಪ್ರಾಣಿಗಳಾದ ನಾಯಿ ಬೆಕ್ಕುಗಳನ್ನು ಸ್ಟೇಡಿಯಂಗೆ ಕರೆದೊಯ್ಯುವುದನ್ನು ನೀವು ನೋಡಿರಬಹುದು. ಆದರೆ ಮೊಸಳೆಯೊಂದಿಗೆ ಯಾರಾದರೂ ಮ್ಯಾಚ್‌ ನೋಡಲು ಬಂದಿದ್ದನ್ನು ನೋಡಿದ್ದೀರಾ?  ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಅಮೆರಿಕಾದ ವ್ಯಕ್ತಿಯೊಬ್ಬ ಸೆಪ್ಟೆಂಬರ್ 27 ರಂದು  ಫಿಲಿಡೆಲ್ಫಿಯಾದ ಫಿಲ್ಲಿಸ್‌ ಎಂಎಲ್‌ಬಿ ಗೇಮ್‌ಗೆ ತಾನು ಸಾಕಿದ ಪ್ರೀತಿಯ ಮೊಸಳೆಯೊಂದಿಗೆ ಆಗಮಿಸಿದ್ದಾನೆ. ಈತ ಮೊಸಳೆಯೊಂದಿಗೆ ಸ್ಟೇಡಿಯಂನ ಪ್ರವೇಶ ದ್ವಾರದ ಬಳಿ ಆಗಮಿಸಿದ್ದು, ನೋಡಿದ ಭದ್ರತಾ ಸಿಬ್ಬಂದಿಗಳು ಒಂದು ಕ್ಷಣ ದಂಗಾಗಿದ್ದರು. ಜೋಯ್ ಹೆನ್ನಿ ಎಂಬುವವರೇ ಹೀಗೆ ಮೊಸಳೆಯೊಂದಿಗೆ ಸ್ಟೇಡಿಯೋಗೆ ಬಂದ ಬೇಸ್ ಬಾಲ್ ಪ್ರೇಮಿ.

Tap to resize

Latest Videos

ಬಿಟ್ಟು ಹೋಗುತ್ತಿದ್ದ ಒಡೆಯನ ಬೈಕ್ ಏರದಂತೆ ತಡೆದ ಆನೆ: ಭಾವುಕ ವೀಡಿಯೋ ವೈರಲ್‌

ಈತ ಮೊಸಳೆಯನ್ನು ಕರೆದುಕೊಂಡು ಸಿಟಿಜನ್ ಬ್ಯಾಂಕ್‌ ಪಾರ್ಕ್‌ ಬಳಿಗೆ ನಡೆದುಕೊಂಡು ಬಂದಿದ್ದಾನೆ. ಮೊಸಳೆಯೊಂದಿಗೆ ಬಂದ ಈತನನ್ನು ನೋಡಿ ಅನೆಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆತ, ತಾನು ಸಾಕಿದ  ವಾಲಿ ಹೆಸರಿನ ಈ ಮೊಸಳೆ ತನಗೆ ಖಿನ್ನತೆಯಿಂದ ಹೊರಬರಲು ಬಹಳ ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದಾನೆ. ನಾನು ವ್ಯಾಲಿಗೂ ಟಿಕೆಟ್ ಖರೀದಿಸಿದ್ದೆ. ಆದರೆ ಈ ಬಗ್ಗೆ ಪರಿಶೀಲನೆಗೆ ಹೋಗಿರಲಿಲ್ಲ, ಆದರೆ ಅವರು ನಾಯಿ ಕುದುರೆ ಮುಂತಾದ ಸೇವೆ ನೀಡುವ ಪ್ರಾಣಿಗಳನ್ನು ಮಾತ್ರ ಸ್ಟೇಡಿಯಂ ಒಳಗಡೆ ಬಿಡುತ್ತಾರೆ ಎಂದು ಹೇಳಿದರು ಎಂದು ಹೇನ್ರಿ ಹೇಳಿಕೊಂಡಿದ್ದಾರೆ.  

ವಾಲಿ ಭಾವಾನಾತ್ಮಕ ಬೆಂಬಲ ನೀಡುವ ಪ್ರಾಣಿಯಾಗಿದ್ದು, ಸೇವೆ ನೀಡುವ ಪ್ರಾಣಿ ಅಲ್ಲ, ಆದರೆ ಯಾರಿಗೂ ಅದರ ಹಿಂದೆ ಇರುವ ಕತೆ ಗೊತ್ತಿಲ್ಲ. ಅದು ಯಾರಿಗೂ ಹಾನಿ ಮಾಡುದಿಲ್ಲ,  ಅದು ತುಂಬಾ ಒಳ್ಳೆಯ ಪ್ರಾಣಿ ಎಂದು ಅವರು ಹೇಳಿದ್ದಾರೆ. ಇನ್ನು ಮೊಸಳೆಯನ್ನು ಸ್ಟೇಡಿಯಂಗೆ ಕರೆತಂದ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಸ್ಟೇಡಿಯಂ ಹೊರಗೆ ಭದ್ರತಾ ಸಿಬ್ಬಂದಿ ಜೊತೆ ಮೊಸಳೆಯನ್ನು ಕರೆತಂದ ಹೆನ್ನಿ ಮನವಿ ಮಾಡುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Emotional support alligator denied access to the Phillies game pic.twitter.com/Q7DC1qBcDm

— The Philly Captain (@philly_captain)

 

ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರಿಯ... ಕರಿಚಿರತೆಯ ಸುಂದರ ಫೋಟೋಗಳು

ಒಂದು ವರ್ಷವಿದ್ದಾಗ ಈ ವಾಲಿಯನ್ನು ಹೆನ್ನಿ ದತ್ತು ಪಡೆದಿದ್ದರಂತೆ. 

 

 

click me!