ನಿಜ್ಜರ್ ಹತ್ಯೆಯ ಸಾಕ್ಷ್ಯ ಭಾರತಕ್ಕೆ ಕೊಡಲ್ಲ ಕೋರ್ಟಿಗೆ ಕೊಡೇವೆ: ಕೆನಡಾ

By Kannadaprabha News  |  First Published Oct 2, 2023, 9:17 AM IST

ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತ ಸಾಕ್ಷ್ಯವನ್ನು ಜಸ್ಟಿನ್ ಟ್ರುಡೋ ಸರ್ಕಾರ ಕೋರ್ಟಿಗೆ ಸಲ್ಲಿಸುತ್ತದೆಯೇ ವಿನಾ ಭಾರತಕ್ಕೆ ಕೊಡುವುದಿಲ್ಲ. ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯವಿದೆ ಎಂದು ಟ್ರುಡೋ ಅವರ ಆಪ್ತನಾದ ಕೆನಡಾ ಸಂಸದ ಸುಖ್ ಧಲಿವಾಲ್‌ ಹೇಳಿದ್ದಾರೆ.


ಒಟ್ಟಾವಾ (ಕೆನಡಾ): 'ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತ ಸಾಕ್ಷ್ಯವನ್ನು ಜಸ್ಟಿನ್ ಟ್ರುಡೋ ಸರ್ಕಾರ ಕೋರ್ಟಿಗೆ ಸಲ್ಲಿಸುತ್ತದೆಯೇ ವಿನಾ ಭಾರತಕ್ಕೆ ಕೊಡುವುದಿಲ್ಲ. ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯವಿದೆ ಎಂದು ಟ್ರುಡೋ ಅವರ ಆಪ್ತನಾದ ಕೆನಡಾ ಸಂಸದ ಸುಖ್ ಧಲಿವಾಲ್‌ ಹೇಳಿದ್ದಾರೆ.

ಭಾರತದ ಚಾನೆಲ್ಲೊಂದರ ಜತೆ ಮಾತನಾಡಿದ ಅವರು, 'ಟ್ರುಡೋ ಸುಖಾ ಸುಮ್ಮನೆ ಆರೋಪ ಮಾಡುವ ವ್ಯಕ್ತಿಯಲ್ಲ, ಅವರು ನ್ಯಾಯಾಂಗದಲ್ಲಿ ನಂಬಿಕೆ ಹೊಂದಿದವರು. ಹೀಗಾಗಿ ನಮ್ಮ ಬಳಿ ಇರುವ ಸಾಕ್ಷ್ಯ ಕೋ‌ರ್ಟ್‌ಗೆ ಹಂಚಿಕೊಳ್ಳುತ್ತೇವೆ' ಎಂದರು. 'ಭಾರತದ ಕೈವಾಡದ ಬಗ್ಗೆ ಜಿ20 ಶೃಂಗಕ್ಕೆ ಹೋದಾಗಲೇ ಟ್ರುಡೋ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ತಿಳಿಸಿದ್ದರು. ಸ್ವದೇಶಕ್ಕೆ ಮರಳಿದ ನಂತರ ಸಂಸತ್ತಿನಲ್ಲಿ ಅದನ್ನು ಬಹಿರಂಗಪಡಿಸಿದರು ಎಂದು ಧಲಿವಾಲ್ ಸ್ಪಷ್ಟಪಡಿಸಿದರು.

ಒಂದೇ ವರ್ಷದಲ್ಲಿ ಭಾರತಕ್ಕೆ ಬೇಕಾಗಿದ್ದ 17 ಮೋಸ್ಟ್ ವಾಂಟೆಡ್ ಉಗ್ರರ ನಿ ...

Tap to resize

Latest Videos

ಇದೇ ವೇಳೆ, ಹತ್ಯೆಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬ ಆರೋಪಗಳನ್ನು, ಪಾಕ್ ಐಎಸ್‌ಐಗೆ (ISI) ಆಪ್ತರಾಗಿದ್ದಾರೆ ಎನ್ನಲಾದ ಧಲಿ ವಾಲ್ ತಳ್ಳಿಹಾಕಿದರು. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು 5 ದೇಶಗಳ 'ಫೈವ್ ಐ ಒಕ್ಕೂಟ' ಕೂಡ ಸಾಕ್ಷ್ಯ ಸಂಗ್ರಹಿಸಿದೆ ಎಂದು ಅವರು ಹೇಳಿದರು.

ರಾಯಭಾರಿಗೆ ಅಡ್ಡಿ: ಗುರುದ್ವಾರ ಖಂಡನೆ

ಗ್ಲಾಸ್‌ಗೌ (ಇಂಗ್ಲೆಂಡ್): ಸ್ಥಳೀಯ ಗುರುದ್ವಾರಕ್ಕೆ ಭೇಟಿಗಾಗಿ ಆಗಮಿಸಿದ್ದ ಭಾರತೀಯ ರಾಯಭಾರಿ ವಿಕ್ರಂ ದೊರೈಸ್ವಾಮಿ ( Doraiswamy) ಅವರಿಗೆ ಇಬ್ಬರು ಖಲಿಸ್ತಾನಿ ಬೆಂಬಲಿತ ಯುವಕರು ಅಡ್ಡಿಪಡಿಸಿದ ಘಟನೆಯನ್ನು ಅಲ್ಲಿನ ಗುರುದ್ವಾರ ಆಡಳಿತ ಮಂಡಳಿ ಪ್ರಬಲವಾಗಿ ಖಂಡಿಸಿದೆ. ಈ ಕುರಿತು ಇಲ್ಲಿನ ಗುರುದ್ವಾರ ಗುರು ಗ್ರಂಥ ಸಾಹಿಬ್ ಸಿಖ್ ಸಭಾ ಹೇಳಿಕೆ ಬಿಡುಗಡೆಮಾಡಿದೆ. ಇದು ಶಾಂತಿಭಂಗವನ್ನುಂಟು ಮಾಡುವ, ರೋಗಗ್ರಸ್ಥ ವರ್ತನೆಯಾಗಿದೆ. ಮಂದಿರವು ಎಲ್ಲ ಸಮುದಾಯ ಮತ್ತು ಹಿನ್ನೆಲೆಯವರಿಗೂ ಮುಕ್ತವಾಗಿದೆ ಎಂದು ಗುರುದ್ವಾರ ಆಡಳಿತ ಹೇಳಿದೆ.

ಗುಹೆಯೊಂದರಲ್ಲಿ 6 ಸಾವಿರ ವರ್ಷಗಳಷ್ಟು ಹಳೆಯ ಶೂ ಪತ್ತೆ

ಉಗ್ರ ಹಫೀಜ್ ಪುತ್ರ ಕಾಣೆ ಬೆನ್ನಲ್ಲೇ ಸಹಚರ ಫಾರೂಖ್ ನಿಗೂಢ ಹತ್ಯೆ!

ಕರಾಚಿ: 2008ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಉಗ್ರ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ (Hafiz Saeed) ಸಹಚರ ಫಾರೂಖ್‌ನನ್ನು ಅನಾಮಿಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹಫೀಜ್‌ನ ಪುತ್ರ ಕಮಲಾದ್ದೀನ್‌ನನ್ನು ಅನಾಮಿಕರು ಕಾರಿನಲ್ಲಿ ಅಪಹರಣ ಮಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. 

ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬನಾದ ಮುಸ್ಲಿ ಕಾಸಿಯ‌ (30)ಯನ್ನು ಲಾಹೋರ್‌ನಲ್ಲಿ ಅನಾಮಿಕ ವ್ಯಕ್ತಿಗಳು ಹಿಂದಿನಿಂದ ಗುಂಡಿಕ್ಕಿ ಹತ್ಯೆಗೈದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ.  ಕಳೆದ ವಾರವಷ್ಟೇ ಹಫೀಜ್ ಸಯೀದ್‌ನ ಮಗ ಕಮಾಲುದ್ದೀನ್ ಸಯೀದ್‌ನನ್ನು ದುಷ್ಕರ್ಮಿಗಳು ಪೇಶಾವರದಲ್ಲಿ ಅಪಹರಿಸಿದ್ದರು. ಘಟನೆ ನಡೆದು ವಾರ ಕಳೆದರೂ ಆತನ ಪತ್ತೆ ಮಾಡುವಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ವಿಫಲವಾಗಿದೆ. ಅದರ ಬೆನ್ನಲ್ಲೇ ಸಯೀದ್‌ ಆಪ್ತ ಹತ್ಯೆಗೀಡಾಗಿದ್ದಾನೆ.

click me!