ಬ್ರುಸೆಲ್ಸ್(ಜು.11): ಒಬ್ಬರೇ ವ್ಯಕ್ತಿಗೆ ಎರಡು ರೂಪಾಂತರಿ ಕೊರೋನಾ ಸೋಂಕಾದರೆ ಏನಾಗಬಹುದು ? ಇಂಥಹ ಒಂದು ಘಟನೆ ಬೆಲ್ಜಿಯಂನಲ್ಲಿ ನಡೆದಿದ್ದು, ರೋಗಿ ಮೃತಪಟ್ಟಿದ್ದಾರೆ.
ಬೆಲ್ಜಿಯಂನ ಸಂಶೋಧಕರ ಪ್ರಕಾರ ಕೊರೋನವೈರಸ್‌ನಿಂದ ಮೃತಪಟ್ಟ ವೃದ್ಧ ಮಹಿಳೆಯೊಬ್ಬರು ಒಂದೇ ಸಮಯದಲ್ಲಿ ವೈರಸ್‌ನ ಎರಡು ರೂಪಾಂತರಗಳ ಸೋಂಕಿಗೆ ಒಳಗಾಗಿದ್ದರು ಎಂದು ವರದಿಗಳು ತಿಳಿಸಿವೆ. 90 ವರ್ಷದ ಮಹಿಳೆಗೆ COVID-19 ಪಾಸಿಟಿವ್ ಬಂದಿತ್ತು.
undefined
ಏಕಕಾಲದಲ್ಲಿ ಆಲ್ಫಾ ಮತ್ತು ವೈರಸ್‌ನ ಬೀಟಾ ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದರು. ಮೃತರು ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊರೋನವೈರಸ್‌ಗೆ ಧನಾತ್ಮಕ ಪರೀಕ್ಷೆ ದೃಢಪಟ್ಟ ಐದು ದಿನಗಳ ನಂತರ ಸಾವನ್ನಪ್ಪಿದ್ದರು. COVID-19 ಬದುಕುಳಿದವರು ಇನ್ನೂ ಆಲ್ಫಾ ಮತ್ತು ಬೀಟಾ ರೂಪಾಂತರಗಳಿಂದ ಸೋಂಕಿತರಾಗುವ ಅಪಾಯದಲ್ಲಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
ವೇಗವಾಗಿ ಹರಡೋ ರೂಪಾಂತರಿ ಕೊರೋನಾ ಕಪ್ಪ ದೇಶದಲ್ಲಿ ಪತ್ತೆ
ಸಂಶೋಧನೆಯ ನೇತೃತ್ವ ವಹಿಸಿದ್ದ ಒಎಲ್‌ವಿ ಆಸ್ಪತ್ರೆಯ ಆಣ್ವಿಕ ಜೀವಶಾಸ್ತ್ರಜ್ಞ ಅನ್ನಿ ವಂಕೀರ್‌ಬರ್ಗೆನ್, "ಈ ಎರಡೂ ರೂಪಾಂತರಗಳು ಆ ಸಮಯದಲ್ಲಿ ಬೆಲ್ಜಿಯಂನಲ್ಲಿ ಹೆಚ್ಚಾಗಿತ್ತು. ಆದ್ದರಿಂದ ಮಹಿಳೆ ಎರಡು ವಿಭಿನ್ನ ಜನರಿಂದ ವಿಭಿನ್ನ ವೈರಸ್‌ಗಳಿಂದ ಸೋಂಕಿಗೆ ಒಳಗಾಗಿದ್ದರು ಎನ್ನಲಾಗಿದೆ.