ನಿಮಿಷಕ್ಕೆ ಕೋವಿಡ್‌ಗೆ 7 ಜನ, ಆದರೆ ಹಸಿವಿಗೆ 11 ಜನರ ಬಲಿ: ವರದಿ!

By Suvarna News  |  First Published Jul 10, 2021, 4:48 PM IST

* ಜಗತ್ತಲ್ಲಿ ನಿಮಿಷಕ್ಕೆ 11 ಮಂದಿ ಹಸಿವಿನಿಂದ ಸಾವು: ಆಕ್ಸ್‌ಪಾಮ್‌

* ನಿಮಿಷಕ್ಕೆ ಕೋವಿಡ್‌ಗೆ 7 ಜನ, ಆದರೆ ಹಸಿವಿಗೆ 11 ಜನರ ಬಲಿ: ವರದಿ

* ಜಗತ್ತಿನಾದ್ಯಂತ ಬಡತನ, ಕ್ಷಾಮದಂತ ಪರಿಸ್ಥಿತಿಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳ


ಕೈರೋ(ಜು.10):  ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ 11 ಮಂದಿ ಹಸಿವಿನಿಂದ ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಜಗತ್ತಿನಾದ್ಯಂತ ಬಡತನ, ಕ್ಷಾಮದಂತ ಪರಿಸ್ಥಿತಿಗಳನ್ನು ಎದುರಿಸುತ್ತಿರುವವರ ಸಂಖ್ಯೆ ಕಳೆದ ವರ್ಷಕ್ಕಿಂತ 6 ಪಟ್ಟು ಹೆಚ್ಚಾಗಿದೆ ಎಂದು ಆಕ್ಸ್‌ಫಾಮ್‌ ಸಂಸ್ಥೆಯ ವರದಿ ಹೇಳಿದೆ.

ಕೋವಿಡ್‌ನಿಂದ ಪ್ರತಿ ನಿಮಿಷಕ್ಕೆ 7 ಮಂದಿ ಸಾವಿಗೀಡಾಗುತ್ತಿದ್ದಾರೆ. ಆದರೆ ಹಸಿವಿನಿಂದ ಸಾವಿನ ಕದ ತಟ್ಟುತ್ತಿರುವವರ ಸಂಖ್ಯೆ ಅದಕ್ಕಿಂತ ಹೆಚ್ಚು. ಇದು ಬಹಳ ಆತಂಕಕಾರಿ ಎಂದು ವರದಿಯಲ್ಲಿ ತಿಳಿಸಿದೆ. ಆಫ್ಘಾನಿಸ್ತಾನ, ದಕ್ಷಿಣ ಸೂಡಾನ್‌, ಸಿರಿಯಾ, ಯೆಮನ್‌ ದೇಶಗಳಲ್ಲಿ ಹಸಿವಿನಿಂದ ಅತಿ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ.

Latest Videos

undefined

ದೇಸಿ ಶ್ವಾನಗಳಿಗೆ ಅಧಿಕೃತ ಸಾಕುಪ್ರಾಣಿ ಪಟ್ಟ.. ಕೇಂದ್ರದ ಹೊಸ ಯೋಜನೆ

ಜಗತ್ತಿನಾದ್ಯಂತ ಸದ್ಯ 15.5 ಕೋಟಿ ಜನರು ಆಹಾರದ ಅಭದ್ರತೆ ಅನುಭವಿಸುತ್ತಿದ್ದಾರೆ. ಇದರಲ್ಲಿ ಮೂರನೇ 2ರಷ್ಟುಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ಆ ದೇಶಗಳು ಆಹಾರ ಭದ್ರತೆಗಿಂತ ಜಾಸ್ತಿ ರಕ್ಷಣೆಗೆ ವೆಚ್ಚ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದೆ.

click me!