ಪಾಕಿಸ್ತಾನದಲ್ಲಿ ಎಂಟು ವರ್ಷದ ಬಾಲಕನೊಬ್ಬ ಟೊಯೊಟಾ ಫಾರ್ಚುನರ್ ಎಸ್‌ಯುವಿ (Toyota Fortuner SUV) ಓಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕ ತನ್ನ 10 ವರ್ಷದ ಸಹೋದರಿಯೊಂದಿಗೆ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾನೆ. ವೀಡಿಯೋದಲ್ಲಿ ಹುಡುಗಿ ತನ್ನನ್ನು ಮತ್ತು ತನ್ನ ಸಹೋದರನನ್ನು ಪರಿಚಯಿಸಿಕೊಳ್ಳುತ್ತಾಳೆ. ಅವರು ತಮ್ಮ ಹಳ್ಳಿಗೆ ಬಂದಿದ್ದು, ತನ್ನ ಎಂಟು ವರ್ಷ ವಯಸ್ಸಿನ ಸಹೋದರ ಹೇಗೆ ಸುಲಭವಾಗಿ ಕಾರನ್ನು ಓಡಿಸುತ್ತಾನೆ ಎಂಬುದನ್ನು ತೋರಿಸುತ್ತೇನೆ ಎಂದು ಬಾಲಕಿ ಹೇಳುತ್ತಾಳೆ.
'Ayan and Areeba Show' ಹೆಸರಿನ YouTube ಚಾನಲ್ ಮೂರು ವಾರಗಳ ಹಿಂದೆ ವೀಡಿಯೊವನ್ನು ಹಂಚಿಕೊಂಡಿದೆ. 8 ವರ್ಷದ ಮಗು ಟೊಯೋಟಾ ಫಾರ್ಚುನರ್ ಅನ್ನು ಹೇಗೆ ಓಡಿಸಬಹುದು ಎಂಬುದನ್ನು ನಾವು ಇಂದು ನಿಮಗೆ ತೋರಿಸುತ್ತೇವೆ. ಅಯಾನ್ ವಾಹನ ಚಲಾಯಿಸುವುದನ್ನು ನೋಡಿದ ಯಾರೇ ಆದರೂ ಶಾಕ್ ಆಗುತ್ತಾರೆ. ವಿಡಿಯೋ ವೈರಲ್ ಆಗಿದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ವೀಡಿಯೊವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ಕೆಲವು ಬಳಕೆದಾರರು ಹುಡುಗನ ಚಾಲನಾ ಕೌಶಲ್ಯವನ್ನು ಹೊಗಳಿದರೆ ಮತ್ತೂ ಕೆಲವರು ಟೀಕೆ ಮಾಡಿದ್ದಾರೆ. ಕೆಲವರು ಮಶಾಲ್ಲಾಹ್ ಎಂದು ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ಇದು ಭಾರತದಲ್ಲಾಗಿದ್ದರೆ (India) ಮಗುವಿನ (kid) ತಂದೆ (father) ಇಷ್ಟೊತ್ತಿಗಾಗಲೇ ಅರೆಸ್ಟ್ ಆಗುತ್ತಿದ್ದರು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಒಂದೇ ಸೈಕಲ್ ಅನ್ನು ಒಟ್ಟಿಗೆ ತುಳಿಯುವ ಬಾಲಕರು : ವಿಡಿಯೋ ವೈರಲ್
ನೀಲಿ ಬಣ್ಣದ ‘ಪಠಾಣಿ’ ಬಟ್ಟೆ ಧರಿಸಿದ ಅಯಾನ್ (Ayan), ಎಸ್‌ಯುವಿಯ (SUV) ಬಾಗಿಲು ತೆರೆದು ಇತರ ಕೆಲವು ವಾಹನಗಳೊಂದಿಗೆ ರಸ್ತೆಯಲ್ಲಿ ತನ್ನ ವಾಹನವನ್ನು ಓಡಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. 8 ವರ್ಷದ ಬಾಲಕ ಈತನಾಗಿರುವುದುರಿಂದ ಆತನ ಎತ್ತರಕ್ಕೆ ಬ್ರೇಕ್, ಆಕ್ಸೆಲೇಟರ್ ಎಲ್ಲವೂ ಸಿಗುವ ಸಲುವಾಗಿ ಆತ ಸೀಟಿನ ತುದಿಯಲ್ಲಿ ಕುಳಿತಿರುವುದು ಕಂಡುಬರುತ್ತದೆ, ಇದರಿಂದ ಅವನು ಗ್ಯಾಸ್ ಮತ್ತು ಬ್ರೇಕ್ ಪೆಡಲ್‌ಗಳನ್ನು ತಲುಪಬಹುದಾಗಿದೆ.
ದುಬೈನಲ್ಲಿ ಆಫ್ ರೋಡ್ ಡ್ರೈವಿಂಗ್ - ಹೇಗಿತ್ತು ಸಲ್ಮಾನ್ ಖಾನ್ ಸಾಹಸ?
ಮುಖದ ಮೇಲೆ ನಗು ತುಂಬಿರುವ ಈ ಬಾಲಕ ಕಾರನ್ನು ಓಡಿಸುತ್ತಿದ್ದು ಚಾಲನಾ ಕೌಶಲ್ಯದಲ್ಲಿ ಆತ ಹೆಚ್ಚಿನ ವಿಶ್ವಾಸವನ್ನು ಹೊಂದಿದ್ದಾನೆ ಎಂಬುದನ್ನು ಆತನ ಚಾಲನೆಯೇ ತೋರಿಸುತ್ತಿದೆ. ಅಲ್ಲದೇ ಆರು ವರ್ಷದಿಂದಲೂ ತಾನು ವಾಹನ ಚಾಲನೆ ಮಾಡುತ್ತಿದ್ದೆ ಎಂದು ಬಾಲಕ ಹೇಳಿದ್ದಾನೆ. ಪಾಕಿಸ್ತಾನದಲ್ಲೂ (Pakistan) ವಾಹನ ಚಾಲನೆಗೆ ವಯಸ್ಸಿನ ನಿರ್ಬಂಧಗಳಿವೆ. ಎರಡೂ ದೇಶಗಳು 18 ವರ್ಷ ವಯಸ್ಸಿನವರಿಗೆ ಮಾತ್ರ ಶಾಶ್ವತ ಚಾಲನಾ ಪರವಾನಗಿಯನ್ನು (permanent driving licence)ನೀಡುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ