ರಷ್ಯಾ ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ. ರಷ್ಯಾ ಆಕ್ರಮಣದಿಂದ ಪುಟ್ಟ ರಾಷ್ಟ್ರ ಉಕ್ರೇನ್ ಸಂಪೂರ್ಣ ಸ್ಮಶಾನದಂತಾಗಿದೆ. ಈ ಮಧ್ಯೆ ಜಗತ್ತೇ ಬೆಚ್ಚಿ ಬೀಳುವಂತಹ ವಿಚಾರವೊಂದು ಉಕ್ರೇನ್‌ನಿಂದ ವರದಿಯಾಗಿದೆ. ಯುದ್ಧದ ವೇಳೆ ಸೆರೆ ಸಿಕ್ಕಿ ಉಕ್ರೇನ್ ಮಹಿಳೆಯರ ಮೇಲೆ ರಷ್ಯಾ ಪಡೆಗಳು ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಲಾಗಿದೆ ಎಂಬ ಭಯಾನಕ ವಿಚಾರ ತಿಳಿದು ಬಂದಿದೆ. ಹತ್ಯೆಗೊಳಗಾದ ಮಹಿಳೆಯರ ಮರಣೋತ್ತರ ಪರೀಕ್ಷೆಯ ವೇಳೆ ಈ ವಿಚಾರ ಬಹಿರಂಗವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅತ್ಯಾಚಾರವೆಸಗಿದ್ದಕ್ಕೆ ಪುರಾವೆಗಳು ಲಭ್ಯವಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಉಕ್ರೇನ್‌ನ ಕೈವ್‌ನಲ್ಲಿನ ಸಾಮೂಹಿಕ ಶವ ಸಂಸ್ಕಾರಕ್ಕೂ ಮೊದಲು ನಡೆಸಿದ ಶವಗಳ ಮರಣೋತ್ತರ ಪರೀಕ್ಷೆ ವೇಳೆ ಕೆಲವು ಉಕ್ರೇನಿಯನ್ ಮಹಿಳೆಯರನ್ನು ಕೊಲ್ಲುವ ಮೊದಲು ಅವರ ಮೇಲೆ ರಷ್ಯಾದ ಪಡೆಗಳು ಅತ್ಯಾಚಾರವೆಸಗಿವೆ ಎಂದು ಬಹಿರಂಗಪಡಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
Russia Ukraine War: ಉಕ್ರೇನ್ ಹತ್ಯಾಕಾಂಡದ ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹ
ಈ ಮಹಿಳೆಯರನ್ನು ಗುಂಡಿಕ್ಕಿ ಕೊಲ್ಲುವ ಮೊದಲು ಅತ್ಯಾಚಾರವೆಸಗಲಾಗಿದೆ ಎಂದು ಸೂಚಿಸುವ ಕೆಲವು ಲಕ್ಷಣಗಳು ಕಂಡು ಬಂದಿವೆ ಎಂದು ಉಕ್ರೇನಿಯನ್ ಫೋರೆನ್ಸಿಕ್ ವೈದ್ಯ ವ್ಲಾಡಿಸ್ಲಾವ್ ಪೆರೋವ್ಸ್ಕಿ (Vladyslav Perovskyi) ಹೇಳಿದ್ದಾರೆ. ಇವರು ತಮ್ಮ ತಂಡದೊಂದಿಗೆ ಹನ್ನೆರಡು ದೇಹಗಳ ಶವಪರೀಕ್ಷೆಗಳನ್ನು ನಡೆಸಿದ್ದಾರೆ ಎಂದು ದಿ ಗಾರ್ಡಿಯನ್‌ಗೆ ತಿಳಿಸಿದ್ದಾರೆ.
ನನ್ನ ಸಹೋದ್ಯೋಗಿಗಳು ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿರುವುದರಿಂದ ನಾವು ಹೆಚ್ಚಿನ ವಿವರಗಳನ್ನು ಈಗಲೇ ನೀಡಲು ಸಾಧ್ಯವಿಲ್ಲ ಮತ್ತು ನಾವು ಇನ್ನೂ ನೂರಾರು ದೇಹಗಳನ್ನು ಪರೀಕ್ಷಿಸಲು ಸಿದ್ದರಾಗಿದ್ದೇವೆ ಎಂದು ಅವರು ಹೇಳಿದರು. ಕೈವ್ ಪ್ರದೇಶದ ಹಿರಿಯ ಪ್ರಾಸಿಕ್ಯೂಟರ್ ಒಲೆಹ್ ಟ್ಕಲೆಂಕೊ (Oleh Tkalenko), ಆಪಾದಿತ ಅತ್ಯಾಚಾರದ ವಿವರಗಳನ್ನು ತಮ್ಮ ಕಚೇರಿಗೆ ನೀಡಲಾಗಿದೆ. ಘಟನೆ ನಡೆದ ಸ್ಥಳಗಳು ಮತ್ತು ಅತ್ಯಾಚಾರಕ್ಕೊಳಗಾದ ಬಲಿಪಶುಗಳ ವಯಸ್ಸು ಮುಂತಾದ ವಿಚಾರಗಳ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ಹೇಳಿದರು.
Russia Ukraine war ಉಕ್ರೇನ್ ನಲ್ಲಿ ನಾಯಿಗಳನ್ನು ತಿಂದು ಬದುಕುತ್ತಿರುವ ರಷ್ಯಾ ಸೈನಿಕರು!
ಅತ್ಯಾಚಾರ ಪ್ರಕರಣಗಳು ಬಹಳ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ವಿಷಯವಾಗಿದೆ. ಫೋರೆನ್ಸಿಕ್ ವೈದ್ಯರು ಅತ್ಯಾಚಾರ ಸಂತ್ರಸ್ತ ಸ್ತ್ರೀ ಯರ ಜನನಾಂಗಗಳನ್ನು ಪರೀಕ್ಷಿಸುವ ಮತ್ತು ಅತ್ಯಾಚಾರದ ಚಿಹ್ನೆಗಳನ್ನು ಹುಡುಕುವ ನಿರ್ದಿಷ್ಟ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಪ್ರಾಸಿಕ್ಯೂಟರ್ ಒಲೆಹ್ ಟ್ಕಲೆಂಕೊ ಸುದ್ದಿ ಪೋರ್ಟಲ್‌ಗೆ ತಿಳಿಸಿದರು.
ಕೆಲವು ದೇಹಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಚಿಹ್ನೆಗಳನ್ನು ಕಂಡುಹಿಡಿಯುವುದು ಸುಲಭವಲ್ಲ. ಆದರೆ ಕೊಲೆಯಾಗುವ ಮೊದಲು ಅತ್ಯಾಚಾರವೆಸಗಲಾಗಿದೆ ಎಂದು ನಾವು ನಂಬಿರುವ ಕೆಲವು ಮಹಿಳೆಯರ ಪ್ರಕರಣಗಳಲ್ಲಿ ಪುರಾವೆಗಳನ್ನು ನಾವು ಸಂಗ್ರಹಿಸುತ್ತಿದ್ದೇವೆ ಎಂದು ಉತ್ತರ ಕೈವ್‌ನಲ್ಲಿ ಕೆಲಸ ಮಾಡುವ ವಿದೇಶಿ ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧ ಆರಂಭವಾಗಿ ಎರಡು ತಿಂಗಳೇ ಕಳೆದಿದೆ. ಈ ಯುದ್ಧಕ್ಕೆ ಹಲವು ಅಮಾಯಕ ಜೀವಗಳು ಬಲಿಯಾಗಿದೆ. ಹಲವರು ಉಕ್ರೇನ್ ತೊರೆದು ನಿರಾಶ್ರಿತರಾಗಿದ್ದಾರೆ. ಇದರ ನಡುವೆ ಉಕ್ರೇನ್‌ನಲ್ಲಿ ನಡೆದಿರುವ ಕೆಲ ಘಟನೆಗಳು ಎಂತವರನ್ನು ಒಂದು ಕ್ಷಣ ಬೆಚ್ಚಿ ಬೀಳಿಸುತ್ತದೆ. ಇಂತಹ ಘಟನೆಗಳ ಪೈಕಿ ಉಕ್ರೇನ್ ಮಹಿಳೆ ತನಗಾದ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಅತ್ತ ಪತಿಯನ್ನು ಗುಂಡಿಕ್ಕಿ ಕೊಂದ ರಷ್ಯಾ ಸೈನಿಕರು, ತನ್ನ ಮೇಲೆ ಮಗನ ಎದುರೇ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ತನ್ನ ಅಸಹಾಯಕ ಪರಿಸ್ಥಿತಿಯನ್ನು ವಿವರಿಸಿದ್ದರು.
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ನಾಝಿ ಸಮುದಾಯಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ರಷ್ಯಾ ಸೈನಿಕರು ನಾಝಿಗಳು ಹೆಚ್ಚಿರುವ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದ್ದಾರೆ. ಇತ್ತ ನಾಝಿಗಳನ್ನು ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಹೀಗೆ ಹುಡುಕಾಟದಲ್ಲಿ ಮನೆಯಲ್ಲಿ ಪತ್ನಿ, ಪುತ್ರನೊಂದಿಗಿದ್ದ ನಾಝಿ ವ್ಯಕ್ತಿಯನ್ನು ರಷ್ಯಾ ಪತ್ತೆ ಹಚ್ಚಿ ಕೊಂದಿದೆ.