
ಜಿನೆವಾ(ಜೂ,02): ಜಿನೆವಾ: ಮೇ 13ರಿಂದ ಜೂ.2ರವರೆಗೆ ಪ್ರಪಂಚದಾದ್ಯಂತ 27 ದೇಶಗಳಿಂದ 780 ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ. ಬಹುತೇಕ ಸೋಂಕುಗಳು ಮಂಕಿಪಾಕ್ಸ್ ಎಂಡೆಮಿಕ್ ಆಗಿಲ್ಲದ 4 ವಲಯಗಳಲ್ಲಿ ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ಇಲ್ಲಿಯವರೆಗೆ ಸೋಂಕು ಹೆಚ್ಚಾಗಿ ಲೈಂಗಿಕ ಆರೋಗ್ಯ ಮತ್ತು ಇತರ ಆರೋಗ್ಯ ಸೇವೆಯ ಮೂಲಕ ಹಬ್ಬಿದೆ. ಸೋಂಕು ಹೆಚ್ಚಳದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಆರೋಗ್ಯ ಕೇಂದ್ರಗಳ ಪಾತ್ರ ಹೆಚ್ಚಿದೆ. ಅಲ್ಲದೇ ಸಲಿಂಗಿಗಳಲ್ಲಿ ಸೋಂಕಿನ ಪ್ರಮಾಣ ಹೆಚಾಗಿದೆ. ಸೋಂಕಿನ ಕುರಿತಾಗಿ ಸಾಂಕ್ರಾಮಿಕ ರೋಗ ತಜ್ಞರು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.
Norovirus ಕೋವಿಡ್ ನಡುವೆ ಭಾರತಕ್ಕೆ ನೊರೋವೈರಸ್ ಆತಂಕ, ಕೇರಳದಲ್ಲಿ 2 ಪ್ರಕರಣ ಪತ್ತೆ!
ಮಂಕಿಪಾಕ್ಸ್‌ನ್ನು ಎಂಡೆಮಿಕ್ ಎಂದು ಗುರುತಿಸಲಾಗಿರುವ ದೇಶಗಳಲ್ಲಿ ಒಂದೇ ಒಂದು ಸೋಂಕು ಕಂಡುಬಂದರೂ ಅದನ್ನು ಸೋಂಕು ಸ್ಫೋಟ ಎಂದು ಗುರುತಿಸಲಾಗುತ್ತದೆ. ಈ ದೇಶಗಳಿಂದ ಬಂದವರಲ್ಲಿ ಹೆಚ್ಚಿನ ಸೋಂಕು ಕಂಡುಬಂದಿಲ್ಲ. ಆದರೆ ನೈಜೀರಿಯಾದಿಂದ ಬಂದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಕ್ಯಾಮರೂನ್, ಕೇಂದ್ರ ಆಫ್ರಿಕಾ, ಕಾಂಗೋ, ಗಾಬನ್, ಘಾನಾ, ಲಿಬಿಯಾ, ನೈಜೀರಿಯಾ, ಬೆನಿನ್ ಮತ್ತು ದಕ್ಷಿಣ ಸೂಡಾನ್‌ಗಳನ್ನು ಮಂಕಿಪಾಕ್ಸ್ ಎಂಡೆಮಿಕ್ ದೇಶಗಳು ಎಂದು ಗುರುತಿಸಲಾಗಿದೆ.
ಮಂಕಿಪಾಕ್ಸ್ ಸೋಂಕಿತರಿಗೆ ಹಾಸಿಗೆ ಮೀಸಲು
ವಿಶ್ವದ ಹಲವೆಡೆ ಮಂಕಿಪಾಕ್ಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಬೇಕು, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಮಗ್ರ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಹೊರಡಿಸಿದೆ.
ಸೋಮವಾರ ಈ ಕುರಿತು ಸುತ್ತೋಲೆ ಹೊರಡಿಸಿರುವ ಇಲಾಖೆ, ಹಲವಾರು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ರಾಜ್ಯದಲ್ಲಿ ಕಣ್ಗಾವಲು ಚಟುವಟಿಕೆಗಳನ್ನು ತೀವ್ರಗೊಳಿಸಿ ಶಂಕಿತ ಪ್ರಕರಣಗಳು ವರದಿಯಾದಲ್ಲಿ ಹಲವಾರು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಯಾವುದೇ ಶಂಕಿತ ಪ್ರಕರಣಗಳು ವರದಿಯಾದಾಗ ಪ್ರತ್ಯೇಕಿಸಿ ಚಿಕಿತ್ಸೆ ನೀಡುವ ಸಲುವಾಗಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 2 ಹಾಸಿಗೆಗಳನ್ನು ಮೀಸಲಿಡುವಂತೆ ಎಲ್ಲಾ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಿಳಿಸಲಾಗಿದೆ.
ಮಂಕಿಪಾಕ್ಸ್ v/s ಚಿಕನ್ ಪಾಕ್ಸ್: ಎರಡೂ ಸೋಂಕಿನ ಮಧ್ಯೆ ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ ?
ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡದ ಜಿಲ್ಲಾ ಶಸ್ತ್ರಚಿಕಿತ್ಸಕರು ಸರ್ವೇಕ್ಷಣವನ್ನು ಒಂದು ಭಾಗವಾಗಿ ವಿಮಾನ ನಿಲ್ದಾಣ ಆರೋಗ್ಯಾಧಿಕಾರಿಯೊಂದಿಗೆ (ಎಪಿಎಚ್‌ಸಿ) ಸಮನ್ವಯ ಸಾಧಿಸಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲು ಸೂಚಿಸಲಾಗಿದೆ. ಶಂಕಿತ ಪ್ರಕರಣಗಳು ವರದಿಯಾದಲ್ಲಿ ಬೆಂಗಳೂರಿನ ಪ್ರತ್ಯೇಕ ಸಾಂಕ್ರಾಮಿಕ ರೋಗ ಆಸ್ಪತ್ರೆ, ಇಂದಿರಾನಗರ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
ಶಂಕಿತ ಪ್ರಕರಣಗಳಿಂದ ಮಾದರಿಗಳನ್ನು ಸಂಗ್ರಹಿಸಿ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಪುಣೆ ಇಲ್ಲಿಗೆ ನೇರವಾಗಿ ಅಥವಾ ಬೆಂಗಳೂರಿನ ಎನ್‌ಐವಿ ಮೂಲಕ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ಈ ಸಂಬಂಧ ಐಡಿಎಸ್‌ಪಿ ಯೋಜನಾ ನಿರ್ದೇಶಕ ಡಾ.ಎನ್. ಶ್ರೀನಿವಾಸ್ ಅವರನ್ನು ರಾಜ್ಯಮಟ್ಟದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ