ಬ್ರೆಜಿಲ್‌ನಲ್ಲಿ ಫೂಲ್ ಗೇಮ್‌ನಲ್ಲಿ ಸೋತಿದ್ದಕ್ಕೆ ಆತನನ್ನು ನೋಡಿ ನಕ್ಕರೂ ಎಂದು ಸಿಟ್ಟಿಗೆದ್ದ ವ್ಯಕ್ತಿಯೊರ್ವ ಬಂದೂಕಿನಿಂದ ಗುಂಡಿಕ್ಕಿ ಕೆಲವು ಸೆಕೆಂಡುಗಳಲ್ಲಿ 7 ಜನರನ್ನು ಹತ್ಯೆ ಮಾಡಿದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದ್ದು, ಈ ಆಘಾತಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಫೂಲ್ ಗೇಮ್‌ನಲ್ಲಿ ಸೋತಿದ್ದಕ್ಕೆ ಆತನನ್ನು ನೋಡಿ ನಕ್ಕರೂ ಎಂದು ಸಿಟ್ಟಿಗೆದ್ದ ವ್ಯಕ್ತಿಯೊರ್ವ ಬಂದೂಕಿನಿಂದ ಗುಂಡಿಕ್ಕಿ ಕೆಲವು ಸೆಕೆಂಡುಗಳಲ್ಲಿ 7 ಜನರನ್ನು ಹತ್ಯೆ ಮಾಡಿದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದ್ದು, ಈ ಆಘಾತಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ರೆಜಿಲ್‌ನ ಪೂಲ್ ಹಾಲ್‌ನಲ್ಲಿ ಇಬ್ಬರು ಬಂದೂಕುಧಾರಿಗಳು ನಡೆಸಿದ ಈ ಗುಂಡಿನ ದಾಳಿಗೆ ಏಳು ಮಂದಿ ಬಲಿಯಾಗಿದ್ದಾರೆ. ಮೃತರಲ್ಲಿ 12 ವರ್ಷದ ಬಾಲಕಿಯೂ ಸೇರಿದ್ದಾಳೆ. ಆಟದಲ್ಲಿ ಸೋತ ಆರೋಪಿಗಳಿಬ್ಬರನ್ನು ನೋಡಿ ನಕ್ಕಿದ್ದಕ್ಕೆ ಈ ಭಯಾನಕ ಹತ್ಯೆ ನಡೆದಿದೆ. ಬ್ರೆಜಿಲ್‌ನ ಮ್ಯಾಟೊ ಗ್ರೊಸೊ (Mato Grosso) ರಾಜ್ಯದ ಸಿನೊಪ್ ಸಿಟಿಯಲ್ಲಿ (Sinop City) ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಹೀಗೆ ಕೇವಲ ನಕ್ಕಿದ್ದಕ್ಕೆ 7 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮುಂಗೋಪಿಗಳನ್ನು ಎಡ್ಗರ್ ರಿಕಾರ್ಡೊ ಡಿ ಒಲಿವೇರಾ (Edgar Ricardo de Oliveira) ಮತ್ತು ಎಜೆಕ್ವಿಯಾಸ್ ಸೌಜಾ ರಿಬೇರೊ (Ezequias Souza Ribeiro) ಎಂದು ಗುರುತಿಸಲಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಭಯಾನಕ ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಬೀದಿನಾಯಿಗಳ ದಾಳಿಗೆ 5 ವರ್ಷದ ಬಾಲಕ ಬಲಿ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಆರೋಪಿಗಳಲ್ಲಿ ಓರ್ವನಾದ ಎಡ್ಗರ್ ರಿಕಾರ್ಡೊ ಡಿ ಒಲಿವೇರಾ ಈ ಪೂಲ್ ಗೇಮ್‌ನಲ್ಲಿ ತಾನು ನಂತರ ಹತ್ಯೆ ಮಾಡಿದ ಓರ್ವ ವ್ಯಕ್ತಿಯ ವಿರುದ್ಧ ಸೋತು 4 ಸಾವಿರ ರಿಯಾಸ್ ಕಳೆದುಕೊಂಡಿದ್ದ, ಅಲ್ಲದೇ ಎರಡನೇ ಬಾರಿಗೆ ಕೂಡ ಸವಾಲು ಹಾಕಿ ಎರಡನೇ ಬಾರಿಯೂ ಸೋತಿದ್ದ. ಎರಡನೇ ಬಾರಿ ಆತ ಸೋತಾಗ ಅಲ್ಲಿದ್ದ ಜನರು ನಗಲು ಶುರು ಮಾಡಿದ್ದಾರೆ. ಇದು ಒಲಿವೇರಾನನ್ನು ಕೆರಳಿಸಿದೆ. ಕೂಡಲೇ ಆತ ಪಿಕಪ್ ಟ್ರಕ್‌ನಿಂದ ಶಾಟ್‌ಗನ್ ತೆಗೆದು ಇಜೆಕ್ವಿಯಾಸ್ (Ezequias) ಸೇರಿದಂತೆ ಅಲ್ಲಿದ್ದ ಏಳು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
30 ವರ್ಷದ ಒಲಿವೇರಾ ಪೂಲ್ ಮಾಲೀಕನೂ ಸೇರಿದಂತೆ 7 ಜನರನ್ನು ಹತ್ಯೆ ಮಾಡಿದ್ದಾನೆ. ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೊಬ್ಬ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಈ ಸಂಪೂರ್ಣ ಘಟನೆ ಹಾಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಪೊಲೀಸರು ಈ ದುರಂತದಲ್ಲಿ ಬಲಿಯಾದವರ ಹೆಸರುಗಳನ್ನು ಬಿಡುಗಡೆ ಮಾಡಿದ್ದು, ಅವರನ್ನು ಲಾರಿಸ್ಸಾ ಫ್ರಸಾವೊ ಡಿ ಅಲ್ಮೇಡಾ, ಒರಿಸ್ಬರ್ಟೊ ಪೆರೇರಾ ಸೌಸಾ, ಆಡ್ರಿಯಾನೊ ಬಾಲ್ಬಿನೋಟ್, ಗೆಟುಲಿಯೊ ರೋಡ್ರಿಗಸ್ ಫ್ರಾಸಾವೊ ಜೂನಿಯರ್, ಜೋಸ್ಯು ರಾಮೋಸ್ ಟೆನೊರಿಯೊ ಮತ್ತು ಪೂಲ್ ಹಾಲ್ ಮಾಲೀಕ ಮಾಸಿಯೆಲ್ ಬ್ರೂನೋ ಡಿ ಆಂಡ್ರೇಡ್ ಕೋಸ್ಟಾ ಹಾಗೂ ಎಲಿಜಿಯು ಸ್ಯಾಂಟೋಸ್ ಡಾ ಸಿಲ್ವಾ ಎಂದು ಗುರುತಿಸಲಾಗಿದೆ.
ಒಟ್ಟಿನಲ್ಲಿ ಸೋತವರನ್ನು ನೋಡಿ ಬಿದ್ದವರನ್ನು ನೋಡಿ ಎಂದು ನಗಲು ಹೋಗಬಾರದು ಅವರ ಸೇಡು ಯಾವ ಪ್ರಮಾಣದಲ್ಲಿರುತ್ತದೆ ಎಂದು ಹೇಳಲಾಗದು ಇದಕ್ಕೆ ಮಹಾಭಾರತದ ಕತೆಯೇ ಸಾಕ್ಷಿ. ಇಂದ್ರಪ್ರಸ್ಥದ ಮಾಯಾನಗರಿಯಲ್ಲಿ ಎಡವಿ ಬಿದ್ದ ಧುರ್ಯೋಧನನನ್ನು ನೋಡಿ ಅಪ್ಪ ಕುರುಡ ಮಗನೂ ಕುರುಡನೇ ಎಂದು ದ್ರೌಪದಿ ಕುಹಕವಾಡುತ್ತಾಳೆ. ಮುಂದೆ ಇದೇ ದ್ರೌಪದಿಯ ಘೋರ ಅವಮಾನಕ್ಕೆ ಮಹಾಭಾರತ ಯುದ್ಧಕ್ಕೆ ಸರ್ವನಾಶಕ್ಕೆ ನಾಂದಿ ಹಾಡುತ್ತದೆ.
ಹಂದಿ ಮಾಂಸ ವಿಚಾರಕ್ಕೆ ಕತ್ತಿಯಿಂದ ವ್ಯಕ್ತಿ ಮೇಲೆ ಹಲ್ಲೆ: ಸಿಸಿ ಕ್ಯಾಮೆರಾದಲ್ಲಿ ಸೆರೆ