
ಲಂಡನ್/ಢಾಕಾ (ಜು.03): ಬ್ರಿಟನ್‌ನಲ್ಲಿ 3ನೇ ಅಲೆಯ ಭೀತಿಯ ಮಧ್ಯೆಯೇ ಕೊರೋನಾ ವೈರಸ್‌ನ ಡೆಲ್ಟಾ ಕೇಸ್‌ಗಳು ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಕಳೆದ ಒಂದು ವಾರದಲ್ಲಿ ಬ್ರಿಟನ್‌ನಲ್ಲಿ 50,824 ಡೆಲ್ಟಾಕೊರೋನಾ ಪ್ರಕರಣಗಳು ದಾಖಲಾಗಿವೆ.
ಇದೇ ವೇಳೆ, ಭಾರತ ಪಕ್ಕದ ಬಾಂಗ್ಲಾದೇಶದಲ್ಲಿ ಕೊರೋನಾ ವೈರಸ್‌ನ ಡೆಲ್ಟಾಪ್ರಭೇದ ತನ್ನ ಅಟ್ಟಹಾಸ ಮೆರೆಯುತ್ತಿದೆ. ಶುಕ್ರವಾರ ಬಾಂಗ್ಲಾದಲ್ಲಿ ಒಂದೇ ದಿನ 8,301 ಕೇಸು ಪತ್ತೆ ಆಗಿದ್ದು 143 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಸಾವು ಇದುವರೆಗಿನ ಗರಿಷ್ಠ ಎನಿಸಿಕೊಂಡಿದೆ. ಬಾಂಗ್ಲಾದಲ್ಲಿ ಜು.1ರಿಂದಲೇ ಲಾಕ್‌ಡೌನ್ ವಿಧಿಸಲಾಗಿದೆ.
ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಘೆಬ್ರೇಯೇಸಸ್ ಶುಕ್ರವಾರ ಮಾತನಾಡಿ, ‘ಡೆಲ್ಟಾಈಗ ವಿಶ್ವದ 100 ದೇಶಗಳಲ್ಲಿ ಹರಡಿದೆ. ಇದರಿಂದ ವಿಶ್ವ ಅಪಾಯದ ಅವಧಿಯಲ್ಲಿ ಸಾಗುತ್ತಿದೆ’ ಎಂದಿದ್ದಾರೆ.
ಡೆಲ್ಟಾ ವೈರಸ್‌ನಿಂದ ಬ್ರಿಟನ್‌ನಲ್ಲಿ 3ನೇ ಅಲೆ!
ಬ್ರಿಟನ್‌ನಲ್ಲಿ ಆಸ್ಪತ್ರೆ ದಾಖಲು ಕಡಿಮೆ: ಕಳೆದ ವಾರಕ್ಕೆ ಹೋಲಿಸಿದರೆ ಬ್ರಿಟನ್‌ನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಶೇ.46ರಷ್ಟುಏರಿಕೆ ಕಂಡಿದೆ. ಆದರೆ ಇಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗಿದ್ದರೂ ಆಸ್ಪತ್ರೆಗೆ ದಾಖಲಾಗುವಿಕೆ ಮತ್ತು ಸಾವಿನ ಪ್ರಮಾಣ ಕಡಿಮೆ ಇದೆ.
‘ಕೊರೋನಾದ ವಿರುದ್ಧ ಲಸಿಕೆಯ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ಜನರು 2 ಡೋಸ್ ಲಸಿಕೆಯನ್ನು ಪಡೆದುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಇದರಿಂದ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ’ ಎಂದು ಬ್ರಿಟನ್ ಆರೋಗ್ಯ ಭದ್ರತಾ ಸಂಸ್ಥೆಯ ಮುಖ್ಯ ಅಧಿಕಾರಿ ಜೆನ್ನಿ ಹ್ಯಾರಿಸ್ ಹೇಳಿದ್ದಾರೆ.
ಕೋವಿಡ್‌ಗೆ 4 ಲಕ್ಷ ಬಲಿ : ಭಾರತ ನಂ.3
ಭಾರತದಲ್ಲಿ ಶುಕ್ರವಾರ 853 ಮಂದಿ ಕೊರೋನಾಕ್ಕೆ ಬಲಿಯಾಗಿದ್ದು, ಅದರೊಂದಿಗೆ ಸೋಂಕಿನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 4 ಲಕ್ಷ ದಾಟಿದೆ. ಕೊರೋನಾದಿಂದ ಅತಿಹೆಚ್ಚು ಸಾವನ್ನಪ್ಪಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ ನಂ.1, ಬ್ರೆಜಿಲ್ ನಂ.2, ಭಾರತ ನಂ.3 ಆಗಿವೆ.
ಭಾರತಕ್ಕೆ ಹೋಗ್ಬೇಡಿ: ಯುಎಇ ಎಚ್ಚರಿಕೆ
ಕೊರೋನಾ ಹೆಚ್ಚಿರುವುದರಿಂದ ಭಾರತ, ಪಾಕಿಸ್ತಾನ ಸೇರಿದಂತೆ 14 ರಾಷ್ಟ್ರಗಳಿಗೆ ಪ್ರವಾಸಕ್ಕೆ ತೆರಳದಂತೆ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ತನ್ನ ಪ್ರಜೆಗಳಿಗೆ ಸೂಚಿಸಿದೆ. ಏಷ್ಯಾ ಹಾಗೂ ಆಫ್ರಿಕನ್ ದೇಶಗಳು ನಿಷೇಧಿತ ದೇಶಗಳ ಪಟ್ಟಿಯಲ್ಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ