ಅಂತ್ಯಕ್ರಿಯೆ ವೇಳೆ ಎದ್ದು ಕುಳಿತ 3 ವರ್ಷದ ಕಂದಮ್ಮ, ಸಂತಸದಲ್ಲಿದ್ದ ಕುಟುಂಬಕ್ಕೆ ಮತ್ತೆ ಶಾಕ್!

By Suvarna NewsFirst Published Aug 25, 2022, 5:53 PM IST
Highlights

ಜ್ವರ, ಹೊಟ್ಟೆ ನೋವಿನಿಂದ ಬಳಲಿದ 3 ವರ್ಷದ ಕಂದಮ್ಮ ಮೃತಪಟ್ಟಿದೆ ಎಂದು ವೈದ್ಯರು ಖಚಿತಪಡಿಸಿದ ಬಳಿಕ ಮರುದಿನ ಕುಟುಂಬ ಅಂತ್ಯಕ್ರಿಯೆ ನೆರವೇರಿಸಲು ಮುಂದಾಗಿತ್ತು. ಈ ವೇಳೆ ಶವಪೆಟ್ಟಿಗೆಯಲ್ಲಿ ಕಂದಮ್ಮ ಕಣ್ಣು ತೆರೆದು  ಹೊರಬರಲು ಪರದಾಡಿದೆ. ಇದನ್ನು ಗಮನಿಸಿದ ತಾಯಿ ತಕ್ಷಣವೇ ಕಂದಮ್ಮನ ಮತ್ತೆ ಆಸ್ಪತ್ರೆ ದಾಖಲಿಸಿದ ಘಟನೆ ನಡೆದಿದೆ

ಮೆಕ್ಸಿಕೋ(ಆ.25): ಕರುಳ ಕುಡಿಯನ್ನು ಬದುಕಿಸಲು ತಾಯಿ ಇನ್ನಿಲ್ಲದ ಹರಸಾಹಸ ಮಾಡಿದ್ದಾರೆ. ಒಂದಲ್ಲ, ಎರಡಲ್ಲ, ನಾಲ್ಕು ವೈದ್ಯರನ್ನು ಸಂಪರ್ಕಿಸಿದ್ದಾರೆ. ನಾಲ್ಕು ಆಸ್ಪತ್ರೆ ಸುತ್ತಾಡಿದ್ದಾರೆ. ಆದರ 3 ವರ್ಷದ ಕಂದಮ್ಮನಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಮೃತಪಟ್ಟಿದೆ ಎಂಬ ವೈದ್ಯರ ವರದಿ ಆಘಾತ ತಂದಿತ್ತು. ಆದರೆ ಅಂತ್ಯಕ್ರಿಯೆ ವೇಳೆ ಮಗುವಿಗೆ ಜೀವ ಇರುವುದನ್ನು ಕಂಡ ಕುಟುಂಬ ಮತ್ತೆ ಮಗುವನ್ನು ಆಸ್ಪತ್ರೆ ದಾಖಲಿಸಿದೆ. ಆದರೆ ಮೊದಲ ಬಾರಿ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ನಿಧನ ಹೊಂದಿದೆ ಎಂದರೆ, ಎರಡನೇ ಬಾರಿ ನಿಜಕ್ಕೂ ಮಗು ಮೃತಪಟ್ಟ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. 

ಮೂರು ವರ್ಷದ ಹೆಣ್ಣು ಮಗು  ಮೆರಿ ಜೇನ್ ಮೆಂಡೋಜಾ ಜ್ವರ, ಹೊಟ್ಟೆ ನೋವಿನಿಂದ ಬಳಲಿದೆ ಕಾರಣ ಮಗುವಿನ ತಾಯಿ ವೈದ್ಯರ ಸಂಪರ್ಕಿಸಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ತೆರಳಿದ ಮಗುವಿನ ತಾಯಿ ಕ್ಯಾಮಿಲಾ ರೋಕ್ಸಾನಾಗೆ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಕಾರಣ ದೊಡ್ಡ ಆಸ್ಪತ್ರೆ ವೈದ್ಯರ ಸಂಪರ್ಕಿಸಲು ಸೂಚಿಸಿದ್ದಾರೆ. ಇದೇ ವೇಳೆ ಪ್ಯಾರಾಸೆಟಾಮೊಲ್ ಮಾತ್ರೆ ನೀಡಿ ಮಗು ಹಾಗೂ ತಾಯಿಯನ್ನು ಕಳುಹಿಸಿಕೊಟ್ಟಿದ್ದಾರೆ. 

 

ಕೊಲೆಗೂ ಮುನ್ನ ಸೋನಾಲಿ ರೇಪ್‌: ಸಹೋದರ ರಿಂಕು ಆರೋಪ!

ಸ್ಥಳೀಯ ವೈದ್ಯರ ಸೂಚನೆಯಂತೆ ದೊಡ್ಡ ಆಸ್ಪತ್ರೆಗೆ ತೆರಳಿ ಹಲವು ಪರೀಕ್ಷೆ ಮಾಡಿಸಿದ್ದಾರೆ. ಬಳಿಕ ಕೆಲ ಔಷಧಿಗಳನ್ನು ವೈದ್ಯರು ನೀಡಿದ್ದಾರೆ. ಇಷ್ಟೇ ಅಲ್ಲ ಹಣ್ಣು ಹಾಗೂ ನೀರು ಹೆಚ್ಚಾಗಿ ನೀಡುವಂತೆ ಮಗುವಿನ ತಾಯಿಗೆ ಸೂಚಿಸಿದ್ದಾರೆ. ಆದರೆ ಮಗುವಿನ ಆರೋಗ್ ಕ್ಷೀಣಿಸುತ್ತಲೇ ಹೋಗಿದೆ. ಮಗು ಮಾತನಾಡಲು ಸಾಧ್ಯವಾಗದ ಪರಿಸ್ಥಿತಿಗೆ ಹೋಗಿದೆ. ಇದರಿಂದ ಗಾಬರಿಗೊಂಡ ತಾಯಿ ನೇರವಾಗಿ 3 ವರ್ಷದ ಕಂದಮ್ಮನನ್ನ ತುರ್ತು ನಿಘಾ ಘಟಕಕ್ಕೆ ದಾಖಲಿಸಿದ್ದಾರೆ. 

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವನ್ನು ಆಸ್ಪತ್ರೆ ದಾಖಲಿಸಿಕೊಳ್ಳಲು ಕೆಲ ಹೊತ್ತು ತೆಗೆದುಕೊಂಡಿದ್ದಾರೆ. ಬಳಿಕ ಮಗುವಿನಗೆ ಆಕ್ಸಿಜನ್ ನೀಡಲು ವಿಳಂಬ ಮಾಡಿದ್ದಾರೆ.  10 ನಿಮಿಷ ಆಕ್ಸಿಜನ್ ನೀಡಿ ಬಳಿಕ ಮಗು ಮೃತಪಟ್ಟಿದೆ. ಬಿಲ್ ಪಾವತಿಸಿ ತೆಗೆದುಕೊಂಡು ಹೋಗಿ ಎಂದು ತಾಯಿಗೆ ಸೂಚಿಸಿದ್ದಾರೆ. ಈ ಮಾತು ತಾಯಿಗೆ ಆಘಾತ ತಂದಿದೆ. ಅತ್ಯಂತ ನೋವಿನಿಂದ ಅಳುತ್ತಲೇ ಕುಳಿತ ತಾಯಿಗೆ ಕುಟುಂಬ ಸದಸ್ಯರು ಸಾಥ್ ನೀಡಿದ್ದಾರೆ. ಬಳಿಕ ಮರುದಿನ ಮಗುವಿನ ಅಂತ್ಯಸಂಸ್ಕಾರಕ್ಕೆ ಕುಟುಂಬ ತಯಾರಿ ಮಾಡಿಕೊಂಡಿದೆ.

ಅಂತ್ಯಸಂಸ್ಕಾರದ ವೇಳೆ ಮಗುವಿನ ಅಜ್ಜಿ ಮಹತ್ವದ ವಿಚಾರ ಗಮನಿಸಿದ್ದಾರೆ. ಶವಪೆಟ್ಟಿಗೆಯಲ್ಲಿರುವ ಮಗುವಿನ ಕಣ್ಣು ಚಲಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ತಕ್ಷಣವೇ ಮಗುವನ್ನು ಶವಪಟ್ಟೆಯಿಗೆಯಿಂದ ತೆಗೆದು ನೋಡಿದಾಗ ಮಗುವಿನಲ್ಲಿ ಹೃದಯ ಬಡಿತ ಇರುವುದು ಪತ್ತೆಯಾಗಿದೆ. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸತತ ಪ್ರಯತ್ನಿಸಿದ ವೈದ್ಯರು ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಜ್ವರ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮದೆಳುಗೆ ವ್ಯಾಪಿಸಿತ್ತು. ಇದರಿಂದ ಮೆದಳು ಊದಿಕೊಂಡಿತ್ತು. ಹೀಗಾಗಿ ಮಗು ಮೃತಪಟ್ಟಿದೆ.

ಅಜ್ಜಿ ಮೃತದೇಹದ ಮುಂದೆ ಕುಟುಂಬದ ನಗುಮುಖದ ಫೋಟೋ, ಟೀಕೆ ಬೆನ್ನಲ್ಲೇ ಕಾರಣ ಬಿಚ್ಚಿಟ್ಟ ಪುತ್ರ!

ಆಘಾತದಲ್ಲಿದ್ದ ತಾಯಿ ಸಹನೆ ಕಟ್ಟೆ ಒಡೆದಿದೆ. ಮೊದಲ ಬಾರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ದಾಖಲಿಸಿದ ವೇಳೆ ಮಗು ಮೃತಪಟ್ಟಿದ್ದಾರೆ ಎಂಬ ಸುಳ್ಳು ಹಾಗೂ ನಿರ್ಲಕ್ಷ್ಯದ ವರದಿ ನೀಡಿದ ವೈದ್ಯರು ಹಾಗೂ ಆಸ್ಪತ್ರೆ ವಿರುದ್ಧ ಮಗುವಿನ ತಾಯಿ ದೂರು ದಾಖಲಿಸಿದ್ದಾರೆ. ಜೀವಂತ ಮಗುವನ್ನು ನಿಧನ ಹೊಂದಿದೆ ಎಂದು ವರದಿ ನೀಡಿದ್ದಾರೆ. ಒಂದು ದಿನ ಮಗು ಯಾವುದೇ ಚಿಕಿತ್ಸೆ ಆಹಾರ ಇಲ್ಲದೆ ಶವಪೆಟ್ಟಿಗೆಯಲ್ಲಿ ಮಲಗುವಂತೆ ಮಾಡಿದ್ದಾರೆ. ಈ ಕಾರಣದಿಂದ ಮಗು ನಿಧನಹೊಂದಿದೆ. ತನಗಾಗಿರುವ ನಷ್ಟ ಹೇಳತೀರದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
 

click me!