ತಾಂಜಾನಿಯಾ(ಡಿ. 21): ಜಂಗಲ್ ಸಫಾರಿಯ ದೊಡ್ಡ ಆಕರ್ಷಣೆ ಎಂದರೆ ಅರಣ್ಯದಲ್ಲಿ ಪ್ರಾಣಿಗಳು ವಾಸಿಸುವುದನ್ನು ನೋಡುವುದು. ಆದರೆ ಸಫಾರಿಗೆ ಹೋದವರ ಗುಂಪು ರಸ್ತೆ ಮಧ್ಯದಲ್ಲೇ ಮಲಗಿಕೊಂಡು ಆಟವಾಡುತ್ತಿದ್ದ ಸಿಂಹಗಳ ಗುಂಪನ್ನು ನೋಡಿ ರೋಮಾಂಚನಗೊಂಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಇರುವ ಈ ವಿಡಿಯೋದಲ್ಲಿ ಮೊದಲಿಗೆ ಎರಡು ಸಿಂಹಗಳು ರಸ್ತೆ ಮಧ್ಯದಲ್ಲೇ ಮಲಗಿ ಸರಸ ಸಲ್ಲಾಪ ಆಡುತ್ತಿರುತ್ತವೆ. ಅಲ್ಲಿಗೆ ಬಂದ ಮತ್ತೊಂದು ಸಿಂಹ ಈ ಎರಡು ಸಿಂಹಗಳ ಮೇಲೆ ಹಾಗೆ ಹಾಯಾಗಿ ಬಿದ್ದುಕೊಳ್ಳುತ್ತದೆ. ಈ ಮೂರು ಸಿಂಹಗಳ ಆಟ ನೋಡಿ ಸಫಾರಿಗೆ ಬಂದವರು ವಾಹನವನ್ನು ಅಲ್ಲೇ ನಿಲ್ಲಿಸಿದ್ದಾರೆ. ಹೀಗಾಗಿ ಈ ರಸ್ತೆಯಲ್ಲಿ ಸಫಾರಿ ವಾಹನಗಳು ಉದ್ದ ಸಾಲಾಗಿ ನಿಲ್ಲುವಂತಾಯಿತು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1.2 ಮಿಲಿಯನ್‌ಗೂ ಹೆಚ್ಚು ಜನ ಇದನ್ನು ವೀಕ್ಷಣೆ ಮಾಡಿದ್ದಾರೆ. 6 ಸಾವಿರಕ್ಕೂ ಹೆಚ್ಚು ಜನರು ಇದನ್ನು ಶೇರ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಸಿಂಹಗಳ ಈ ಅದ್ಭುತ ದೃಶ್ಯವು ಪ್ರವಾಸಿಗರಿಗೆ ಎಂದಿಗೂ ಮರೆಯಲಾಗದ ಕ್ಷಣವೆನಿಸಿದೆ. Buitengebieden ಎಂಬ ಟ್ವಿಟ್ಟರ್ ಖಾತೆಯು ಈ ವೀಡಿಯೊವನ್ನು ಹಂಚಿಕೊಂಡಿದೆ ಮತ್ತು ಇದಕ್ಕೆ ತಾಂಜಾನಿಯಾದಲ್ಲಿ ರಸ್ತೆ ತಡೆ ಎಂಬ ಶೀರ್ಷಿಕೆಯನ್ನು ನೀಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ಈ ಸೊಗಸಾದ ದೃಶ್ಯವನ್ನು ನೋಡಿ ವಿಸ್ಮಯಗೊಂಡಿದ್ದು ಮತ್ತು ಕೆಲವರು ವೀಡಿಯೊವನ್ನು ವೈಲ್ಡ್ ವರ್ಸಸ್ ಮ್ಯಾನ್ (wild vs Man)ಸಿನಿಮಾಗೆ ಹೋಲಿಸಿದ್ದಾರೆ. ಒಬ್ಬ ಬಳಕೆದಾರರು ಅವುಗಳನ್ನು ಮನೆಯ ಬೆಕ್ಕುಗಳಿಗೆ ಹೋಲಿಸಿದ್ದಾರೆ. ದೊಡ್ಡ ಬೆಕ್ಕುಗಳ ಬಗ್ಗೆ ನಾನು ಹೆಚ್ಚು ಇಷ್ಟಪಡುವ ವಿಷಯವೆಂದರೆ ನೀವು ಮನೆಯ ಚಿಕ್ಕ ಬೆಕ್ಕುಗಳಲ್ಲಿಯೂ ಅದೇ ನಡವಳಿಕೆಯನ್ನು ನೋಡುತ್ತೀರಿ ಎಂದು ಬರೆದಿದ್ದಾರೆ.
Roadblock in Tanzania.. pic.twitter.com/SQwblplclP
— Buitengebieden (@buitengebieden_)
ಈ ಹಿಂದೆ ದಕ್ಷಿಣ ಆಫ್ರಿಕಾದ ಕ್ರೂಗರ್ ರಾಷ್ಟ್ರೀಯ ಉದ್ಯಾನವನದ ಮಲಮಾಲಾ ಖಾಸಗಿ ಗೇಮ್ ರಿಸರ್ವ್‌ನಲ್ಲಿ ಒಂದು ಸಣ್ಣ ಏಡಿಯು ಸಿಂಹಗಳ ಗುಂಪನ್ನು ನಿರ್ಬಂಧಿಸುವ ಹಾಗೂ ಸಿಂಹಗಳ ವಿರುದ್ದ ಛಲ ಬಿಡದೆ ಹೋರಾಟ ಮಾಡಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಕ್ರೂಗರ್ ರಾಷ್ಟ್ರೀಯ ಉದ್ಯಾನವನ (Kruger National Park) ದಕ್ಷಿಣ ಆಫ್ರಿಕಾ(South Africa) ದ ಅತಿದೊಡ್ಡ ಮತ್ತು ಹಳೆಯ ಉದ್ಯಾನವನ. ರೇಂಜರ್ಸ್ ರಗ್ಗಿರೊ ಬ್ಯಾರೆಟೊ (Rangers Ruggiero Barreto) ಮತ್ತು ರಾಬಿನ್ ಸೆವೆಲ್ (Robin Sewell) ಅವರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಈ ವಿಡಿಯೋವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಈ ವಿಡಿಯೋವನ್ನು ಅಂದು ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು.
ಸಿಂಹಕ್ಕೆ ಮಾಂಸ ತಿನ್ನಿಸಿದ ರಾಕಿ ಭಾಯ್: ವಿಡಿಯೋ ವೈರಲ್
ಈ ವಿಡಿಯೋವು ಸಿಂಹಗಳು ಕುತೂಹಲಕಾರಿಯಾಗಿ ಏಡಿಯನ್ನು ನೋಡುವುದನ್ನು ಮತ್ತು ಗಮನಿಸುವುದನ್ನು ತೋರಿಸುತ್ತದೆ. ಏಡಿಯನ್ನು ಹತ್ತಿರದಿಂದ ನೋಡುವ ಸಲುವಾಗಿ ಸಿಂಹಗಳು ಅದರ ಹಿಂದೆ ನಡೆಯಲು ಶುರು ಮಾಡುತ್ತವೆ. ನಂತರ ಏಡಿಯ ನಡವಳಿಕೆಯು ಸಿಂಹಗಳಿಗೆ ಅಚ್ಚರಿ ಉಂಟುಮಾಡುತ್ತದೆ. ಇದರಿಂದಾಗಿ ಮೂರು ಸಿಂಹಗಳ ಗುಂಪು ದೂರ ಸರಿಯಲು ಆರಂಭಿಸುತ್ತವೆ. ಇದನ್ನು ಒಂದು ಏಡಿಯ ಧೈರ್ಯಶಾಲಿ ಹೋರಾಟ ಎಂದು ನೆಟ್ಟಿಗರು ಬಿಂಬಿಸಿದ್ದರು. ಏಡಿ ಒಂದು ಸಣ್ಣ ಬಿಲದಲ್ಲಿ ಕಣ್ಮರೆಯಾಗುವ ಮೊದಲು ಅದರ ಪಿಂಕರ್‌ಗಳನ್ನು ಕೂಡ ಸುರಕ್ಷಿತವಾಗಿ ಜೊತೆ ಜೊತೆಯಲ್ಲಿ ರಕ್ಷಿಸಿಕೊಳ್ಳುತ್ತದೆ. ಈ ಸುದ್ದಿ ಇಂಟರ್‌ನೆಟ್‌ನಲ್ಲಿ ಭಾರಿ ಮೆಚ್ಚುಗೆಯನ್ನು ಪಡೆದಿತ್ತು. ನಾವೆಲ್ಲರೂ ಸಾಮಾನ್ಯವಾಗಿ ಸಿಂಹಕ್ಕೆ ಹೆದರುತ್ತೇವೆ. ಆದರೆ ಈ ರೀತಿಯ ವೀಡಿಯೊಗಳು ಸಿಂಹದ ಇತರ ಸೌಮ್ಯ ನಡವಳಿಕೆಯನ್ನು ತೋರಿಸುತ್ತದೆ.
Lions Escape At Singapore Airport: ವಿದೇಶಕ್ಕೆ ಸಾಗಿಸುತ್ತಿದ್ದಾಗ ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡ ಸಿಂಹಗಳು!