* ವೆಬ್ ಕ್ಯಾಮೆರಾ ಮೂಲಕ ಚಿಕಿತ್ಸೆ ನೀಡುವ ಭರವಸೆ
* ನಕಲಿ ವೈದ್ಯನ ಮಾತಿಗೆ ಬಲಿಯಾದ ನಾಲ್ನೂರಕ್ಕೂ ಹೆಚ್ಚು ಮಹಿಳೆಯರು
* ಕೊನೆಗೂ ಸೆರೆಸಿಕ್ಕ ವೈದ್ಯ
ಇಟಲಿ(ಡಿ.21): ನಕಲಿ ಸ್ತ್ರೀರೋಗತಜ್ಞನ ಬಣ್ಣ ಬಯಲಾಗಿದ್ದು, ಅಕ್ರಮವೆಸಗುತ್ತಿದ್ದ ಸ್ತ್ರೀರೋಗ ತಜ್ಞನನ್ನು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈತ ನೂರಾರು ಮಹಿಳೆಯರ ಯೋನಿ ಪರೀಕ್ಷೆಯನ್ನು ವೆಬ್‌ಕ್ಯಾಮ್ ಮೂಲಕ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 400ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿದ ಆರೋಪ ಇವರ ಮೇಲಿದೆ. ಪೊಲೀಸರು ದಾಳಿ ನಡೆಸಿ ಈ ವೈದ್ಯರನ್ನು ಬಂಧಿಸಿದ್ದಾರೆ. ಹಲವಾರು ಸಂತ್ರಸ್ತರು ದೂರು ನೀಡಿದ ನಂತರ ಬಳಿಕ ಹಲವಾರು ಸ್ಮಾರ್ಟ್‌ಫೋನ್‌ಗಳು ಮತ್ತು ಮೆಮೊರಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ, ನಂತರ ಅಧಿಕಾರಿಗಳು ಆರೋಪಿಗಳ ಟ್ಯಾಪಿಂಗ್ ನಡೆಸಿದ್ದಾರೆ.
400ಕ್ಕೂ ಹೆಚ್ಚು ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ
undefined
ದೇಶಾದ್ಯಂತ ಕ್ಲಿನಿಕ್‌ಗಳಲ್ಲಿ ಸ್ವ್ಯಾಬ್ ಮಾಡಿದ ಮಹಿಳೆಯರನ್ನು ಈ ವ್ಯಕ್ತಿ ಗುರಿಯಾಗಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಆನ್‌ಲೈನ್ ಸ್ತ್ರೀರೋಗ ಪರೀಕ್ಷೆಗೆ ಒಳಗಾಗುವಂತೆ ಅವರನ್ನು ಮನವೊಲಿಸಿದ್ದಾರೆ. ಇಟಲಿಯಾದ್ಯಂತ ಲಾಜಿಯೊದಿಂದ ಲೊಂಬಾರ್ಡಿಯಾ ಮತ್ತು ಕ್ಯಾಲಬ್ರಿಯಾದವರೆಗೆ 400 ಕ್ಕೂ ಹೆಚ್ಚು ಮಹಿಳೆಯರು ಈ ನಕಲಿ ವೈದ್ಯನ ಬಲೆಗೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಿಪಬ್ಲಿಕಾ ಡೈಲಿಯೊಂದಿಗೆ ಮಾತನಾಡಿದ ಸಂತ್ರಸ್ತರೊಬ್ಬರು, ಆರೋಪಿಯು ವೈದ್ಯರಂತೆ ಪೋಸ್ ನೀಡಿದ್ದಾನೆ. ಅವರು ಮಹಿಳೆಯರ ಜನ್ಮ ದಿನಾಂಕ ಮತ್ತು ಸ್ಥಳವನ್ನು ತಿಳಿದಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ನಾನು ಸ್ತ್ರೀರೋಗ ಪರೀಕ್ಷೆಯನ್ನು ಮಾಡಿದ್ದೇನೆಯೇ ಎಂದು ಕೇಳಿದ್ದರು. ಎಲ್ಲಾ ಬಗೆಯ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ, ನಂತರ ಜೂಮ್ ಅಥವಾ ಹ್ಯಾಂಗ್‌ಔಟ್ ಮೂಲಕ ವೀಡಿಯೊ ಕರೆ ಮಾಡಿ, ಬಳಿಕ ನನ್ನ ಖಾಸಗಿ ಅಂಗವನ್ನು ತೋರಿಸಲು ಹೇಳಿದ್ದಾನೆ ಎಂದು ತಿಳಿಸಿದ್ದಾರೆ.
ಸಲೆಂಟೊದ 24 ವರ್ಷದ ಮಹಿಳೆ ಮೊದಲ ಬಾರಿ ಇಂತಹ ಕೆಟ್ಟ ನಡವಳಿಕೆ ಹಾಗೂ ಅಕ್ರಮದ ದೂರು ನೀಡಿದ್ದಾಳೆ. ವೀಡಿಯೋ ಅಪಾಯಿಂಟ್‌ಮೆಂಟ್‌ಗೆ ವ್ಯವಸ್ಥೆ ಮಾಡಿದಾಗ ಆರೋಪಿಗೆ ತನ್ನ ಬಗ್ಗೆ ಎಲ್ಲವೂ ತಿಳಿದಿತ್ತು ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ವೀಡಿಯೊದಲ್ಲಿಯೇ, ಆತ ನನಗೆ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸಿದ್ದಾನೆ, ಆದರೆ ಏನೋ ತಪ್ಪು ನಡೆಯುತ್ತಿದೆ ಎಂದು ಭಾಸವಾದಾಗ ತಾನು ಇದಕ್ಕೆ ನಿರಾಕರಿಸಿದೆ ಎಂದೂ ತಿಳಿಸಿದಸ್ದಾಳೆ. ದುರಾದೃಷ್ಟವಶಾತ್ ನೂರಾರು ಮಹಿಳೆಯರು ತಿಳಿಯದೆ ನಕಲಿ ವೈದ್ಯನ ಅಕ್ರಮಕ್ಕೆ ಬಲಿಪಶುಗಳಾಗಿದ್ದಾರೆ