ನೈಋತ್ಯ ಚೀನಾದಲ್ಲಿ 29 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕೆಲಸವನ್ನು ತೊರೆದಿದ್ದು, ವಿಶ್ರಾಂತಿ ಪಡೆಯಲು ಬಯಸುತ್ತಾರೆ.
ಬೀಜಿಂಗ್ (ಮೇ 20, 2023): ದುಡ್ಡು ಮಾಡ್ಬೇಕು ಅಂದ್ರೆ ಯಾವ್ದಾದ್ರೂ ಉದ್ಯೋಗ ಮಾಡ್ಬೇಕು.. ಇಲ್ಲ ಅಂದ್ರೆ ಬ್ಯುಸಿನೆಸ್ ಮಾಡ್ಬೇಕು. ಆದರೆ, ಇಲ್ಲೊಬ್ಬ ವ್ಯಕ್ತಿ ಕೆಲಸದ ಗೊಡವೆಯೇ ಬೇಡ್ವೆಂದು ಉದ್ಯೋಗ ತೊರೆದು ರಿಲ್ಯಾಕ್ಸ್ ಮಾಡ್ತಿದ್ದಾನೆ. ಅದೂ ಟೆಂಟ್‌ನಲ್ಲಿ.
ನೈಋತ್ಯ ಚೀನಾದಲ್ಲಿ 29 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕೆಲಸವನ್ನು ತೊರೆದಿದ್ದು, ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಮತ್ತು ಕೆಲಸ ಮಾಡದ ಕಾರಣ ಖಾಲಿ ಬಿದ್ದಿರೋ ಕಾರ್ ಪಾರ್ಕ್ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸಿಸಲು ಪ್ರಾರಂಭಿಸಿದ್ದಾರೆ. ಲೀ ಶು ಎಂಬ ಇವರು 200 ಕ್ಕೂ ಹೆಚ್ಚು ದಿನಗಳಿಂದ ಸಿಚುವಾನ್ ಪ್ರಾಂತ್ಯದ ಹಳೆಯ ಕಾರ್ ಪಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ.
ಇದನ್ನು ಓದಿ: 15 ವರ್ಷದಿಂದ ಅನಾರೋಗ್ಯ ರಜೇಲಿದ್ರೂ ಸಂಬಳ ಜಾಸ್ತಿ ಮಾಡಿಲ್ಲ ಅಂತ ಕಂಪನಿ ವಿರುದ್ಧ ಕೇಸ್ ಹಾಕಿದ ಉದ್ಯೋಗಿ!
ಅವರ ಕಿತ್ತಳೆ ಬಣ್ಣದ ಈ ಟೆಂಟ್ ಕಾರ್ ಪಾರ್ಕ್‌ನ ಮರದ ಪ್ರದೇಶದಲ್ಲಿ ಕಲ್ಲುಗಳು ಮತ್ತು ಇಟ್ಟಿಗೆಗಳಿಂದ ಆವೃತವಾಗಿದೆ. ಇನ್ನು, ಈ ಟೆಂಟ್‌ನ ಮೇಲೆ ಬೇರೆ ಒಬ್ಬರ ಮನೆ ಎಂದು ಗೌರವಿಸಬೇಕು ಮತ್ತು ಅವರ ವಸ್ತುಗಳನ್ನು ಇತರರು ಬಂದು ಮುಟ್ಟದಂತೆ ವಿನಂತಿಸಿ ಬರೆಯಲಾಗಿದೆ. ಹಾಗೂ, ಈ ವಸ್ತುಗಳು ನಿಷ್ಟಪ್ರಯೋಜಕ ಎಂದೂ ಬರೆಯಲಾಗಿದೆ.
ಅಲ್ಲದೆ, ನಾನು ಈ ಸ್ಥಳದಿಂದ ದೂರ ಹೋಗಬೇಕೆಂದು ನೀವು ಬಯಸಿದರೆ, ನನ್ನನ್ನು ಕರೆಯಿರಿ. ಅಲ್ದೆ, ನಾನು ಇಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದೇನೆ. ನಾನು ನಿಮಗೆ ಮನನೋಯಿಸಿದ್ದರೆ, ಕ್ಷಮಿಸಿ ಮತ್ತು ತಕ್ಷಣವೇ ಹೊರಡುತ್ತೇನೆ ಎಂದು ನೋಟಿಸ್ ಹೇಳುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!
ಲೀ ಶು ಅವರ ಜೀವನ ವಿಧಾನವು "lying flat" ಸಂಸ್ಕೃತಿಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದೆ. ಅಂದರೆ ಬದುಕಲು ಕನಿಷ್ಠ ಏನು ಬೇಕೋ ಹಾಗೆ ಮಾತ್ರ ಜೀವಿಸುವುದು. ಚೀನಾದಲ್ಲಿನ ವಿಷಕಾರಿ ಮತ್ತು ಅತಿಯಾದ ಸ್ಪರ್ಧಾತ್ಮಕ ಕೆಲಸದ ಸ್ಥಳದ ಸಂಸ್ಕೃತಿಗೆ ಯುವಕರ ಪ್ರತಿಕ್ರಿಯೆಯಾಗಿ ಹಲವಾರು ಜನರು ಇದನ್ನು ನೋಡುತ್ತಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಲೀ ಶು ಅವರ ಅತ್ಯಂತ ದುಬಾರಿ ಆಸ್ತಿ ಎಂದರೆ ಅವರ ಸೆಕೆಂಡ್ ಹ್ಯಾಂಡ್ ಟೆಂಟ್, ಅದರ ಬೆಲೆ 400 ಯುವಾನ್ (ರೂ. 4,700). ಅವರು ಎರಡು ಕಳಪೆ ದರ್ಜೆಯ ಬಟ್ಟೆಗಳನ್ನು ಹೊಂದಿದ್ದಾರೆ, ಅಡುಗೆ ಒಲೆ, ಅಲ್ಯೂಮಿನಿಯಂ ಪಾತ್ರೆ ಮತ್ತು ಕೆಲವು ಆಹಾರವನ್ನು ಮಾತ್ರ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ, ಮಾನವೀಯತೆಗೆ ಡೇಂಜರ್ : ಗೂಗಲ್‌ನಿಂದ ಹೊರಬಂದ AI ಜನಕ
ಲೀ ಶು 2018 ರ ಕೊನೆಯಲ್ಲಿ ತನ್ನ ಕೆಲಸವನ್ನು ತೊರೆದಿದ್ದರು ಮತ್ತು ಅಂದಿನಿಂದ ನಿರುದ್ಯೋಗಿಯಾಗಿ ಉಳಿಯಲು ನಿರ್ಧರಿಸಿದರು. ಅವರು ತಮ್ಮ ಬಾಡಿಗೆ ಫ್ಲಾಟ್‌ನಲ್ಲಿಯೇ ಇದ್ದರು ಮತ್ತು ಸಾಮಾಜಿಕ ಜೀವನವನ್ನು ಹೊಂದಿರಲಿಲ್ಲ. ಆದರೆ, ಕಳೆದ ವರ್ಷ ತನ್ನ ಉಳಿತಾಯವು ಖಾಲಿಯಾದಾಗ ಮತ್ತು ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗದಿದ್ದಾಗ ಲೀ ಶು ಟೆಂಟ್‌ನಲ್ಲಿ ವಾಸಿಸಲು ನಿರ್ಧರಿಸಿದರು. ಟೆಂಟ್ ಖರೀದಿಸಲು ಅವರು ತಮ್ಮ ಕ್ಯಾಮೆರಾ, ಕಂಪ್ಯೂಟರ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಿದರು ಎಂದೂ ತಿಳಿದುಬಂದಿದೆ.
ಮೂಲಭೂತ ಜೀವನಶೈಲಿಯ ಹೊರತಾಗಿಯೂ, ಲೀ ಶು ಇನ್ನೂ ಪ್ರತಿದಿನ ತನಗಾಗಿ ಅಡುಗೆ ಮಾಡಲು ಪ್ರಯತ್ನಗಳನ್ನು ಮಾಡಬೇಕಾಗಿದೆ. ನೀರನ್ನು ಹುಡುಕಲು ಮತ್ತು ತನ್ನ ಉಪಕರಣಗಳಿಗೆ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಅವರು ಬಹಳ ದೂರ ನಡೆಯಬೇಕಾಗಿತ್ತು, ಆದರೂ, ಈ ಬಗ್ಗೆ ಆತ ಯಾರಿಗೂ ಯಾವುದೇ ದೂರು ಹೇಳಲ್ಲ. "ಇದು ನನ್ನ ಆಯ್ಕೆ," ಎಂದೂ ಅವರು ಹೇಳಿದರು.
ಇದನ್ನೂ ಓದಿ: Bengaluru: ಥಿಯೇಟರ್‌ನಲ್ಲಿ ‘ವರ್ಕ್ ಫ್ರಂ ಹೋಮ್’ ಮಾಡ್ತಿರೋ ಭೂಪ: ಐಟಿ ಸಿಟಿಯಲ್ಲಿ ಮಾತ್ರ ಸಾಧ್ಯ ಅಂತಾರೆ ನೆಟ್ಟಿಗರು!
ಲೀ ಶು ಅವರ ಸ್ನೇಹಿತರು ಉದ್ಯಮವನ್ನು ಪ್ರಾರಂಭಿಸಲು ವಸತಿ ಮತ್ತು ಆರ್ಥಿಕ ಸಹಾಯವನ್ನು ನೀಡಲು ಮುಂದಾದರು. ಆದರೆ ಆತ ಅವರ ಸಹಾಯವನ್ನು ನಿರಾಕರಿಸಿದ್ದಾರೆ ಎಂದೂ ತಿಳಿದುಬಂದಿದೆ. "ನೀವು ಜೀವನದಲ್ಲಿ ಅತೃಪ್ತ ಅನ್ವೇಷಣೆಗಳನ್ನು ತೊರೆದಾಗ, ನೀವು ನಿಧಾನವಾಗಿ ಶಾಂತಿಯನ್ನು ಅನುಭವಿಸುವಿರಿ ಮತ್ತು ಬದಲಾದ ಸಂದರ್ಭಗಳಿಗೆ ಒಗ್ಗಿಕೊಳ್ಳುತ್ತೀರಿ. ಇದು ವಿಶ್ರಾಂತಿ ನೀಡುತ್ತದೆ" ಎಂದೂ ಲೀ ಶು ಹೇಳಿದ್ದಾರೆ.
ಇದನ್ನೂ ಓದಿ: Shocking: ಕೃತಕ ಬುದ್ಧಿಮತ್ತೆಯಿಂದ 30 ಕೋಟಿ ಉದ್ಯೋಗ ನಷ್ಟ: ಗೋಲ್ಡ್‌ಮನ್ ಸ್ಯಾಚ್ಸ್ ಭವಿಷ್ಯ