
ಇಟಲಿ: ಮಾದಕ ದ್ರವ್ಯ ವ್ಯಸನದ ನಿಯಂತ್ರಣಕ್ಕೆ ಜಗತ್ತಿನಾದ್ಯಂತ ಹಲವು ಕಠಿಣ ಕಾನೂನುಗಳಿದ್ದರೂ ಮಾದಕದ್ರವ್ಯ ಕಳ್ಳಸಾಗಣೆಕೋರರು ಒಂದಲ್ಲ ಒಂದು ರೀತಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಮಾದಕದ್ರವ್ಯಗಳ ಕಳ್ಳಸಾಗಣೆಗೆ ಮುಂದಾಗುತ್ತಾರೆ. ಅದೇ ರೀತಿ ಇಟಲಿಯಲ್ಲಿ ಮಾದಕದ್ರವ್ಯ ಕಳ್ಳಸಾಗಣೆದಾರರು ಬರೋಬ್ಬರಿ 2 ಸಾವಿರಕ್ಕೂ ಅಧಿಕ ಕೋಕೇನ್ ಅನ್ನು ಉಪಾಯವಾಗಿ ಕಳ್ಳಸಾಗಣೆ ಮಾಡಲು ಮುಂದಾಗಿದ್ದು, ಆದರೆ ಶ್ವಾನವೊಂದರ ಕಾರ್ಯಕ್ಷಮತೆಯಿಂದಾಗಿ ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈಕ್ವೇಡಾರ್‌ನಿಂದ ಬಾಳೆಹಣ್ಣುಗಳನ್ನು ಹೊತ್ತು ಬಂದ ಈ ಟ್ರಕ್ ಅರ್ಮೇನಿಯಾಗೆ ಹೋಗುವುದರಲ್ಲಿತ್ತು. ಈ ಟ್ರಕ್‌ನಲ್ಲಿ ಭಾರೀ ಮೊತ್ತದ ಡ್ರಗ್ ಪತ್ತೆಯಾಗಿದೆ ಎಂದು ಇಟಲಿಯನ್ ಅಧಿಕಾರಿಗಳು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದು ಬಂದಿದೆ.
ಮಾದಕ ದ್ರವ್ಯ ವಿರೋಧಿ ದಳದಲ್ಲಿ ಕೆಲಸ ಮಾಡುತ್ತಿದ್ದ ಜೋಯಲ್ ಹೆಸರಿನ ಶ್ವಾನದ ಸೂಕ್ಷ್ಮವಾದ ಮೂಗಿನ ಪರಿಣಾಮ ಹಾಗೂ ಕೆಲವು ಅತ್ಯಾಧುನಿಕ ಸ್ಕ್ಯಾನರ್‌ಗಳು ಈ ದೊಡ್ಡ ಡ್ರಗ್ ತಿಮಿಂಗಿಲವನ್ನು ಬಲೆಗೆ ಕೆಡವಿದೆ. ಇಟಲಿಯ ಜಿಯೋಯಾ ಟೌರೊ ಬಂದರಿಗೆ ತಲುಪಿದ ಇಲ್ಲಿಂದ ಈಕ್ವೇಡಾರ್‌ಗೆ ಸಾಗಬೇಕಾಗಿದ್ದ ಬಾಳೆಹಣ್ಣುಗಳ ಬಾಕ್ಸ್‌ನಲ್ಲಿ ಈ 2734 ಕೆಜಿ ಕೋಕೇನ್ ಅನ್ನು ಅಡಗಿಸಿಡಲಾಗಿತ್ತು. ಆದರೆ ಶ್ವಾನದ ಕಾರ್ಯಕ್ಷಮತೆಯಿದ ಈ ದೊಡ್ಡ ಮಟ್ಟದ ಮಾದಕ ಜಾಲವೊಂದು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
ಆರ್ಯನ್ ಖಾನ್‌ಗೆ ಸಿಕ್ಕಿತ್ತು ಹೆಣ್ಣು, ಡ್ರಗ್ಸ್ ಫ್ರಿ ಟಿಕೆಟ್ ; ಅಧಿಕಾರಿ ಜೊತೆ ಸಮೀರ್ ನಡೆಸಿದ ಚಾಟ್ ಬಹಿರಂಗ!
ಶೀತಲೀಕರಿಸಿದ ಸಿಲ್ವರ್ ಕಂಟೇನರ್‌ಗಳಲ್ಲಿ 78 ಟನ್ ಬಾಳೆಹಣ್ಣುಗಳು ಕೊಕೇನ್ ಅನ್ನು ಅಡಗಿಸಿಟ್ಟುಕೊಂಡು ಈಕ್ವೆಡಾರ್‌ನಿಂದ ಆಗಮಿಸಿದ್ದು, ಅಲ್ಲಿಂದ ಅರ್ಮೇನಿಯಾಕ್ಕೆ ರವಾನೆಯಾಗುವುದರಲ್ಲಿತ್ತು ಎಂದು ಇಟಾಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿಯ ಜಿಯೋಯಾ ಟೌರೊ ಬಂದರಿನಲ್ಲಿ ಕಸ್ಟಮ್ ಅಧಿಕಾರಿಗಳು ದಕ್ಷಿಣ ಅಮೆರಿಕಾದಿಂದ ಆಗಮಿಸುವ ಸರಕುಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಹಲವು ವಿಲಕ್ಷಣ ಹಣ್ಣುಗಳಿದ್ದವು. ಕೊಕೇನ್ ಅನ್ನು ಕಂಟೇನರ್‌ಗಳಲ್ಲಿ ವಿವಿಧ ರೀತಿಯಲ್ಲಿ ಮರೆಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಹಣ್ಣುಗಳ ನಡುವೆ ಡ್ರಗ್‌ನ್ನು ಪತ್ತೆ ಮಾಡಿದ್ದು, ಅಲ್ಲದೇ ಕಂಟೇನರ್‌ಗಳ ತಳದಲ್ಲಿ ಕಂಟೇನರ್‌ಗಳ ಮುಚ್ಚಳಗಳಲ್ಲಿ ಡ್ರಗ್ ಅನ್ನು ಅಡಗಿಸಿಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ಜಪ್ತಿ ಮಾಡಲಾದ ಮಾದಕ ದ್ರವ್ಯದ ಒಟ್ಟು ಮೊತ್ತರ 800 ಮಿಲಿಯನ್ ಯುರೋಗಳು (71,41,68,00,000 ಭಾರತೀಯ ರೂಪಾಯಿ) ಎಂದು ಅಂದಾಜಿಸಲಾಗಿದೆ.
ಡ್ರಗ್ಸ್ ಮತ್ತು ಡ್ರಗ್ ಅಡಿಕ್ಷನ್‌ಗೆ ಸಂಬಂಧಿಸಿದ ಯುರೋಪಿಯನ್ ಮಾನಿಟರಿಂಗ್ ಸೆಂಟರ್ ಕೊಕೇನ್ ಅನ್ನು ಐತಿಹಾಸಿಕವಾಗಿ ಹೆಚ್ಚು ಲಭ್ಯವಿರುವ ಡ್ರಗ್ ಎಂದು ಕರೆದ ನಂತರ ಯುರೋಪಿಯನ್ ಒಕ್ಕೂಟದ ಸಿಂಡಿಕೇಟ್ ಹಾಗೂ ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್‌ಗಳ ನಡುವೆ ಸಹಯೋಗ ಬೆಳೆದಿದೆ. ದಕ್ಷಿಣ ಅಮೆರಿಕಾದಲ್ಲಿ ಬೆಳೆಯಲಾಗುವ ಹೆಚ್ಚಿನ ಮಟ್ಟದ ಕೊಕೇನ್ ಉತ್ಪಾದನೆಯೇ ಯುರೋಪ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಡ್ರಗ್ ವಶಪಡಿಸಿಕೊಳ್ಳುವುದಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಾರುಖ್ ಪುತ್ರನ ಡ್ರಗ್ಸ್ ಕೇಸ್: ಕೊನೆಗೂ ಮೌನ ಮುರಿದ ಮಾಡೆಲ್ ಮುನ್ಮುನ್ ಧಮೇಚಾ!
ಕೊಕೇನ್‌ಗೆ ಯುರೋಪ್‌ನಲ್ಲಿ 10.5 ಶತಕೋಟಿ ಮೌಲ್ಯದ ಮಾರುಕಟ್ಟೆ ಇದೆ ಎಂದು ಅಂದಾಜಿಸಲಾಗಿದ್ದು, ಕೊಕೇನ್ ಯುರೋಪಿಯನ್ ಒಕ್ಕೂಟದಲ್ಲಿ ಗಾಂಜಾ ನಂತರದ ಎರಡನೇ ಅತಿ ಹೆಚ್ಚು ಬಳಸಲಾಗುವ ಡ್ರಗ್ ಆಗಿದೆ. ಅದರ ನಂತರ ಮರಿಜುವಾನಾ ಇದೆ. ಇಟಲಿ (Italy)ಹಾಗೂ ಯೂರೋಪ್‌ನ (Europe) ಹೆಚ್ಚಿನ ಮಾದಕವಸ್ತು ವ್ಯವಹಾರವೂ 'Ndrangheta ಎಂಬ ಅಪರಾಧ ಗುಂಪಿನ ಹಿಡಿತದಲ್ಲಿದೆ. ಇದು 40 ದೇಶಗಳಲ್ಲಿ ಕಾರ್ಯನಿರ್ವಹಿಸುವ ಅಂತರಾಷ್ಟ್ರೀಯ ಮಾದಕವಸ್ತುಗಳಲ್ಲಿ ವ್ಯವಹರಿಸುವ ಅತ್ಯಂತ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಜಾಗತಿಕ ಜಾಲವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ