20 ಸಿಂಹಗಳು ಜೊತೆಯಾಗಿ ನೀರು ಕುಡಿಯುತ್ತಿರುವ ರೋಚಕ ದೃಶ್ಯ ಕ್ಯಾಮರಾದಲ್ಲಿ ಸೆರೆ

By Anusha KbFirst Published Jul 6, 2023, 6:23 PM IST
Highlights

20 ಸಿಂಹಗಳಿರುವ ಹಿಂಡೊಂದು ಜೊತೆಯಾಗಿ ನದಿ ಪಕ್ಕ ಬಂದು ಒಟ್ಟಿಗೆ ನೀರು ಕುಡಿಯುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಪ್ರಾಣಿ ಪ್ರಪಂಚದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

ವನ್ಯಜೀವಿಗಳು ಹಾಗೂ ಪ್ರಕೃತಿ ತಮ್ಮ ವಿಶೇಷ ನಡವಳಿಕೆಗಳ ಕಾರಣದಿಂದ ಸದಾಕಾಲ ನಮ್ಮನ್ನು ಅಚ್ಚರಿಗೆ ದೂಡುತ್ತವೆ. ಕ್ಯಾಮರಾದಲ್ಲಿ ಸೆರೆಯಾದ ಪ್ರಕೃತಿಯ ಕೆಲ ವೈವಿಧ್ಯ ವೈಚಿತ್ರ್ಯಗಳು ಹಾಗೂ ಪ್ರಾಣಿಗಳ ವಿಶೇಷವೆನಿಸುವ ಕೆಲ ನಡವಳಿಕೆಗಳು ನಮ್ಮನ್ನು ಅವುಗಳನ್ನು ಕುತೂಹಲದಿಂದ ಮತ್ತಷ್ಟು ಆಸಕ್ತಿಯಿಂದ ನೋಡುವಂತೆ ಮಾಡುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಸಾಕಷ್ಟು ವಿಶೇಷ ವೀಡಿಯೋಗಳು ಫೋಟೋಗಳು ಈಗಾಗಲೇ ವೈರಲ್ ಆಗಿವೆ. ಈಗ 20 ಸಿಂಹಗಳಿರುವ ಹಿಂಡೊಂದು ಜೊತೆಯಾಗಿ ನದಿ ಪಕ್ಕ ಬಂದು ಒಟ್ಟಿಗೆ ನೀರು ಕುಡಿಯುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಪ್ರಾಣಿ ಪ್ರಪಂಚದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ನಮಗೆ ಮನುಷ್ಯರಿಗೆ ಒಬ್ಬೊಬ್ಬರಿಗೆ ಒಂದೊಂದು ಸಮಯದಲ್ಲಿ ಬಾಯಾರಿಕೆಯಾಗುತ್ತದೆ. ಎಲ್ಲರೂ ಒಟ್ಟಿಗೆ ಒಂದೇ ಸಮಯದಲ್ಲಿ ನೀರು ಕುಡಿಯಲು ಸಾಧ್ಯವೇ ಇಲ್ಲ, ಮರಳುಗಾಡಿನಲ್ಲಿ ಒಟ್ಟಿಗೆ ಜೊತೆಯಾಗಿ ಸಾಗಿದ ಸಂದರ್ಭದಲ್ಲೇನಾದರೂ ಹೀಗೆ ಒಟ್ಟಿಗೆ ಬಾಯಾರಿಕೆ ಆಗಲು ಬಹುದು. ಆದರೆ ಇಲ್ಲಿ ಪ್ರಾಣಿಗಳು ಏಕಕಾಲಕ್ಕೆ ಜೊತೆಯಾಗಿ ನೀರು ಕುಡಿಯುವುದು ಅಚ್ಚರಿ ಮೂಡಿಸಿದೆ. 

Latest Videos

ಮೇಲೆರಗಿದ ಸಿಂಹ: ಪ್ರಾಣಕ್ಕಾಗಿ ಹಸುವಿನ ಕಾದಾಟ, ರೈತನ ಸಾಥ್: ವೀಡಿಯೋ ವೈರಲ್

ವೀಡಿಯೋದಲ್ಲೇನಿದೆ, 

ಅಂದಹಾಗೆ ಈ ವೀಡಿಯೋವನ್ನು ದಕ್ಷಿಣ ಆಫ್ರಿಕಾದ ಮಲಾಮಲಾ ಗೇಮ್ ರಕ್ಷಿತಾರಣ್ಯದಲ್ಲಿ ಸೆರೆ ಹಿಡಿಯಲಾಗಿದೆ. ಈ ಸಂರಕ್ಷಿತಾರಣ್ಯದಲ್ಲಿ ಸಫಾರಿ ಹೊರಟ ಪ್ರವಾಸಿಗರಿಗೆ ಈ ಅದ್ಭುತ ದೃಶ್ಯ ಕಾಣಲು ಸಿಕ್ಕಿದೆ. ಈ ರಕ್ಷಿತಾರಣ್ಯದ ಮಧ್ಯೆ ಹರಿಯುವ ಸ್ಯಾಂಡ್ ನದಿಯ ತೀರಕ್ಕೆ ಒಬ್ಬೊಬ್ಬರೇ ಸಾಲಾಗಿ ಬರುವ ಸಿಂಹಗಳು  ನದಿ ತೀರದಲ್ಲಿ ಸಾಲಾಗಿ ಬಾಗಿ ಕುಳಿತು ನೀರು ಕುಡಿಯುತ್ತವೆ. ಈ ಮನೋರಮಣೀಯ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಈ ವೀಡಿಯೋವನ್ನು  LatestSightings.com.ಎಂಬ ವೆಬ್‌ಸೈಟ್‌ ಸ್ಥಾಪಕ ಸಿಇಒ ನಡವ್ ಒಸ್ಸೆಂಡ್ರಿವರ (Nadav Ossendryver) ಪೋಸ್ಟ್ ಮಾಡಿದ್ದು, 1.58 ಸೆಕೆಂಡ್‌ಗಳ ಈ ವೀಡಿಯೋವನ್ನು ಸಾವಿರಾರು ಜನ ಲೈಕ್ ಮಾಡಿದ್ದು, ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. 

ಸಿಂಹದ ದಾಳಿಯಿಂದ ಕಂದನ ರಕ್ಷಿಸಿದ ಎಮ್ಮೆ... ವಿಡಿಯೋ ವೈರಲ್

ವೀಡಿಯೋ ಶೇರ್ ಮಾಡಿ ನಡವ್ ಹೇಳಿದ್ದಿಷ್ಟು

ಇದು ಪ್ರಸಿದ್ಧವಾದ ಮಲಾಮಾಲಾ ಗೇಮ್ ರಿಸರ್ವ್‌ನಲ್ಲಿ ಸಫಾರಿಗೆ ಹೊರಟ ನಮ್ಮ ಕೊನೆಯ ಮುಂಜಾನೆಯಾಗಿತ್ತು.  ನಿಧಾನವಾಗಿ ಪ್ರಾರಂಭವಾದ ಈ ಸಫಾರಿಯಲ್ಲಿ ನಾವು ಚಿರತೆಗಾಗಿ ಹುಡುಕಾಡುತ್ತಿದ್ದೆವು. ನಾವು ಕ್ಯಾಂಪ್‌ಗೆ ಹಿಂತಿರುಗುತ್ತಿದ್ದಂತೆ ಏನೋ ಅನಿರೀಕ್ಷಿತವಾದ ದೃಶ್ಯವೊಂದು ಕಾಣಿಸಿತು. ಮರಳಿನ ನದಿಯಲ್ಲಿ ಆನೆಗಳ ಹಿಂಡೊಂದು ಆಟವಾಡುವುದು ಕಾಣಿಸಿತು. ಇದು ಸಫಾರಿಯಲ್ಲಿ ಸಾಮಾನ್ಯ ದೃಶ್ಯವಾಗಿದ್ದರೂ ಸಹ, ನಾವು ಆನೆಗಳ ಆಟವನ್ನು ವೀಕ್ಷಿಸಲು ಅಲ್ಲೇ ನಿಂತೆವು. ಇದು ನಮ್ಮ ಕೊನೆಯ ದಿನವಾಗಿದ್ದರಿಂದ ಇದೊಂದೆ ದಿನದಲ್ಲಿ ಇನ್ನೂ ವಿಶೇಷಗಳನ್ನು ನೋಡಿ ಮುಗಿಸಬೇಕಿತ್ತು.

ಅಷ್ಟರಲ್ಲಿ ಈ ಸಂದರ್ಭದ ಸ್ಕ್ರಿಫ್ಟ್ ಬರೆದಂತೆ ಹಿಂಭಾಗದಲ್ಲಿ ಚಲಿಸುವ ಸದ್ದು ಕೇಳಿಸಿತ್ತು. ಆನೆಗಳ ಹಿಂದೆ ಮೊದಲು ಎರಡು ಕಿವಿಗಳು ಕಾಣಿಸಿಕೊಂಡವು. ಅದು ಸಿಂಹ ಎಂಬುದು ನಮಗೆ ತಕ್ಷಣ ತಿಳಿಯಿತು. ಆ ಸಿಂಹವೂ ಮೇಲಿನಿಂದ ಇಳಿದು ಬಂದು ನಮ್ಮೆದುರೇ ನೀರು ಕುಡಿಯಿತು. ನಾವು ತೀರಕ್ಕೆ ಮರಳಿ ಅಲ್ಲೇ ವಿಶ್ರಮಿಸುತ್ತಿದ್ದರೆ, ಒಂದಾದ ನಂತರ ಒಂದರಂತೆ 20 ಸಿಂಹಗಳು ನದಿ ತೀರದಲ್ಲಿ ಬಂದು ನೀರು ಕುಡಿಯಲು ಶುರು ಮಾಡಿದವು ಎಂದು ಅವರು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕ್ಯಾಮರಾದಲ್ಲಿ ಸೆರೆಯಾದ ಸಿಂಹಗಳ ಈ ಅದ್ಭುತ ದೃಶ್ಯ ಅನೇಕರ ಮೆಚ್ಚುಗೆ ಗಳಿಸಿದೆ. ಅನೇಕರು ಅದೃಷ್ಟವಂತರು ನೀವೆ ಎಂದು ಕಾಮೆಂಟ್ ಮಾಡಿದ್ದಾರೆ. 
 

click me!