Texas Shooting: ಮೊದಲು ತನ್ನ ಅಜ್ಜಿಗೆ ಗುಂಡಿಕ್ಕಿದ ದಾಳಿಕೋರ, ನಂತರ ಶಾಲೆಗೆ ತೆರಳಿ ಗುಂಡಿನ ಮಳೆಗೆರೆದಿದ್ದ!

Published : May 25, 2022, 09:27 AM ISTUpdated : May 25, 2022, 10:57 AM IST
Texas Shooting: ಮೊದಲು ತನ್ನ ಅಜ್ಜಿಗೆ ಗುಂಡಿಕ್ಕಿದ ದಾಳಿಕೋರ, ನಂತರ ಶಾಲೆಗೆ ತೆರಳಿ ಗುಂಡಿನ ಮಳೆಗೆರೆದಿದ್ದ!

ಸಾರಾಂಶ

ಟೆಕ್ಸಾಸ್‌ನ ಉವಾಲ್ಡೆ ನಗರದಲ್ಲಿ ಗುಂಡಿನ ದಾಳಿ ನಡೆದಿದೆ. ಇಲ್ಲಿ ರಾಬ್ ಎಲಿಮೆಂಟರಿ ಸ್ಕೂಲ್ ನಲ್ಲಿ 18 ವರ್ಷದ ದಾಳಿಕೋರ ಸಾಲ್ವಡಾರ್ ರಾಮೋಸ್ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ 18 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೂವರು ಶಿಕ್ಷಕರು ಕೂಡ ಪ್ರಾಣ ಕಳೆದುಕೊಂಡಿದ್ದು, ದಾಳಿಕೋರ ಕೂಡ ಸಾವನ್ನಪ್ಪಿದ್ದಾನೆ. ಸಾಲ್ವಡಾರ್ ರಾಮೋಸ್ ಉವಾಲ್ಡೆ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ.

ಟೆಕ್ಸಾಸ್ (ಮೇ.25): ಅಮೆರಿಕದ ಟೆಕ್ಸಾಸ್ ನ (Texas Shooting) ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಮಯ ಕಳೆದಂತೆ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಲಿವೆ. ಇದರ ನಡುವೆ ದಾಳಿಗೆ ಕಾರಣನಾಗಿದ್ದ 18 ವರ್ಷದ ದಾಳಿಕೋರ ಸಾಲ್ವಡಾರ್ ರಾಮೋಸ್ (salvador ramos ) ಬಗ್ಗೆ ಸಾಕಷ್ಟು ಮಾಹಿತಿಗಳು ಬರುತ್ತಿವೆ. ಶಾಲೆಯಲ್ಲಿ ಗುಂಡಿನ ದಾಳಿ ಮಾಡುವ ಮುನ್ನ ರಾಮೋಸ್, ಮನೆಯಲ್ಲಿ ತನ್ನ ಅಜ್ಜಿಗೆ (grandmother) ಗುಂಡಿಕ್ಕಿ ಬಂದಿದ್ದ ಎಂದು ಟೆಕ್ಸಾಸ್ ಗವರ್ನರ್ ಹೇಳಿದ್ದಾರೆ.

ಇನ್ನು ಘಟನೆಯೆ ಬಗ್ಗೆ ದುಃಖ ವ್ಯಕ್ತಪಡಿಸಿರುವ ಅಧ್ಯಕ್ಷ ಜೋ ಬಿಡೆನ್ (Joe Biden), ದೇವರ ಹೆಸರಿನಲ್ಲಿ ಗನ್ ಲಾಬಿ ವಿರುದ್ಧ ಯಾವಾಗ ಎದುರು ನಿಲ್ಲುತ್ತೇವೆ ಎಂದು ಒಂದು ರಾಷ್ಟ್ರವಾಗಿ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

"

ಟೆಕ್ಸಾಸ್‌ನ ಉವಾಲ್ಡೆ ನಗರದಲ್ಲಿ ಗುಂಡಿನ ದಾಳಿ ನಡೆದಿದೆ. ಇಲ್ಲಿ ರಾಬ್ ಎಲಿಮೆಂಟರಿ ಸ್ಕೂಲ್ ನಲ್ಲಿ 18 ವರ್ಷದ ದಾಳಿಕೋರ  ಸಾಲ್ವಡಾರ್ ರಾಮೋಸ್ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ 18 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೂವರು ಶಿಕ್ಷಕರು ಕೂಡ ಪ್ರಾಣ ಕಳೆದುಕೊಂಡಿದ್ದು, ದಾಳಿಕೋರ ಕೂಡ ಸಾವನ್ನಪ್ಪಿದ್ದಾನೆ. ಸಾಲ್ವಡಾರ್ ರಾಮೋಸ್ ಉವಾಲ್ಡೆ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.

ದಾಳಿಕೋರನ ಬಗ್ಗೆ ದೊಡ್ಡ ಮಾಹಿತಿ ಬಹಿರಂಗವಾಗಿದೆ. ಸಲ್ವಾಡಾರ್ ರಾಮೋಸ್ ರಾಬ್ ಪ್ರಾಥಮಿಕ ಶಾಲೆಗೆ ಹೋಗುವ ಮೊದಲು ತನ್ನ ಅಜ್ಜಿಯ ಮೇಲೂ ಗುಂಡು ಹಾರಿಸಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಗುಂಡು ಹಾರಿಸಿದ ನಂತರ ಅಜ್ಜಿಯನ್ನು ಸ್ಯಾನ್ ಆಂಟೋನಿಯೊದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಜ್ಜಿಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಸಲ್ವಡಾರ್ ರಾಮೋಸ್ ಬಳಿಕ, ಶಾಲೆಗೆ ಆಗಮಿಸಿ ಚಿಕ್ಕ ಮಕ್ಕಳ ಮೇಲೆ ಗುಂಡಿನ ಮಳೆಗೆರೆದಿದ್ದಾರೆ.

ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಸ್ಕೂಲ್‌ನಲ್ಲಿ ಶೂಟಿಂಗ್‌ಗೆ ಮುನ್ನ ದಾಳಿಕೋರನ ಕುರಿತಾಗಿ ಎರಡು ಘಟನೆಗಳು ನಡೆದಿವೆ ಎಂದು ಟೆಕ್ಸಾಸ್ ಸಾರ್ವಜನಿಕ ಸುರಕ್ಷತೆ ಇಲಾಖೆ ವರದಿ ಮಾಡಿದೆ. ಮೊದಲು ಅವನು ತನ್ನ ಅಜ್ಜಿಗೆ ಗುಂಡು ಹಾರಿಸಿದ್ದ. ಬಳಿಕ ಶಾಲೆಯ ಬಳಿ ವಾಹನಕ್ಕೂ ಡಿಕ್ಕಿ ಹೊಡೆದಿದ್ದಾನೆ. ಅಧಿಕಾರಿಗಳ ಪ್ರಕಾರ, ದಾಳಿಕೋರನು ಶಾಲೆಗೆ ಪ್ರವೇಶಿಸುವ ಮೊದಲು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ. ಶಾಲೆ ಪ್ರವೇಶಿಸುವಾಗ ದಾಳಿಕೋರನ ಕೈಯಲ್ಲಿ ರೈಫಲ್ ಇತ್ತು. ಇದಾದ ಬಳಿಕ ಶಾಲೆಯ ವಿವಿಧ ತರಗತಿಗಳಿಗೆ ತೆರಳಿ ಗುಂಡು ಹಾರಿಸತೊಡಗಿದ. ಈ ಅಪಘಾತದಲ್ಲಿ ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ.

Texas Shooting: ಪ್ರಾಥಮಿಕ ಶಾಲೆಯಲ್ಲಿ ಯುವಕನಿಂದ ದಾಳಿ, ಅಮಾಯಕ 18 ಮಕ್ಕಳು ಬಲಿ!

ಬಿಡೆನ್ ಆಕ್ರೋಶ:
ಒಂದು ರಾಷ್ಟ್ರವಾಗಿ ಬಂದೂಕು ಲಾಬಿಯ ವಿರುದ್ಧ ಯಾವಾಗ ಎದುರು ನಿಲ್ಲುತ್ತೇವೆ ಎಂದು ದೇವರ ಹೆಸರಿನಲ್ಲಿ ಕೇಳಿಕೊಳ್ಳಬೇಕಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ದೇಶದ ಪ್ರತಿಯೊಬ್ಬ ಪೋಷಕರ ನೋವನ್ನು ಕಾರ್ಯರೂಪಕ್ಕೆ ತರುವ ಸಮಯ ಇದಾಇದೆ. ಈ ದೇಶದ ಪ್ರತಿಯೊಬ್ಬ ಚುನಾಯಿತ ಅಧಿಕಾರಿಗೆ ನಾವು ಕಾರ್ಯನಿರ್ವಹಿಸುವ ಸಮಯ ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ. ಇಂದು ಅನೇಕ ಪೋಷಕರು ತಮ್ಮ ಮಕ್ಕಳನ್ನು ಮತ್ತೆ ನೋಡಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ನೆನೆಸಿಕೊಂಡರೆ ದುಃಖವಾಗುತ್ತದೆ ಎಂದು ಬಿಡೆನ್ ಹೇಳಿದ್ದಾರೆ.

ಕಲಾ ಉತ್ಸವ ವೇಳೆ ಶೂಟೌಟ್ , 20 ಜನರಿಗೆ ಗಾಯ: ಶಂಕಿತನ ಹತ್ಯೆ

2022ರಲ್ಲಿಯೇ 212 ಪ್ರಕರಣ:
ಅಮೆರಿಕದಲ್ಲಿ 2022ರ ವರ್ಷವೊಂದರಲ್ಲಿಯೇ ಈವರೆಗೂ 212 ಸಾಮೂಹಿಕ ಶೂಟಿಂಗ್ ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಅಮೆರಿಕದಲ್ಲಿ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ವ್ಯಾಪಕವಾಗಿ ಏರಿಕೆ ಕಾಣುತ್ತಿದೆ. ಗನ್ ವಯಲೆನ್ಸ್ ಆರ್ಕೈವ್ ಪ್ರಕಾರ, 2022 ರಲ್ಲಿ ಕನಿಷ್ಠ 212 ಸಾಮೂಹಿಕ ಗುಂಡಿನ ಘಟನೆಗಳು ನಡೆದಿವೆ. ಜಿವಿಎ ಪ್ರಕಾರ, ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ ಅಥವಾ ಗಾಯಗೊಂಡ ಘಟನೆಗಳನ್ನು ಸಾಮೂಹಿಕ ಗುಂಡಿನ ದಾಳಿಯಲ್ಲಿ ಸೇರಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!