ಐಪಿಇಎಫ್‌ ಒಪ್ಪಂದ ‘ಆರ್ಥಿಕ ನ್ಯಾಟೋ’: ಚೀನಾ ಕಿಡಿ

Published : May 25, 2022, 07:48 AM IST
ಐಪಿಇಎಫ್‌ ಒಪ್ಪಂದ ‘ಆರ್ಥಿಕ ನ್ಯಾಟೋ’: ಚೀನಾ ಕಿಡಿ

ಸಾರಾಂಶ

* 13 ದೇಶಗಳು ಮಾಡಿಕೊಂಡಿದ್ದ ಸಮೃದ್ಧಿಗಾಗಿ ಇಂಡೋ-ಪೆಸಿಫಿಕ್‌ ಆರ್ಥಿಕ ವೇದಿಕೆ * ಐಪಿಇಎಫ್‌ ಒಪ್ಪಂದಕ್ಕೆ ಚೀನಾ ವಿರೋಧ * ಐಪಿಇಎಫ್‌ ಒಪ್ಪಂದ ‘ಆರ್ಥಿಕ ನ್ಯಾಟೋ’: ಚೀನಾ ಕಿಡಿ

ಬೀಜಿಂಗ್‌(ಮೇ.25): ಆರ್ಥಿಕ ಸಹಕಾರಕ್ಕಾಗಿ ಭಾರತ ಸೇರಿದಂತೆ 13 ದೇಶಗಳು ಮಾಡಿಕೊಂಡಿದ್ದ ಸಮೃದ್ಧಿಗಾಗಿ ಇಂಡೋ-ಪೆಸಿಫಿಕ್‌ ಆರ್ಥಿಕ ವೇದಿಕೆ (ಐಪಿಇಎಫ್‌)ನ್ನು ಚೀನಾ ವಿರೋಧಿಸಿದೆ. ಇಂಡೋ ಪೆಸಿಫಿಕ್‌ ವಲಯದಲ್ಲಿ ತನ್ನ ಪ್ರಾಬಲ್ಯಕ್ಕೆ ಎದುರಾದ ಅಪಾಯ ಎಂದು ಭಾವಿಸಿರುವ ಚೀನಾ ಇದನ್ನು ‘ಆರ್ಥಿಕ ನ್ಯಾಟೋ’ ಎಂದು ಕರೆದಿದೆ.

ಈ ಒಪ್ಪಂದ ಮಾಡಿಕೊಂಡ ದಿನವೇ ಚೀನಾ ಇಂಡೋ-ಪೆಸಿಫಿಕ್‌ ಪ್ರದೇಶಕ್ಕೆ ಹೊಸ ಯೋಜನೆ ಮತ್ತು ಹೂಡಿಕೆ, ಹೆಚ್ಚಿನ ಸಹಕಾರವನ್ನು ಘೋಷಿಸಿದೆ.

‘ಏಷ್ಯಾ ಪೆಸಿಫಿಕ್‌ ಎಂಬುದು ಚೀನಾ ನೆಲೆಗೊಂಡಿರುವ, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ಈ ವಲಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ರಕ್ಷಿಸಬೇಕು. ಜಾಗತಿಕ ಭದ್ರತೆಯನ್ನು ಹೆಚ್ಚು ಮಾಡಲು ಏಷ್ಯಾ-ಪೆಸಿಫಿಕ್‌ ರಾಷ್ಟ್ರಗಳೊಂದಿಗೆ ಸಹಕಾರ ಮಾತುಕತೆಯಾಡಲು ಚೀನಾ ಸಿದ್ಧವಾಗಿದೆ’ ಎಂದು ವಿದೇಶಾಂಗ ಸಚಿವ ವಾಂಗ್‌ ಯಿ ಹೇಳಿದ್ದಾರೆ.

ರಕ್ಷಣೆ, ವ್ಯಾಪಾರ, ತಂತ್ರಜ್ಞಾನದಲ್ಲಿ ಸಹಕಾರ: ಭಾರತ-ಜಪಾನ್‌ ಸಮ್ಮತಿ

ರಕ್ಷಣಾ ಉಪಕರಣಗಳ ಉತ್ಪಾದನೆ, ವ್ಯಾಪಾರ ಮತ್ತು ತಂತ್ರಜ್ಞಾನದಲ್ಲಿ ಉಭಯ ದೇಶಗಳ ಸಹಕಾರವನ್ನು ಮುಂದುವರೆಸುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಚರ್ಚೆ ಯಶಸ್ವಿಯಾಗಿದೆ.

ಕ್ವಾಡ್‌ ಸಭೆಯಲ್ಲಿ ಭಾಗವಹಿಸಲು ಜಪಾನ್‌ ಪ್ರವಾಸದಲ್ಲಿರುವ ಮೋದಿ, ಕಿಶಿದಾ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ವಿನಿಮಯ ಚಲನೆಯನ್ನು ಕಾಯ್ದುಕೊಳ್ಳಬೇಕಾದ ಮಹತ್ವವನ್ನು ಒತ್ತಿ ಹೇಳಿದರು. ಭಾರತದಲ್ಲಿ ರಕ್ಷಣಾ ಉತ್ಪದಾನೆ, ಕೌಶಲ್ಯ ಅಭಿವೃದ್ಧಿ, ವ್ಯಾಪಾರ ಮತ್ತು ತಂತ್ರಜ್ಞಾನ ಪಾಲುದಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳು ತಮ್ಮ ಸಹಕಾರವನ್ನು ಮುಂದುವರೆಸುವ ಕುರಿತಾಗಿ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ಹೇಳಿದರು.

ಮಾಜಿ ಪ್ರಧಾನಿಗಳ ಭೇಟಿ, ಮಾತುಕತೆ:

ಜಪಾನ್‌ ಮಾಜಿ ಪ್ರಧಾನಿಗಳಾದ ಯೋಶಿಹಿಡೆ ಸುಗಾ, ಯೋಶಿರೋ ಮೋರಿ ಮತ್ತು ಶಿಂಜೋ ಅಬೆ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟುಬಲಪಡಿಸುವ ಕುರಿತಾಗಿ ಮಾತುಕತೆ ನಡೆಸಿದರು. ಭಾರತ ಜಪಾನ್‌ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವ, ಶಾಂತಿಯುತ ಮತ್ತು ಸ್ಥಿರ ಇಂಡೋ ಪೆಸಿಫಿಕ್‌ ದೃಷ್ಟಿಯಿಂದ ಭಾರತ ಮತ್ತು ಜಪಾನ್‌ನ ನಾಯಕರುಗಳು ಮಾತುಕತೆ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ